Amulya: ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಫೋಟೋವನ್ನು ಬಹಿರಂಗಪಡಿಸಿದ ನಟಿ ಅಮೂಲ್ಯ! ಕಾರಣ ಕೂಡ ವಿಶೇಷವಾಗಿದೆ ಏನು ಗೊತ್ತಾ?

Amulya Actress ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಸೇರಿದಂತೆ ಹಲವಾರು ಖ್ಯಾತನಾಮ ನಟರ ಜೊತೆಗೆ ಕಾಣಿಸಿಕೊಂಡಿರುವ ಅಮೂಲ್ಯ ಅವರು ನಿಮಗೆಲ್ಲರಿಗೂ ಸಾಕಷ್ಟು ವರ್ಷಗಳಿಂದ ಪರಿಚಿತರಾಗಿರುವಂತಹ ನಟಿ. ನಂತರ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ನವರ ಜೊತೆಗೆ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ನಾಯಕಿಯಾದವರ ಪಟ್ಟಿಯಲ್ಲಿ ಅವರು ಕೂಡ ಕಾಣಿಸಿಕೊಳ್ಳುತ್ತಾರೆ.

ಇನ್ನು ನಾಯಕ ನಟಿ ಆದ ನಂತರ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೂ ಕೂಡ ಅಮೂಲ್ಯ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಹಾಗೂ ಅವರ ಜೋಡಿ ಆನ್ ಸ್ಕ್ರೀನ್ನಲ್ಲಿ ಎಲ್ಲರೂ ಇಷ್ಟಪಟ್ಟಿದ್ದರು. 2017ರಲ್ಲಿ ಜಗದೀಶ್ ಎನ್ನುವ ರಾಜಕೀಯ ಕ್ಷೇತ್ರದ ವ್ಯಕ್ತಿಯನ್ನು ಮದುವೆಯಾದ ನಂತರ ನಟಿ ಅಮೂಲ್ಯ ಅವರು ಸಂಪೂರ್ಣವಾಗಿ ಚಿತ್ರರಂಗವನ್ನು ತ್ಯಜಿಸಿ ಸಾಂಸಾರಿಕ ಜೀವನದಲ್ಲಿ ನಿರತರಾಗುತ್ತಾರೆ.

ಇತ್ತೀಚಿಗಷ್ಟೇ ನಟಿ ಅಮೂಲ್ಯ(Amulya) ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಮಕ್ಕಳ ಫೋಟೋಗಳನ್ನು ನಟಿ ಅಮೂಲ್ಯ ಅವರು ಅಷ್ಟೊಂದು ಹಂಚಿಕೊಳ್ಳುತ್ತಿರಲಿಲ್ಲ ಆದರೆ ಈಗ ಮೊದಲ ಬಾರಿಗೆ ಒಂದನೇ ವರ್ಷದ ಪೂರೈಕೆ ಆಗಿರುವ ಹಿನ್ನೆಲೆಯಲ್ಲಿ ಅವಳಿ ಮಕ್ಕಳ ಫೋಟೋಗಳನ್ನು ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹೌದು ಗೆಳೆಯರೇ ನಟಿ ಅಮೂಲ್ಯ(Amulya Actress) ಹಾಗೂ ಜಗದೀಶ್(Jagadish) ದಂಪತಿಗಳು ತಮ್ಮ ಮುದ್ದಿನ ಅವಳಿ ಮಕ್ಕಳಾಗಿರುವ ಅಥರ್ವ್ ಹಾಗೂ ಆಧವ್ ಇಬ್ಬರ ಮೊದಲ ವರ್ಷದ ಹುಟ್ಟಿದ ದಿನದ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಮಕ್ಕಳ ಫೋಟೋ ಅದರಲ್ಲಿ ಕಂಡುಬಂದಿದ್ದು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರುವ ಎಲ್ಲರೂ ಕೂಡ ಸಂತೋಷವನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ.

Leave A Reply

Your email address will not be published.