ದಯವಿಟ್ಟು ಶೇರ್ ಮಾಡಿ ಗೆಳೆಯರೇ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಅದ್ಭುತ ಜೋಡಿಯೆನಿಸಿಕೊಂಡಿದ್ದಾರೆ. 2012ರಿಂದ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. 2018 ನವೆಂಬರ್ ತಿಂಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ವಿವಾಹವಾಗುವುದರ ಮೂಲಕ ಉತ್ತರ ಸಿಕ್ಕಂತಾಗಿತ್ತು.

ಈ ಜೋಡಿಗೆ ಫ್ಯಾನ್ ಫಾಲೋವರ್ಸ್ ತುಂಬಾನೇ ಇದ್ದಾರೆ.ರಾಮಲೀಲಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ‘ಅಬ್ಬಬ್ಬಾ! ಎಂಥ ಜೋಡಿ ಇದು’ಎಂದು ಸಿನಿಪ್ರಿಯರು ಉದ್ಗರಿಸಿದ್ದರು.ಇವರನ್ನು ತೆರೆಯ ಮೇಲೆ ಕಂಡು ಖುಷಿ ಪಟ್ಟ ಅಭಿಮಾನಿಗಳು ‘ಬಾಜಿರಾವೊ ಮಸ್ತಾನಿ’, ‘ಪದ್ಮಾವತ್’ ಚಿತ್ರಗಳನ್ನು ನೋಡಿ ಪ್ರಶಂಸಿಸಿ ಸಕ್ಸಸ್ ತಂದು ಕೊಟ್ಟಿದ್ದಾರೆ.

ದೀಪವೀರ್ ಎಂದು ಫೇಮಸ್ ಆದ ಈ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇಂತದ್ದೊಂದು ವದಂತಿ ಹರಿದಾಡಲು ಕಾರಣವಿದೆ.ಉಮೈರ್ ಸಂಧು ಅವರು ‘ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿ ಇಲ್ಲ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಇವರಿಬ್ಬರ ನಡುವೆ ಬಿರುಕು ಮೂಡಲು ಕಾರಣವೇನು ಇರಬಹುದು ಎಂಬ ಪ್ರಶ್ನೆ ಕಾಡಿತ್ತು. ಉಮೈರ್ ಸಂಧು ಅವರು ವಿದೇಶಿ ಸೆನ್ಸರ್ ಮಂಡಳಿಯ ಸದಸ್ಯರು. ಭಾರತದಲ್ಲಿ ತೆರೆಕಾಣುವ ಚಿತ್ರಗಳನ್ನು ಇವರು ವಿಮರ್ಷಿಸುತ್ತಾರೆ. ಅದಕ್ಕಾಗಿ ಇವರ ಸೋಶಿಯಲ್ ಮೀಡಿಯಾದ ಖಾತೆ ಜನಪ್ರಿಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಗಳನ್ನು ಕೂಡ ಹೊಂದಿದೆ. ‘ದೀಪವೀರ್ ಜೋಡಿಯ ಮಧ್ಯೆ ಎಲ್ಲವೂ ಸರಿ ಇಲ್ಲ’ ಎಂಬ ಇವರ ಟ್ವೀಟ್ ನಿಂದ ದೀಪಿಕಾ ಮತ್ತು ರಣವೀರ್ ದೂರವಾಗುತ್ತಾರೆ ಎಂಬ ಭಯದಿಂದ ಅಭಿಮಾನಿಗಳಿದ್ದರು.

ಆದರೆ ಈ ಬಗ್ಗೆ ಸ್ವತಃ ರಣವೀರ್ ಸಿಂಗ್ ಅವರೇ ಮಾತನಾಡಿದ್ದಾರೆ. ನಟ ರಣವೀರ್ ಸಿಂಗ್ ಗೆ ಫಿಲಂ ಫೇರ್ ಪ್ರಶಸ್ತಿ ದೊರೆತಾಗ, ದೀಪಿಕಾ ಪಡುಕೋಣೆ ಅವರನ್ನು ವೇದಿಕೆ ಮೇಲೆ ಕರೆಸಿ ‘ನನ್ನ ಯಶಸ್ಸಿನ ಗುಟ್ಟು ನನ್ನ ಹೆಂಡತಿ ದೀಪಿಕಾ ಪಡುಕೋಣೆ’ ಎಂದು ಹೇಳುವುದರ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಇತ್ತೀಚಿಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ‘ನಿಮ್ಮ ಮತ್ತು ದೀಪಿಕಾಳ ಮಧ್ಯೆ ಅಂತರವಿದೆಯೆ? ..ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದೆಯೆ..??’ ಎಂದು ನೇರವಾಗಿ ಪ್ರಶ್ನಿಸಲಾಗಿತ್ತು. ಇದಕ್ಕೆ ರಣವೀರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ; ‘ನಾನು ಮತ್ತು ದೀಪಿಕಾ 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷವಾಯಿತು. ಎಲ್ಲವೂ ದೇವರ ದಯೆಯಿಂದ ಚೆನ್ನಾಗಿ ಇದೆ’ ಎಂದರು. ಈ ಹೇಳಿಕೆಯು ಸುಳ್ಳು ವದಂತಿಗೆ ಛಾಟಿ ಬೀಸಿದ್ದು, ಇವರಿಬ್ಬರು ಅನ್ಯೋನ್ಯವಾಗಿಯೇ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಣವೀರ್ ಸಿಂಗ್ ಅವರ ಈ ಉತ್ತರದಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಜೋಡಿ ಯಾವಾಗಲೂ ಚೆನ್ನಾಗಿರಲಿ ಎಂದು ಹರಿಸಿದ್ದಾರೆ.

By admin

Leave a Reply

Your email address will not be published.