ಕಷ್ಟ ಕಾಲದಲ್ಲಿ ಪುನೀತ್ ರಾಜ್‌ಕುಮಾರ್ ಒಂದು ಬ್ಯಾಗಲ್ಲಿ ಹಣ ಕೊಟ್ರಾ? ಗಾಳಿಸುದ್ದಿ ಹಬ್ಬಿಸಿದವರಿಗೆ ರಕ್ಷಕ್ ಬುಲೆಟ್‌ ಟಾಂಗ್!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಯಾವ ರೀತಿಯ ದೊಡ್ಡ ಮಟ್ಟದ ಕೊಡುಗೆಯನ್ನು ತಮ್ಮ ಸಂಪೂರ್ಣ ಜೀವಿತಾವಧಿಯಲ್ಲಿ ನೀಡಿದ್ದಾರೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಯಾಕೆಂದರೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದು ನಿಜ ಜೀವನದಲ್ಲಿ ಕೂಡ ಅವರನ್ನು ದೇವರೆಂಬುದಾಗಿ ಪೂಜಿಸುವವರು ಈಗಾಗಲೇ ಕರ್ನಾಟಕದಲ್ಲಿ ಸಾವಿರಾರು ಮಂದಿ ಇದ್ದಾರೆ ಎಂದು ಹೇಳಬಹುದಾಗಿದೆ.

ಇದಕ್ಕೆ ತಕ್ಕದಾದ ಉದಾಹರಣೆ ಎಂದರೆ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ನೋಡಲು ಕಂಠೀರವ ಸ್ಟೇಡಿಯಂಗೆ ಎಷ್ಟು ಲಕ್ಷ ಮಂದಿ ಬಂದಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಮಹಾತ್ಮ ಗಾಂಧಿಯವರನ್ನು ಬಿಟ್ಟರೆ ಅತ್ಯಂತ ಹೆಚ್ಚು ಜನರನ್ನು ನೋಡಲು ಬಂದಿದ್ದು ಪುನೀತ್ ರಾಜಕುಮಾರ್ ಅವರಿಗಾಗಿ ಎಂಬುದು ಈಗಾಗಲೇ ದಾಖಲಾಗಿರುವ ವಿಚಾರ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಬುಲೆಟ್ ಪ್ರಕಾಶ್ ಅವರ ಪುತ್ರನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಚಾರದ ಬಗ್ಗೆ ಈಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಹೌದು ಮಿತ್ರರೇ ಬುಲೆಟ್ ಪ್ರಕಾಶ್ ಅವರ ಪುತ್ರ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬುಲೆಟ್ ಪ್ರಕಾಶ್ ಅವರ ಮನೆಗೆ ಬಂದು 5 ಲಕ್ಷ ಇರುವಂತಹ ಬ್ಯಾಗನ್ನು ಇಟ್ಟು ಮನೆಗೆ ಹೋದ ನಂತರ ರಕ್ಷಕ್ ಮತ್ತೆ ಅಪ್ಪು ಅವರಿಗೆ ಕರೆ ಮಾಡಿ ಏನಿದು ಎಂಬುದಾಗಿ ಕೇಳಿದಾಗ ತೆಗೆದು ನೋಡು ಎಂದು ಹೇಳಿದಾಗ ರಕ್ಷಕ್ ತರದಾಗ 5 ಲಕ್ಷ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಳಿ ಸುದ್ದಿಯನ್ನು ಹರಿ ಬಿಟ್ಟಿದ್ದಾರೆ ಎಂಬುದಾಗಿ ಸುದ್ದಿ ಇದೆ.

ಇದರ ಬಗ್ಗೆ ಇತ್ತೀಚಿಗಷ್ಟೇ ಗುರು ಶಿಷ್ಯರು ಸಿನಿಮಾ ಬಿಡುಗಡೆಯಾದ ಸಂದರ್ಭದ ನಂತರ ಸಂದರ್ಶನ ಒಂದರಲ್ಲಿ ಇದು ನಿಜಕ್ಕೂ ಕೂಡ ಸುಳ್ಳಾದ ವಿಚಾರ ಸುಮ್ಮ ಸುಮ್ಮನೆ ಈ ರೀತಿಯ ಅಪವಾದಗಳನ್ನು ಅಥವಾ ಗಾಳಿ ಸುದ್ದಿಗಳನ್ನು ಹರಡಿಸುವುದು ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡಬಹುದು ಹೀಗಾಗಿ ಈ ರೀತಿ ಮಾಡಬೇಡಿ ಎಂಬುದಾಗಿ ಖಡಕ್ ಆಗಿ ರಿಪ್ಲೈ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!