ಹನುಮನ ಅವತಾರದಲ್ಲಿ ಡಿ ಬಾಸ್ ವೈರಲ್ ಆಯ್ತು ಫೋಟೋ. ಹೊಸ ಸಿನಿಮಾನಾ?

D Boss in Hanuman’s avatar went viral ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಕ್ರಾಂತಿ ಸಿನಿಮಾದ ಬಿಡುಗಡೆಯಲ್ಲಿ ( Release ) ಹಾಗೂ ಅದಾದ ನಂತರ ಅವರ 56ನೇ ಸಿನಿಮಾದ ಚಿತ್ರೀಕರಣ ಕಾರ್ಯ ದಲ್ಲಿ ನಿರತರಾಗಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ಬಹು ಭಾಷೆಗಳಲ್ಲಿ (Multi Language ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು ಇದಾದ ನಂತರ ಯಾವ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಲಿದ್ದಾರೆ ಎನ್ನುವುದಾಗಿ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ ಎಂದು ಹೇಳಬಹುದಾಗಿದೆ. ಇನ್ನು ಡಿ ಬಾಸ್ ಅವರ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ( social Media ) ಹಲವಾರು ವಿಚಾರಗಳು ಸದ್ದು ಮಾಡುತ್ತಲೇ ಇರುತ್ತವೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಂತೆ ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹನುಮಂತನ ಲುಕ್ ನಲ್ಲಿ ಇರುವಂತಹ ಅಭಿಮಾನಿಗಳು ಎಡಿಟ್ ( Edit ) ಮಾಡಿರುವಂತಹ ಫೋಟೋ ದೊಡ್ಡಮಟ್ಟದಲ್ಲಿ ಓಡಾಡುತ್ತಿದೆ. ಮೊದಮೊದಲಿಗೆ ಇದೇನಪ್ಪ ದರ್ಶನ್ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆಯಾ ಎಂಬುದಾಗಿ ಅಭಿಮಾನಿಗಳು ಕನ್ಫ್ಯೂಸ್ ( confused ) ಆಗಿದ್ದರು. ಆದರೆ ಕೊನೆಗೂ ಇದರ ಕುರಿತಂತೆ ಇದು ಅಭಿಮಾನಿಗಳು ಮಾಡಿರುವ ಎಡಿಟೆಡ್ ಫೋಟೋ ಎನ್ನುವುದಾಗಿ ಹೊರ ಬಂದಿದೆ. ಆದರೆ ಈ ಫೋಟೋ ನೋಡಿದಾಗಿನಿಂದ ಅಭಿಮಾನಿಗಳಲ್ಲಿ ಹೊಸ ಅಲೆ ಎದ್ದಿದೆ.

ವಿನೋದ್ ರಾಜ್ ನಿಮ್ಮ ಮಗನ ಎಂಬ ಪ್ರಶ್ನೆಗೆ ಅಣ್ಣಾವ್ರು ನೀಡಿದ್ದ ಉತ್ತರ ಏನು ಗೊತ್ತಾ, ಕೊನೆಗೂ ಸಿಕ್ತು ನೋಡಿ.

ಈಗಾಗಲೇ ಪೌರಾಣಿಕ ( Mythological )ಹಾಗೂ ಐತಿಹಾಸಿಕ (Historical ) ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಉಳಿದ ಕನ್ನಡ ಸಿನಿಮಾ ರಸಿಕರು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ. ಖಂಡಿತವಾಗಿ ಹನುಮಾನ ಪಾತ್ರದಲ್ಲಿ ದರ್ಶನ್ ಅವರು ಕಾಣಿಸಿಕೊಂಡರೆ ಇಡೀ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಸುವರ್ಣ ಘಳಿಗೆ ಆಗಿರಲಿದೆ ಎಂಬುದಾಗಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನೀವು ಕೂಡ ದರ್ಶನ್ ಅವರ ಕಟೌಟ್ ನೋಡಿದರೆ ಖಂಡಿತವಾಗಿ ಇದನ್ನೇ ಅಭಿಪ್ರಾಯಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!