ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗನ ಸ್ಕೂಲ್ ಫೀಸ್ ಎಷ್ಟು ಗೊತ್ತಾ? ಏನ್ ಗುರು ಇಷ್ಟೊಂದಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ಕ್ರಾಂತಿ ತಂಡ ನಿನ್ನೆ ಪ್ರೆಸ್ ಮೀಟ್ ಮಾಡಿ ಇದೇ ಜನವರಿ 26ರಂದು ಕ್ರಾಂತಿ ಸಿನಿಮಾ ಅದ್ದೂರಿಯಾಗಿ ತೆರೆ ಕಾಣಲಿದೆ ಎಂಬ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಕೊನೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಿದ್ದ ಹಾಗೂ ಅವರು ವರ್ಷಗಳಿಂದ ಕೇಳಬೇಕು ಎಂಬುದಾಗಿ ಕಾತುರರಾಗಿದ್ದ ಸುದ್ದಿ ಅವರ ಕಿವಿಗೆ ಬಿದ್ದುಬಿಟ್ಟಿದೆ.

ಇನ್ನೂ ಇದೇ ಪ್ರೆಸ್ ಮೀಟ್ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾದ ಕುರಿತಂತೆ ಮಾತನಾಡುತ್ತಾ ನಾವು ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಹಾಗೂ ಪ್ರೈವೇಟ್ ಶಾಲೆಗಳ ಕುರಿತಂತೆ ಹಾಗೂ ಅವುಗಳ ವ್ಯತ್ಯಾಸದ ಕುರಿತಂತೆ ಅರ್ಥವತ್ತಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದೇವೆ ಎಂಬುದಾಗಿ ಕ್ರಾಂತಿ ಸಿನಿಮಾದ ಮೂಲ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಡಿ ಬಾಸ್ ನಾವು ಶಾಲೆಗೆ ಹೋಗುತ್ತಿದ್ದಾಗ 40 ರಿಂದ 60 ರೂಪಾಯಿ ಸ್ಕೂಲ್ ಕಟ್ಟುತ್ತಿದ್ದೇವೆ ಎಂಬುದಾಗಿ ಕೂಡ ನೆನಪಿಸಿಕೊಳ್ಳುತ್ತಾರೆ. ಆದರೆ ಈಗಿನ ಮಕ್ಕಳು ಲಕ್ಷಾಂತರ ರೂಪಾಯಿ ಸ್ಕೂಲ್ ಫೀಸ್ ಕಟ್ಟಿ ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂಬುದಾಗಿ ಡಿ ಬಾಸ್ ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್ ಅವರಿಗೆ ಕಟ್ಟುವಂತಹ ಸ್ಕೂಲ್ ಫೀಸ್ ಬೆಲೆಯನ್ನು ಕೂಡ ಬಹಿರಂಗಪಡಿಸುತ್ತಾರೆ.

Dboss

ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನನ್ನ ಮಗ ವಿನೀಶ್ ಸ್ಕೂಲ್ ಫೀಸ್ಗಾಗಿ ನಾನು ವರ್ಷಕ್ಕೆ 8 ಲಕ್ಷ ರೂಪಾಯಿ ಕಟ್ಟುತ್ತೇನೆ ಎಂಬುದಾಗಿ ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಕ್ರಾಂತಿ ಸಿನಿಮಾದ ಬಗ್ಗೆ ಕೂಡ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!