Amrutha Prem: ಡಾಲಿ ಜೊತೆಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನೆನಪಿರಲಿ ಪ್ರೇಮ ಮಗಳ ವಯಸ್ಸೆಷ್ಟು ನೀವೇ ನೋಡಿ!

Amrutha Prem ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ನಾಯಕರಾಗಿ ಹಾಗೂ ನಾಯಕಿಯರಾಗಿ ಕಾಲಿಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರು ಕೂಡ ಮೆಚ್ಚಿಕೊಂಡು ಸ್ವಾಗತಿಸಬೇಕಾಗಿರುವಂತಹ ಬೆಳವಣಿಗೆ. ಹೊಸ ಪ್ರತಿಭೆಗಳ ಹರಿವು ಕನ್ನಡ ಚಿತ್ರರಂಗದಲ್ಲಿ(KFI) ಸರಾಗವಾಗಿ ಆಗುತ್ತಿರುವುದು ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿದೆ ಎನ್ನಬಹುದಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇಂದಿನ ಲೇಖನಿಯಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಲವ್ಲಿ ಸ್ಟಾರ್ ಆಗಿರುವಂತಹ ಪ್ರೇಮ್(Lovely Star Prem) ಅವರ ಬಗ್ಗೆ. ವಯಸ್ಸು 46 ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಇನ್ನೂ ಕೂಡ ಚಾರ್ಮಿಂಗ್ ಆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗ ಅವರಿಗೆ ಕಾಂಪಿಟೇಶನ್ ನೀಡೋದಕ್ಕೆ ಅಂತಾನೆ ಅವರ ಮಗಳು ಅಮೃತ ಪ್ರೇಮ್(Amrutha Prem) ಕನ್ನಡ ಚಿತ್ರರಂಗಕ್ಕೆ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಟಗರುಪಲ್ಯ(Tagaru Palya) ಸಿನಿಮಾದ ಮೂಲಕ ಪಾದರ್ಪಣೆ ಮಾಡಲು ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಇನ್ನು ಇವರ ವಯಸ್ಸು ಎಷ್ಟು ಅಂತ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರ.

ಹೌದು ಮಿತ್ರರೇ ನಟಿ ಅಮೃತ ಪ್ರೇಮ್(Amrutha Prem) ಅವರು ಕೇವಲ 21 ವರ್ಷ ವಯಸ್ಸಿನವರಾಗಿದ್ದು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಈಗ ನಾಯಕಿಯಾಗಿ ಕಾಣಿಸಿಕೊಳ್ಳಲು ಹೊರಟಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂಬುದಾಗಿ ಹಾರೈಸೋಣ. ಅಮೃತ ಪ್ರೇಮ್ ಅವರ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!