Kabzaa: ಕಬ್ಜಾ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಬರುತ್ತಿರುವ ಬಿಗ್ ಸೆಲೆಬ್ರಿಟಿ ಯಾರು ಗೊತ್ತಾ? ಇಂಡಿಯಾದಲ್ಲೇ ಟಾಪ್!

Kabzaa Trailer ಆರ್ ಚಂದ್ರು(R chandru) ನಿರ್ದೇಶನದಲ್ಲಿ ಹಾಗೂ ಎಂಟಿಬಿ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಕಬ್ಜಾ ಸಿನಿಮಾ ಇದೇ ಮಾರ್ಚ್ 17ರಂದು ಪಂಚ ಭಾಷೆಗಳಲ್ಲಿ ದೇಶವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಸಿನಿಮಾದ ಟೀಸರ್ ಈಗಾಗಲೇ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರನ್ನು ಈ ಸಿನಿಮಾದ ಕುರಿತಂತೆ ವಿಶೇಷವಾಗಿ ಆಸಕ್ತಿಯನ್ನು ಹೊಂದುವಂತೆ ಮಾಡಿದೆ.

ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಟನಾಗಿ ನಟಿಸಿದ್ದು ಶ್ರೇಯ ಶರಣ್ ನಾಯಕಿಯಾಗಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇದರ ಜೊತೆಗೆ ಈಗ ಕನ್ನಡ ಚಕ್ರವರ್ತಿ ಶಿವಣ್ಣ(Shivanna) ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಖಾತ್ರಿ ಯಾಗಿದೆ.

ಇನ್ನು ಕಬ್ಜಾ(Kabzaa) ಸಿನಿಮಾದ ಟ್ರೈಲರ್ ಇಂದು ಆಧಿಕೃತವಾಗಿ ಬಿಡುಗಡೆ ಆಗಲಿದ್ದು ಸಾಕಷ್ಟು ಸದ್ದು ಮಾಡುತ್ತಿರುವ ಕಬ್ಜಾ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುವುದಕ್ಕೆ ಕೂಡ ಭಾರತೀಯ ಚಿತ್ರರಂಗದ ಲೆಜೆಂಡರಿ ನಟರೇ ಬರುತ್ತಿದ್ದಾರೆ. ಭಾರತದ ನಂಬರ್ ಒನ್ ಸ್ಟಾರ್ ಒಬ್ಬರು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ.

ಹೌದು ಗೆಳೆಯರೇ ಬಾಲಿವುಡ್ ಚಿತ್ರರಂಗದ ಅನಭಿಶಕ್ತ ದೊರೆ ಅಮಿತಾಬ್ ಬಚ್ಚನ್(Amitabh Bachchan) ರವರು ಕಬ್ಜಾ ಸಿನಿಮಾದ ಟ್ರೈಲರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಈಗಾಗಲೇ ಟೀಸರ್ ಮೂಲಕ ಹೈ ಲೆವೆಲ್ ಮೇಕಿಂಗ್ ಅನ್ನು ಸಾಬೀತುಪಡಿಸಿರುವ ಕಬ್ಜಾ ಸಿನಿಮಾದ ಟ್ರೈಲರ್(Kabzaa Trailer) ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಜಾಸ್ತಿಯಾಗಿದೆ.

Leave A Reply

Your email address will not be published.