Athiya Shetty ಮದುವೆಯಾದ ಒಂದೇ ವಾರಕ್ಕೆ ಜನರಿಂದ ಟೀಕೆಗೆ ಒಳಗಾದ ಕೆ ಎಲ್ ರಾಹುಲ್ ಪತ್ನಿ ಅಥಿಯ ಶೆಟ್ಟಿ! ಇಂಟರೆಸ್ಟಿಂಗ್ ಆಗಿದೆ ಕಾರಣ.

Athiya Shetty ಕ್ರಿಕೆಟ್ ಹಾಗೂ ಸಿನಿಮಾ ರಂಗ ನಮ್ಮ ದೇಶದ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಒಂದಾಗಿದೆ. ಇನ್ನು ಕ್ರಿಕೆಟಿಗರು ಸಿನಿಮಾ ನಟಿಯರನ್ನು ಮದುವೆಯಾಗುವಂತಹ ಪರಂಪರೆ ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಇನ್ನು ಇತ್ತೀಚಿಗಷ್ಟೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ನಟಿ ಅಥಿಯ ಶೆಟ್ಟಿ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟ್ ಆಗಿರುವ ಕೆಎಲ್ ರಾಹುಲ್ ಅವರನ್ನು ಇದೇ ಜನವರಿ 23ರಂದು ಮದುವೆಯಾಗಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳ ಕಾಲ ಡೇಟಿಂಗ್(Dating) ನಡೆಸಿ ಈಗ ಮನೆಯವರ ಒಪ್ಪಿಗೆ ಮೇಲೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಜನವರಿ 23ರಂದು ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್ ಹೌಸ್(Farm House) ನಲ್ಲಿ ಕೆಲವೇ ಕೆಲವು ಕುಟುಂಬದ ಆಪ್ತ ಸ್ನೇಹಿತರು ಹಾಗೂ ಕ್ರಿಕೆಟಿಗರು ಹಾಗೂ ಗಣ್ಯರ ಸಮ್ಮುಖದಲ್ಲಿ ಇವರಿಬ್ಬರ ವಿವಾಹ ಸಂಭ್ರಮೋತ್ಸವ ನಡೆದಿದೆ. ಹಲವಾರು ಸುದ್ದಿಗಳ ಪ್ರಕಾರ ಖ್ಯಾತ ಸೆಲೆಬ್ರಿಟಿಗಳು ಈ ವಧು ವರರಿಗೆ ದುಬಾರಿ ಗಿಫ್ಟ್ ಗಳನ್ನು ಕೂಡ ನೀಡಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು ಇದರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರಿಗೆ ಶುಭಾಶಯಗಳು ಮಹಾಪೂರವೇ ಹರಿದು ಬಂದಿತ್ತು.

Kl Rahul Athiya Shetty Marriage

ಮದುವೆಯಾದ ನಂತರ ಇಬ್ಬರು ದಂಪತಿಗಳು ಅಂದರೆ ಕೆ ಎಲ್ ರಾಹುಲ್ ಹಾಗೂ ಅಥಿಯ ಶೆಟ್ಟಿ ಮುಂಬೈ ನಗರದ ಬಾಂಧ್ರಾ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಇಬ್ಬರೂ ಸಹ ಸಿಂಪಲ್ ಆಗಿ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಇವರಿಬ್ಬರ ಈ ಸಿಂಪಲ್ ಲುಕ್ ಅನ್ನೋ ಸೋಶಿಯಲ್ ಮೀಡಿಯಾದಲ್ಲಿ(Social Media) ನೋಡಿ ಮೆಚ್ಚುಗೆಯನ್ನು ಸಲ್ಲಿಸಿದರೆ ಇನ್ನು ಕೆಲವರು ಅದಾಗಲೇ ಅಥಿಯಾ ಶೆಟ್ಟಿ ಮದುವೆಯಾದ ಒಂದೇ ವಾರದಲ್ಲಿ ಕುಂಕುಮ ಹಾಗೂ ತಾಳಿಯನ್ನು ಮರೆತಿದ್ದಾರೆ ಎನ್ನುವುದಾಗಿ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಪ್ರದಾಯವನ್ನು ಅನುಸರಿಸಬೇಕಾದ ನೀವೇ ಈ ರೀತಿ ಮಾಡುವುದು ಎಷ್ಟು ಮಟ್ಟಿಗೆ ಸರಿ ಎಂಬುದಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಷ್ಟೇ ಮಾಡರ್ನ್ ಆಗಿದ್ದರೂ ಕೂಡ ಕೆಲವೊಂದು ಮೂಲಭೂತ ಆಚರಣೆಗಳನ್ನು ಮದುವೆಯಾದ ನಂತರ ಆಚರಿಸಲೇಬೇಕು ಅಥಿಯಶೆಟ್ಟಿ ಅದನ್ನು ಮರೆತಿದ್ದಾರೆ(Forgot) ಎನ್ನುವುದಂತೂ ಸತ್ಯ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!