Chandan Shetty and Nivedita Gowda gave good news. Watch the viral video. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆಗಿರುವ ಚಂದನ್ ಶೆಟ್ಟಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ (Biggboss) ನಲ್ಲಿ ಪರಿಚಿತರಾದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿ ಈಗಾಗಲೇ ಹಲವಾರು ವರ್ಷಗಳೇ ಕಳೆದು ಹೋಗಿವೆ. ಇವರಿಬ್ಬರ ಮದುವೆ ಹೇಗೆ ನಡೆದಿದೆ ಎಂಬುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ (Propose) ಮಾಡುತ್ತಾರೆ. ನಂತರ ಇವರಿಬ್ಬರು ಮನೆಯವರ ಸಮ್ಮುಖದಲ್ಲಿ ಸರಳವಾಗಿಯೇ ಮದುವೆಯಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಈ ಜೋಡಿ ಯಾವುದೇ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲದಂತೆ ಇದ್ದಾರೆ ಎಂದು ಹೇಳ ಬಹುದಾಗಿದೆ.
ಈ ಜೋಡಿ ಇತ್ತೀಚಿಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಇವರು ಈಗ ತಮ್ಮ ಜೀವನದ ಪ್ರಮುಖ ಸುದ್ದಿಯನ್ನು ಕೂಡ ಪರೋಕ್ಷವಾಗಿ (Indirectly) ಹಂಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.
ಹೌದು ಮಿತ್ರರೇ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾದರ್ (Father) ಎನ್ನುವ ಪದವನ್ನು ವಿಭಿನ್ನ ರೀತಿಯಲ್ಲಿ ಹೇಳುವಂತಹ ಪ್ರಯತ್ನ ಮಾಡುವ ಮೂಲಕ ಚಂದನ್ ಶೆಟ್ಟಿ ತಂದೆ ಆಗುತ್ತಾರೆ ಎನ್ನುವ ಅರ್ಥದಲ್ಲಿ ವಿಡಿಯೋ ಮಾಡಿದ್ದಾರೆ. ಹಲವಾರು ಜನರು ಇದೇ ನಂಬಿಕೆಯಲ್ಲಿ ಇದ್ದರೆ ಇನ್ನು ಕೆಲವರು ಯಾವುದೋ ಹೊಸ ಫಿಲಂ ಅಥವಾ ಕಾರ್ಯಕ್ರಮದ ಪ್ರಮೋಷನ್ (Promotion) ಇರಬೇಕು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.