ಅಪ್ಪನ ಕರ್ನಾಟಕ ರತ್ನ ಮೆಡಲ್ ಅನ್ನು ಹಿಡಿದು ಅಪ್ಪನ ಫೋಟೋ ಮುಂದೆ ನಿಂತು ಕಣ್ಣೀರು ಹಾಕಿದ ವಂದಿತ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಕರ್ನಾಟಕ ರಾಜ್ಯ ಸರ್ಕಾರ ಗೌರವಿಸಿದೆ. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮಗಳು ವಂದಿತ ಸೇರಿದಂತೆ ಶಿವಣ್ಣ ರಾಘಣ್ಣ ಅವರಿಂದ ಹಿಡಿದು ಎಲ್ಲಾ ಕುಟುಂಬಸ್ಥರು ಕೂಡ ಹಾಜರಿದ್ದರು. ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರ ಗಣವು ಕೂಡ ಅಲ್ಲೇ ಇತ್ತು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಅವರಿಂದ ಸ್ವೀಕರಿಸಿದ್ದಾರೆ. ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಇಬ್ಬರೂ ಕೂಡ ಪುನೀತ್ ಅವರ ಅತ್ಯಂತ ಆಪ್ತರಾಗಿದ್ದು ಈ ಸಂದರ್ಭದಲ್ಲಿ ಇಬ್ಬರು ಕೂಡ ಪುನೀತ್ ರವರನ್ನು ನೆನೆದುಕೊಂಡು ಭಾವುಕರಾಗಿದ್ದು ಕೂಡ ವೇದಿಕೆಯಲ್ಲಿ ಕಂಡುಬಂದಿತ್ತು.

ವಿಧಾನಸೌಧದ ಎದುರುಗಡೆ ತೆರೆದ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮ ಸಹಸ್ರಾರು ಅಭಿಮಾನಿಗಳ ಮುಂದೆ ನಡೆದಿದ್ದು ಈ ಸಂದರ್ಭದಲ್ಲಿ ಮಳೆ ಬಂದಿದ್ದು ಕೂಡ ವಿಶೇಷವಾಗಿ ಕಂಡಿತು. ಇನ್ನು ಈ ಸಂದರ್ಭದಲ್ಲಿ ತಂದೆಯ ಕರ್ನಾಟಕ ರತ್ನ ಪ್ರಶಸ್ತಿಯ ಮೆಡಲ್ ಅನ್ನು ಅವರ ಎರಡನೇ ಮಗಳಾಗಿರುವ ವಂದಿತ ಕೂಡ ತಾಯಿಯ ಜೊತೆಗೆ ಪಡೆಯುತ್ತಾರೆ.

ಮನೆಗೆ ಬಂದ ತಕ್ಷಣವೇ ವಂದಿತಾ ಅವರು ಮನೆಯಲ್ಲಿದ್ದ ಪುನೀತ್ ರಾಜಕುಮಾರ್ ಅವರ ಫೋಟೋಗೆ ಕರ್ನಾಟಕ ರತ್ನ ಪ್ರಶಸ್ತಿಯ ಮೆಡಲ್ ಅನ್ನು ಹಾಕಿ ಕಣ್ಣೀರು ಹಾಕಿದ್ದು ಕೂಡ ಕಂಡುಬಂದಿದ್ದು ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಅವರ ಫೋಟೋದ ಮೇಲೆ ಅವರ ತಂದೆ ಆಗಿರುವ ರಾಜಕುಮಾರ್ ಅವರ ಫೋಟೋ ಕೂಡ ಇರುವ ಕಾರಣದಿಂದಾಗಿ ಎರಡು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ಒಂದೇ ಜಾಗದಲ್ಲಿ ಇದ್ದಂತೆ ಕಂಡುಬಂದಿತು.

Leave a Comment

error: Content is protected !!