ಪುನೀತ್ ಜೋತೆ ತಮ್ಮ ಮಗಳು ಅಶ್ವಿನಿಯನ್ನು ವಿವಾಹ ಮಾಡಿಕೊಡಲು ನಿರಾಕರಿಸಿದ್ದ ತಂದೆ ತಾಯಿಗಳು. ಭವಿಷ್ಯದ ಸುಳಿವು ಸಿಕ್ಕಿತ್ತೇ?

ಪುನೀತ್ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು, ಅವರೆಲ್ಲ ಕೆಲಸ ಕಾರ್ಯಗಳಲ್ಲಿ ನೆರವಾಗಿ, ಸಾಧನೆಗೆ ಹುರಿದುಂಬಿಸಿ, ದೊಡ್ಮನೆ ಕುಟುಂಬದ ಘನತೆ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಬಂದವರು ಅಶ್ವಿನಿ ಅವರು. ನಗು, ತಮಾಷೆ, ಹುಸಿ ಕೋಪ, ಪ್ರೀತಿ, ಕಾಳಜಿ ಎಲ್ಲವನ್ನು ಎಷ್ಟು ಬೇಕೆಂದು ಅರಿತು ಪುನೀತ್ ಅವರ ಸಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣಲು ಸಹಕರಿಸಿದವರು ಅಶ್ವಿನಿಯವರು..

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಬಿದರೆ ತಾಲೂಕಿನ ಭಾಗಮನೆ ಗ್ರಾಮದವರು. ಆದರೆ ವಿವಾಹಕ್ಕೂ ಮುಂಚಿನಿಂದಲೇ ಅವರು ಬೆಂಗಳೂರಿನಲ್ಲಿ ತಮ್ಮ ತಂದೆ ತಾಯಿಯೊಂದಿಗೆ ವಾಸವಾಗಿದ್ದರು. ಅಶ್ವಿನಿ ಅವರ ತಂದೆಯ ಹೆಸರು ರೇವನಾಥ್. ಇವರು ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿ ಅವರಿಗೆ ಡಿಂಪಲ್ ಎಂಬ ಹೆಸರಿನ ತಂಗಿ ಇದ್ದು, ವಿನಯ್ ಎಂಬ ಹೆಸರಿನ ತಮ್ಮನಿದ್ದಾನೆ.

ಅಶ್ವಿನಿ ಅವರು ಹುಟ್ಟಿದ್ದು ಮಾರ್ಚ್ 14, 1981 ರಲ್ಲಿ. ಈಗಾಗಲೇ ಅವರಿಗೆ 40 ವರ್ಷ ವಯಸ್ಸಾಗಿದೆ. 1999ರಲ್ಲಿ ಪುನೀತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಪರಿಚಯದ ನಂತರ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನಂತರ ಸ್ನೇಹವೂ ಪ್ರೀತಿಯಾಗಿ ಬೆಳೆಯುತ್ತದೆ. ಪುನೀತ್ ಅವರೇ ಮೊದಲು ಅಶ್ವಿನಿ ಅವರಿಗೆ ಪ್ರಪೋಸ್ ಮಾಡಿದರಂತೆ. ಅಶ್ವಿನಿ ಅವರು ಒಪ್ಪಿದ ಬಳಿಕ ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬಸ್ಥರಿಗೆ ಪ್ರೀತಿಯ ವಿಷಯವನ್ನು ತಿಳಿಸಿ, ವಿವಾಹವಾಗಲು ನಿರ್ಧರಿಸಿರುವ ವಿಚಾರವನ್ನೂ ತಿಳಿಸಿ ಒಪ್ಪಿಗೆಯನ್ನು ಪಡೆಯುತ್ತಾರೆ.

ಪ್ರೀತಿಯ ವಿಚಾರವನ್ನು ಅಶ್ವಿನಿ ಯವರ ತಂದೆ ತಾಯಿಯ ಬಳಿಯಲ್ಲಿ ತಿಳಿಸಿದಾಗ ಅವರು ತಮ್ಮ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರಂತೆ. ಪುನೀತ್ ಅವರ ಅಕಾಲಿಕ ಮರಣದ ನಂತರ ಹಲವರು ಅಶ್ವಿನಿಯವರ ತಂದೆ ತಾಯಿಗಳಿಗೆ ಮೊದಲೇ ‘ಭವಿಷ್ಯದ ಸುಳಿವು ಸಿಕ್ಕಿತ್ತಾ?’ ಎಂಬ ಪ್ರಶ್ನೆಯನ್ನು ಎತ್ತಿದ್ದರೂ ಕೂಡ, ಅಶ್ವಿನಿ ಅವರ ತಂದೆ ತಾಯಿಗಳು ಮದುವೆ ವಿಚಾರವಾಗಿ ಹಿಂದೇಟು ಹಾಕಲು ಕಾರಣ ಬೇರೆನೇ ಇತ್ತು.

ಕರ್ನಾಟಕದಲ್ಲಿ ದೊಡ್ಡಮನೆ ಕುಟುಂಬವೆಂದರೆ ಅದಕ್ಕೊಂದು ಘನತೆ, ಗೌರವವಿತ್ತು. ಇಂತಹ ಜನಪ್ರಿಯ ಹಾಗೂ ಒಳ್ಳೆಯ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಸರಿದೂಗಿಸಿಕೊಂಡು ಹೋಗಲು ತಮ್ಮ ಮಗಳು ಅಶ್ವಿನಿಗೆ ಕಷ್ಟವಾಗಬಹುದು ಎಂಬ ಆತಂಕವು ಅವರನ್ನು ಕಾಡಿತ್ತು. ಅದೇ ಕಾರಣಕ್ಕಾಗಿ ಅಶ್ವಿನಿ ಅವರನ್ನು ಪುನೀತ್ ಅವರೊಂದಿಗೆ ವಿವಾಹ ಮಾಡಿಕೊಡಲು ತಂದೆ ತಾಯಿಗಳು ಹಿಂದೇಟು ಹಾಕಿದ್ದರು.

ನಂತರ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರ ತಂದೆ ತಾಯಿಗಳನ್ನು ಒಪ್ಪಿಸುವಲ್ಲಿ ಯಶಸ್ಸು ಕಾಣುತ್ತಾರೆ. 1999ರ ಡಿಸೆಂಬರ್ ತಿಂಗಳಿನಲ್ಲಿ ಪುನೀತ್ ಹಾಗು ಅಶ್ವಿನಿ ಅವರು ಬೆಂಗಳೂರಿನ ರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ವಿವಾಹವಾಗುತ್ತಾರೆ. 22 ವರ್ಷಗಳ ನೆಮ್ಮದಿಯ ಸಂಸಾರಿಕ ಜೀವನವನ್ನು ನಡೆಸಿದ್ದಾರೆ. ದೃತಿ ಮತ್ತು ವಂದಿತಾ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದು, ದೃತಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದಲ್ಲಿ ಇದ್ದಾಳೆ ಮತ್ತು ವಂದಿತಾ ಬೆಂಗಳೂರಿನಲ್ಲಿ ತನ್ನ ಶಿಕ್ಷಣವನ್ನು ಪಡೆಯುತ್ತಿದ್ದಾಳೆ.

Leave a Comment

error: Content is protected !!