ಬಿಗ್ ಬಾಸ್ ಮನೆ ಇಂದ ಹೊರ ಬಂದ ಗೊಂಬೆ ನೇಹಾ ಗೌಡ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕನ್ನಡ ಸೀಸನ್ 9 ಐದು ವಾರಗಳನ್ನು ಪೂರೈಸಿದೆ. ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಯಾರು ಎಲಿಮಿನೇಷನ್ ಆಗಿ ಹೋಗುತ್ತಾರೆ ಎಂಬ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಿಗ್ ಬಾಸ್ ಪ್ರೇಕ್ಷಕರ ನಡುವೆ ಲೆಕ್ಕಾಚಾರ ಅದಾಗಲೇ ಪ್ರಾರಂಭವಾಗಿದ್ದು ಕೆಲವರು ಈಗಾಗಲೇ ಮನೆಯಿಂದ ಹೊರ ಬಂದಾಗಿದೆ. ಅದರಲ್ಲಿ ಈ ಐದನೇ ವಾರದ ಎಲಿಮಿನೇಷನ್ ಆಗಿರುವ ಸ್ಪರ್ಧಿಯ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ.

ಈ ಬಾರಿ ಬಿಗ್ ಬಾಸ್ ಮನೆಯಿಂದ ಅಂದರೆ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರಬಂದಿರುವ ಸ್ಪರ್ಧಿ ಎಂದರೆ ಅದು ನೇಹಾ ಗೌಡ. ಹೌದು ಮಿತ್ರರೇ, ನೇಹಾ ಗೌಡ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸ್ಪರ್ದಿಯಾಗಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಹೋಗಿದ್ದ ಸಂದರ್ಭದಲ್ಲಿ ಎಲ್ಲರೂ ಕೂಡ ನೇಹಾ ಗೌಡ ಖಂಡಿತವಾಗಿ ಫೈನಲ್ ವಾರದವರೆಗೂ ಕೂಡ ಇದ್ದೇ ಇರುತ್ತಾರೆ ಎಂಬುದಾಗಿ ಭರವಸೆಯನ್ನು ಹೊಂದಿದ್ದರು ಆದರೆ ಕೇವಲ ಐದನೇ ವಾರಕ್ಕೆ ಮನೆಯಿಂದ ಹೊರಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರವಾಹಿ ಚಿನ್ನು ಪಾತ್ರಧಹರಿಯಾಗಿ ಎಲ್ಲರ ಗಮನವನ್ನು ಸೆಳೆದಿರುವ ನೇಹಾ ಗೌಡ ಹಲವಾರು ಕಿರುತೆರೆಯ ಕಾರ್ಯಕ್ರಮಗಳು ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡು ಕನ್ನಡ ಕಿರುತರೆ ಪ್ರೇಕ್ಷಕರ ಮನೆ ಮಾತಾಗಿದ್ದಾರೆ. ಇನ್ನು ಐದು ವಾರ ಬಿಗ್ ಬಾಸ್ ಮನೆಯಲ್ಲಿ ಇದ್ದ ನೇಹಾ ಗೌಡ ಅವರಿಗೆ ಸಿಕ್ಕಿರುವ ಸಂಭಾವನೆ ಕುರಿತಂತೆ ಕೂಡ ಚರ್ಚೆ ನಡೆಯುತ್ತಿದೆ.

ಫ್ರೆಂಡ್ಸ್ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕಾಗಿ ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಬಿಗ್ ಬಾಸ್ ಹಾಗೂ ವಾಹಿನಿ ಕಡೆಯಿಂದ ಪಡೆದುಕೊಂಡಿದ್ದಾರೆ. ಆ ಲೆಕ್ಕದಲ್ಲಿ ನೇಹಾ ಗೌಡ ಅವರು ಒಟ್ಟಾರೆಯಾಗಿ ಐದು ವಾರಕ್ಕೆ ಭರ್ಜರಿ 15 ಲಕ್ಷ ರುಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ನೇಹಾ ಗೌಡ ಅವರು ಎಲಿಮಿನೇಷನ್ ಆಗಿರುವ ಹಿನ್ನೆಲೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!