ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಹಾಗೂ ಸುಧಾ ಮೂರ್ತಿ ಮಗಳು ಅಕ್ಷತಾ ಮೂರ್ತಿ ಅವರ ಆಸ್ತಿ ಎಷ್ಟಿದೆ ಗೊತ್ತಾ? ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ ಈಕೆ

ಸ್ನೇಹಿತರೆ ಕೊನೆಗೂ ಕೂಡ ನಮ್ಮನ್ನಾಳಿದ ಬ್ರಿಟಿಷರ ಪ್ರಧಾನಮಂತ್ರಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಬೋರಿಸ್ ಜಾನ್ಸನ್ ಅವರ ರಾಜೀನಾಮೆ ನಂತರ ಚುನಾವಣೆಯಲ್ಲಿ ರಿಷಿ ಸುನಕ್ ಮೊದಲಿಗೆ ಸೋಲುತ್ತಾರೆ. ಆದರೆ ಕೊನೆಗೂ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದ ಲಿಜ್ ಟ್ರಾಸ್ ರವರು ರಾಜೀನಾಮೆ ನೀಡುವ ನಂತರ 45 ದಿನಗಳ ಬಳಿಕ ಕೊನೆಗೂ ರಿಷಿ ಸುನಕ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಭಾರತೀಯರೆಲ್ಲರೂ ಕೂಡ ಸಂಭ್ರಮ ಪಡುವ ಹಾಗೆ ಮಾಡಿದ್ದಾರೆ.

ರಿಷಿ ಸುನಕ್ ಅವರಿಗೆ ಕೇವಲ ಭಾರತ ಮಾತ್ರವಲ್ಲದೆ ನಮ್ಮ ಕರ್ನಾಟಕದ ಸಂಪರ್ಕವೂ ಕೂಡ ಇದೆ. ಹೌದು ಮಿತ್ರರೇ ನಮ್ಮ ಕರ್ನಾಟಕದ ಹೆಮ್ಮೆಯ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗಳಾಗಿರುವ ಅಕ್ಷತಾ ಮೂರ್ತಿ ಅವರ ಗಂಡನೇ ರಿಷಿ ಸುನಕ್ ಆಗಿದ್ದಾರೆ. ಹೀಗಾಗಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಅಳಿಯ ದೂರದ ಬ್ರಿಟಿಷ್ ಸಾಮ್ರಾಜ್ಯದ ಪ್ರಧಾನಮಂತ್ರಿಯಾಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಈಗ ನಾವು ಮಾತನಾಡಲು ಹೊರಟಿರುವುದು ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗಳಾಗಿರುವ ರಿಶಿ ಸುನಕ್ ಅವರ ಪತ್ನಿ ಆಗಿರುವ ಅಕ್ಷತಾ ಮೂರ್ತಿ ಅವರ ಬಗ್ಗೆ. ಬ್ರಿಟನ್ ಪ್ರಧಾನ ಮಂತ್ರಿಯ ಪತ್ನಿಯ ಒಟ್ಟಾರೆ ಆಸ್ತಿ ಎಷ್ಟು ಎಂಬುದರ ಕುರಿತಂತೆ ನಿಮಗೆ ಈ ಲೇಖನಿಯಲ್ಲಿ ವಿವರವಾಗಿ ಹೇಳಲು ಹೊರಟಿದ್ದೇವೆ.

42 ವರ್ಷದ ಅಕ್ಷತಾ ಮೂರ್ತಿ ಅವರು ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದು ಇನ್ಫೋಸಿಸ್ ನಲ್ಲಿ ಆರೂವರೆ ಸಾವಿರ ಕೋಟಿ ರೂಪಾಯಿ ಮೌಲ್ಯದ ಶೇರನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಈ ಹಿಂದೆ ಬ್ರಿಟನ್ ರಾಣಿಯಾಗಿದ್ದ ಎಲಿಜಬೆತ್ || ರವರಿಗಿಂತ ಶ್ರೀಮಂತ ಮಹಿಳೆಯ ಎಂಬುದಾಗಿ ಲೆಕ್ಕ ಹಾಕಬಹುದಾಗಿದೆ. ರಿಷಿ ಸುನಕ್ ಅವರ ಪ್ರಧಾನಮಂತ್ರಿಯ ಅವಧಿಯಲ್ಲಿ ಭಾರತ ಹಾಗೂ ಯುಕೆ ನಡುವೆ ಸಂಬಂಧ ಉತ್ತಮವಾಗಿ ಮೂಡಿಬರಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!