Appu Birthday: ಅಪ್ಪು ಬರ್ತಡೆ ದಿನ ಸಮಾಧಿಯ ಬಳಿ ಅಪ್ಪುನೇ ಅಭಿಮಾನಿಗಳನ್ನು ನೋಡೋಕೆ ಕುಳಿತಿದ್ದಾರೆ! ನೀವೇ ನೋಡಿ ಫೋಟೋ ಕೂಡ ವೈರಲ್.

Puneeth Rajkumar ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬರ್ತಡೇ ಇದ್ದು ಲಕ್ಷಾಂತರ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ(Kanteerava Studio) ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲು ಸರದಿ ಸಾಲಿನಂತೆ ಬೆಳಗ್ಗೆಯಿಂದಲೇ ಬರಲು ಪ್ರಾರಂಭಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅಪ್ಪು ಅವರ ದರ್ಶನ ಪಡೆಯಲು ಸಮಾಧಿಗೆ ಆಗಮಿಸುತ್ತಿದ್ದಾರೆ.

ಮಾರ್ಚ್ 16 ರಾತ್ರಿಯಂದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರ ಕುಟುಂಬಸ್ಥರು ಸಮಾಧಿಗೆ ಆಗಮಿಸಿ ಪೂಜೆ ಮಾಡಿ ಅಲ್ಲಿಯೇ ಕೇಕ್ ಕತ್ತ’ ರಿಸಿ ಅಪ್ಪು ಅವರ ಬರ್ತಡೆ ಯನ್ನು ಆಚರಿಸಿಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಕೂಡ ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಟನ ಆಶೀರ್ವಾದವನ್ನು ಪಡೆಯಲು ದೊಡ್ಡ ಸಂಖ್ಯೆಯಲ್ಲಿ ಕಾಯುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಒಂದು ಆಶ್ಚರ್ಯವೂ ಕೂಡ ನಡೆದಿದ್ದು ಎಲ್ಲರೂ ಕೂಡ ನಿಜವಾಗಿಯೂ ಅಪ್ಪು ಅವರನ್ನು ನೋಡಿರುವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಅಪ್ಪು ಅವರ ಸಮಾಧಿಯ ಬಳಿ ಅಪ್ಪು(Appu) ಅವರೇ ಕೂತಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದೇನೋ ಗಾಳಿ ಸುದ್ದಿ ಅಥವಾ ಪ್ರಚಾರಕ್ಕಾಗಿ ಹೀಗೆ ಮಾತನಾಡಲಾಗುತ್ತಿದೆ ಎಂಬುದಾಗಿ ಭಾವಿಸಬೇಡಿ. ನಿಜಕ್ಕೂ ಕೂಡ ಕಪ್ಪು ಅವರ ಸಮಾಧಿಯ ಪಕ್ಕದಲ್ಲಿ ಇರುವಂತಹ ಸಿಂಹಾಸನದಂತಹ ಕುರ್ಚಿಯಲ್ಲಿ ಅಪ್ಪು ಅವರೇ ಕುಳಿತಿದ್ದಾರೆ. ನಿಜಕ್ಕೂ ಇದನ್ನು ನೋಡಿ ಪ್ರತಿಯೊಬ್ಬ ಅಭಿಮಾನಿಯ ಕಣ್ಣೀರು ತುಂಬಿ ಬಂದಿದೆ.

ಹೌದು ಅಪ್ಪು ಅವರ ರೀತಿಯಲ್ಲಿಯೇ ಗೊಂಬೆಯನ್ನು ತಯಾರಿಸಿ ಸಮಾಧಿಯ ಪಕ್ಕದಲ್ಲಿಯೇ ಕುರ್ಚಿಯಲ್ಲಿ ಕುಳ್ಳಿರಿಸಲಾಗಿದೆ. ಸಮಾಜ ದರ್ಶನಕ್ಕಾಗಿ ಬರುವಂತಹ ಪ್ರತಿಯೊಬ್ಬರೂ ಕೂಡ ಅಪ್ಪು ಅವರ ಈ ಗೊಂಬೆಯನ್ನು ನೋಡಿ ಥೇಟ್ ಅಪ್ಪು(Appu) ಅವರೇ ಕುಳಿತಿದ್ದಾರೆ ಎನ್ನುವಂತೆ ಆನಂದ ಭಾಷ್ಪವನ್ನು ಸುರಿಸಿದ್ದಾರೆ. ಕೇವಲ ದರ್ಶನ ಮಾತ್ರವಲ್ಲದೆ ಬರುವಂತಹ ಪ್ರತಿಯೊಬ್ಬ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆಯನ್ನು ಕೂಡ ಆಯೋಜಿಸಲಾಗಿದೆ. ನೀವು ಕೂಡ ಕಾಮೆಂಟ್ ನಲ್ಲಿ ಅಪ್ಪು ಅವರಿಗೆ ಜನ್ಮದಿನದ ಶುಭಾಶಯಗಳು ಕೋರಬಹುದಾಗಿದೆ.

Leave a Comment

error: Content is protected !!