ಲ್ಯಾಂಬೋರ್ಗಿನಿ ಖರೀದಿಸಿದ ಬೆನ್ನಲ್ಲೇ ಹೆಲಿಕಾಪ್ಟರ್ ತಗೊಂಡ್ರಾ ಡಿ ಬಾಸ್? ಇದರ ಬೆಲೆ ಎಷ್ಟು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಬೆಲೆಯ ಕಾರುಗಳನ್ನು ಹೊಂದಿರುವ ನಟರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಡಿ ಬಾಸ್ ರವರು ದುಬಾರಿ ಬೆಲೆಯ ಕಾರುಗಳು ಹಾಗೂ ಸಾಕುಪ್ರಾಣಿಗಳನ್ನು ಹೊಂದುವ ವಿಚಾರದಲ್ಲಿ ಬೇರೆ ಎಲ್ಲಾ ನಟ ಹಾಗೂ ಸೆಲೆಬ್ರಿಟಿ ಗಳಿಗಿಂತ ಸದಾ ಕಾಲ ಮುಂದಿರುತ್ತಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಇತ್ತೀಚಿಗಷ್ಟೇ ಬರೋಬ್ಬರಿ ಹತ್ತರಿಂದ ಹನ್ನೆರಡು ಕೋಟಿ ರೂಪಾಯಿ ಮೌಲ್ಯದ ಲೇಟೆಸ್ಟ್ ಲ್ಯಾಂಬೋರ್ಗಿನಿ ಕಾರ್ ಅನ್ನು ಖರೀದಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಕ್ಕಿಂತ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಲ್ಯಾಂಬೋರ್ಗಿನಿಯಾ ಎರಡು ರೀತಿಯ ಕಾರ್ ಸೇರಿದಂತೆ ಇನ್ನೂ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ದುಬಾರಿ ಬೆಲೆಯ ಕಾರುಗಳು ಇದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರುಗಳ ಕಲೆಕ್ಷನ್ ಅನ್ನೇ ನಾವು ಲೆಕ್ಕ ಹಾಕಿ ನಿಂತರೆ ಸಾಕಷ್ಟು ಕೋಟಿ ರೂಪಾಯಿ ಬೆಲೆಬಾಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಂದರೆ ಯೂಟ್ಯೂಬ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿರುವ ಎಲ್ಲಾ ನೆಟ್ಟಿಗರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ರವರು ಹೆಲಿಕಾಪ್ಟರ್ ತಗೊಂಡ್ರಾ ಎನ್ನುವುದು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಮಿತ್ರರೇ ಈ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಆಪ್ತರೊಂದಿಗೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಹೆಲಿಕಾಪ್ಟರ್ ಮೂಲಕ ಹೋಗುತ್ತಿದ್ದದ್ದು ಕಂಡು ಬಂದಿದೆ.

ಮೂಲಗಳ ಮಾಹಿತಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೇರೆ ಯಾರದ್ದೋ ಪ್ರೈವೇಟ್ ಹೆಲಿಕಾಪ್ಟರ್ ನಲ್ಲಿ ಕಾರ್ಯಕ್ರಮಕ್ಕೆ ಹೋಗಲು ಈ ಹೆಲಿಕಾಪ್ಟರ್ ಅನ್ನು ಬಳಸಿರಬಹುದು ಎಂಬ ವಿಚಾರವೂ ಕೂಡ ಈಗ ಮೂಡಿ ಬರುತ್ತಿದೆ. ದರ್ಶನ್ ಅವರು ಹತ್ತಿದ ಈ ಹೆಲಿಕಾಪ್ಟರ್ ಬೆಲೆ 80 ಕೋಟಿ ರೂಪಾಯಿ. ಇದನ್ನ ದರ್ಶನ್ ಅವರು ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆದಿದ್ದಾರೆ. ಈ ಐಷಾರಾಮಿ ಹೆಲಿಕಾಪ್ಟರ್ ನ ಒಂದು ದಿನದ ಬಾಡಿಗೆ ಎರಡು ಲಕ್ಷ ರೂಪಾಯಿ. ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವನ್ನು ನೀವು ಕೂಡ ನೋಡಬಹುದಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!