Puneeth Rajkumar: ಅದೊಂದು ಫಿಲ್ಮ್ ನಲ್ಲಿ ಅಪ್ಪು ದರ್ಶನ್ ಗೆ ಕೊಟ್ಟ ಆ ಗಿಫ್ಟ್ ಏನು ಗೊತ್ತಾ? ಸರ್ಪೈಸ್ ವಿಚಾರ.

Darshan Thoogudeepa ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಕಳೆದುಕೊಂಡಿರುವ ದುಃಖ ಹಾಗೂ ಅವರ ಸ್ಥಾನವನ್ನು ಬರಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಸೂರ್ಯ ಚಂದ್ರ ಇರುವ ತನಕವೂ ಕೂಡ ಕನ್ನಡ ಪ್ರೇಕ್ಷಕರು ಒಪ್ಪಿಕೊಳ್ಳಲೇ ಬೇಕಾದಂತಹ ಕಟು ಸತ್ಯ. ಇನ್ನು ಇಂದು ಅಪ್ಪು ಅಭಿಮಾನಿಗಳು ದರ್ಶನ್ ಅಭಿಮಾನಿಗಳ(Darshan Fans) ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ಕಿತ್ತಾಡುತ್ತಿರುವ ರೀತಿ ನೋಡಿದರೆ ನಿಜಕ್ಕೂ ಕೂಡ ಬೇಸರವಾಗುತ್ತದೆ.

ಅಪ್ಪು(Appu) ಬದುಕಿದ್ದಾಗ ದರ್ಶನ್ ಅವರ ಜೊತೆಗೆ ಹೊಂದಿದ್ದ ಸ್ನೇಹ ಸಂಬಂಧದ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವ ವಿಚಾರವಾಗಿದೆ. ನಿಮಗೆಲ್ಲರಿಗೂ ನೆನಪಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಅರಸು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಸಿನಿಮಾದಲ್ಲಿ ಕೊನೆಯಲ್ಲಿ ಡಿ ಬಾಸ್ ಚಿಕ್ಕ ಪಾತ್ರವನ್ನೇ ಮಾಡಿದ್ದರೂ ಕೂಡ ಅಪ್ಪು ಅವರ ಜೊತೆ ಕಾಣಿಸಿಕೊಂಡಿದ್ದು ಎಲ್ಲರ ಮನಸ್ಸನ್ನು ಗೆದ್ದಿತ್ತು.

ಇನ್ನು ಈ ಪಾತ್ರ ಮಾಡಲು ಕೇಳಿಕೊಂಡಾಗ ದರ್ಶನ್ ರವರು ವಿಧಿಸಿದ್ದ ಮೊದಲ ಷರುತ್ತು ಏನೆಂದರೆ, ಈ ಸಿನಿಮಗಾಗಿ ನಾನು ಯಾವುದೇ ಸಂಭಾವನೆಯನ್ನು ಪಡೆಯುವುದಿಲ್ಲ ಅದನ್ನು ಒಪ್ಪಿಕೊಂಡರೆ ಮಾತ್ರ ಮಾಡುತ್ತೇನೆ ಎಂಬುದಾಗಿ ದರ್ಶನ್ ರವರು ಒಪ್ಪಿಕೊಂಡಿದ್ದರಂತೆ. ಸಿನಿಮಾ ಮುಗಿದ ನಂತರ ಏನಾದರೂ ಕೊಡಲೇಬೇಕು ಎಂದು ನಿರ್ಧಾರ ಮಾಡಿದ್ದ ಅಪ್ಪು ಹಾಗು ರಾಘಣ್ಣ(Raghanna) ದರ್ಶನ್ ಅವರಿಗೆ ಒಂದು ಉಡುಗೊರೆಯನ್ನು ನೀಡುತ್ತಾರೆ.

ಸಂಭವನೆಯನ್ನಂತೂ ನೀವು ತೆಗೆದುಕೊಳ್ಳುವುದಿಲ್ಲ ಕೊನೆ ಪಕ್ಷ ಈ ವಾಚ್ ಅನಾದರೂ ತೆಗೆದುಕೊಳ್ಳಿ ಎಂಬುದಾಗಿ ದುಬಾರಿ ಮೌಲ್ಯದ ವಾಚ್ ಅನ್ನು ಅಪ್ಪು ಡಿ ಬಾಸ್(Dboss) ರವರಿಗೆ ಉಡುಗೊರೆಯಾಗಿ ನೀಡಿದ್ದರಂತೆ. ಅಪ್ಪು ಹಾಗು ದರ್ಶನ್ ರವರ ನಡುವಿನ ಭಾಂದವ್ಯದ ಕುರಿತಂತೆ ಹೇಳಲು ಇದೊಂದು ಉದಾಹರಣೆ ಸಾಕು ಎನ್ನುವುದಾಗಿ ಬಯಸುತ್ತೇವೆ. ಅಪ್ಪು(Appu) ಹಾಗೂ ಡಿ ಬಾಸ್ ಸ್ನೇಹದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!