ನಟ ದರ್ಶನ್ ವಿಷ್ಣು ದಾದಾ ಅವರನ್ನ ಕಂಡ್ರೆ ಹೆದರುತ್ತಿದ್ದರಂತೆ ಯಾವ ವಿಷಯಕ್ಕೆ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ ಡಿ ಬಾಸ್ ಇಂದು ಪ್ರಪಂಚವೇ ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಅದು ಅವರ ಪರಿಶ್ರಮದ ಫಲ. ಇಂದು ಲಕ್ಷಾಂತರ ಕನ್ನಡಿಗರ ಮನಸ್ಸು ಗೆದ್ದಿರುವ ಡಿ ಬಾಸ್ ಅಕ್ಷರ ಕ್ರಾಂತಿ ಮಾಡೋದಕ್ಕೆ ಹೊರಟಿದ್ದಾರೆ.

ಹೌದು, ನಟಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಕ್ರಾಂತಿ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ದರ್ಶನ್ ಅವರ ಅಭಿಮಾನಿಗಳೇ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಮುಂದಾಗಿದ್ದು ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಈ ವರೆಗೆ ಅಭಿನಯಿಸಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿರುವ ಪಾತ್ರವನ್ನು ನಿಭಾಯಿಸಿರುವ ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸಂದರ್ಶನವನ್ನು ಕೂಡ ನೀಡಿದ್ದರು ದರ್ಶನ್. ಆ ಸಮಯದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ದರ್ಶನ್ ಅವರು ವಿಷ್ಣುವರ್ಧನ್ ಅವರ ಬಗ್ಗೆಯೂ ಕೂಡ ಮಾತನಾಡಿದ್ದಾರೆ.

ಈ ಬಂಧನ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ದರ್ಶನ್ ಕೂಡ ಅಭಿನಯಿಸಿದ್ದರು. ವಿಷ್ಣುವರ್ಧನ್ ಅವರ ಜೊತೆಗೆ ಕೆಲಸ ಮಾಡಿದ ಸಾರ್ಥಕ ಮನೋಭಾವ ದರ್ಶನ್ ಅವರಲ್ಲಿ ಇಂದಿಗೂ ಇದೆ. ದರ್ಶನ್ ಅವರಿಗೆ ವಿಷ್ಣುವರ್ಧನ್ ಅವರಿಂದ ನೀವು ಕಲಿತ ಪಾಠ ಏನು ಎಂದು ಸಂದರ್ಶನ ಕಾರರು ಪ್ರಶ್ನೆ ಮಾಡಿದ್ದರು. ‘ ನಾನು ವಿಷ್ಣುವರ್ಧನ್ ಅವರನ್ನ ಬಹಳ ಮೇಲೆ ಇಟ್ಟಿದ್ದೇನೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಸೂಟ್ ಧರಿಸುತ್ತಾರೆ. ಆದರೆ ಅದು ನಿಜವಾಗಿ ಸೂಟ್ ಆಗೋದು ವಿಷ್ಣುವರ್ಧನ್ ಅವರಿಗೆ ಮಾತ್ರ. ಅವರು ಸೂಟ್ ನಲ್ಲಿ ಅಷ್ಟು ಅದ್ಭುತವಾಗಿ ಕಾಣಿಸುತ್ತಾರೆ. ನಿಜ ಹೇಳಬೇಕು ಅಂದ್ರೆ ಅವರ ಉಸಿರಿಗೂ ನಾವು ಸಮಾನರಲ್ಲ ಅಂತಹ ಮಹಾನ್ ವ್ಯಕ್ತಿ ಅವರು. ಇನ್ನು ಅವರಿಂದ ನಾನು ಕಲಿತಿರುವ ಮುಖ್ಯ ವಿಷಯ ಟೈಮ್ ಸೆನ್ಸ್. ಹೇಳಿದ ಟೈಮ್ ಗೆ ಸರಿಯಾಗಿ ಶೂಟಿಂಗ್ ಸೆಟ್ ಗೆ ಬರುತ್ತಿದ್ದ ವಿಷ್ಣುವರ್ಧನ್ ಅವರಿಂದ ನಾನು ಅದನ್ನ ಕಲಿತಿದ್ದೇನೆ ವಿಷ್ಣು ಸರ್ 9:00 ಬರ್ತಾರೆ ಅಂದ್ರೆ ನಾನು ಎಂಟುವರೆಗೆ ಹೋಗಿ ಕುಳಿತಿರುತ್ತಿದ್ದೆ. ಅವರ ಪಂಕ್ಷುವ್ಯಾಲಿಟಿ ಎಲ್ಲರೂ ಅಳವಡಿಸಿಕೊಳ್ಳುವಂತದ್ದು’ ಎಂದು ವಿಷ್ಣುವರ್ಧನ್ ಅವರ ಬಗ್ಗೆ ದರ್ಶನ್ ಹೇಳಿದ್ದಾರೆ.

ನಟ ವಿಷ್ಣುವರ್ಧನ್ ಒಬ್ಬ ಅದ್ಭುತ ಪ್ರತಿಭೆ ಜೊತೆಗೆ ಒಬ್ಬ ಅದ್ಭುತ ವ್ಯಕ್ತಿ ಕೂಡ ಹೌದು. ಹಲವರಿಗೆ ದಾರಿದೀಪ ಆಗಿದ್ದ ನಟ ವಿಷ್ಣುವರ್ಧನ್ ಅವರನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಇಂದು ಅದೆಷ್ಟು ಕಲಾವಿದರಿಗೆ ವಿಷ್ಣು ದಾದಾ ಮಾದರಿಯಾಗಿದ್ದಾರೆ. ನಟ ದರ್ಶನ್ ಕೂಡ ಇಂತಹ ದಿಗ್ಗಜ ನಟರ ಜೊತೆ ಅಭಿನಯಿಸಿ, ಪಳಗಿ ಇಂದು ಸ್ಟಾರ್ ನಟ ಎನಿಸಿಕೊಂಡಿದ್ದಾರೆ.

https://youtu.be/FKZ9s1T2keE

Leave a Comment

error: Content is protected !!