Sandalwood: ತಾತ ವಜ್ರಮುನಿಯಂತೆ ಡೈಲಾಗ್ ಹೊಡಿತಾನೆ ಮೊಮ್ಮಗ. ಸದ್ಯದಲ್ಲೇ ಜೂನಿಯರ್ ನಟರಾ’ ಕ್ಷಸ?

Vajramuni ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಪರಿಪಕ್ವ ಕಲಾವಿದ ಹಾಗೂ ಖಳನಾಯಕ ರಲ್ಲಿ ಹಲವಾರು ಜನರ ಹೆಸರು ಕೇಳಿಬರುತ್ತದೆ ಆದರೆ ಇಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿರುವ ಹೆಸರುಗಳು ಕೆಲವೇ ಕೆಲವು ಮಾತ್ರ. ಅವರಲ್ಲಿ ನಟ ರಾಕ್ಷಸ ನಟ ಭಯಂಕರ ಎನ್ನುವ ಬಿರುದಾಂಕಿತರಾಗಿರುವ ವಜ್ರಮುನಿ ಕೂಡ ಒಬ್ಬರು. ವಜ್ರಮುನಿ(Vajramuni) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಒಂದು ಕಾಲದಲ್ಲಿ ಅವರ ನಟನೆಯನ್ನು ನೋಡಿ ಕೇವಲ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರು ಮಾತ್ರವಲ್ಲದೆ ಅವರ ಮನೆಯಲ್ಲಿ ಅವರ ಮಕ್ಕಳು ಕೂಡ ಹೆದರಿಕೊಳ್ಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ನಟ ವಜ್ರಮುನಿ(Vajramuni Kannada Actor) ಅವರ ನಟನೆಯ ಪ್ರಭಾವ ಪ್ರೇಕ್ಷಕರ ಮೇಲೆ ಬೀರುತ್ತಿತ್ತು. ಅಷ್ಟು ಸಹಜವಾಗಿ ಪರಕಾಯ ಪ್ರವೇಶ ಮಾಡಿದಂತೆ ಪಾತ್ರದಲ್ಲಿ ವಜ್ರಮುನಿ ಅವರು ಕಾಣಿಸಿಕೊಳ್ಳುತ್ತಿದ್ದರು.

ಇಂದಿಗೂ ಕೂಡ ಅವರ ನಟನೆಯ ರೀತಿಯನ್ನು ಅನುಕರಣೆ ಮಾಡಲು ಸಾಕಷ್ಟು ಖಳನಾಯಕರು(Villains) ಪ್ರಯತ್ನಿಸುತ್ತಾರೆ ಆದರೆ ಅವರ ಲೆವೆಲ್ ಅನ್ನು ಮ್ಯಾಚ್ ಮಾಡುವಂತಹ ಮತ್ತೊಬ್ಬ ಕಲಾವಿದ ಇದುವರೆಗೂ ಹುಟ್ಟಿಲ್ಲ ಮತ್ತೆ ಹುಟ್ಟುವುದು ಕೂಡ ಅಸಾಧ್ಯ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಈಗ ಅವರ ಮೊಮ್ಮಗನೇ ತಮ್ಮ ತಾತನ ಹಾಗೆ ವಿಡಿಯೋದಲ್ಲಿ ಅನುಕರಣೆ ಮಾಡುವ ನಟನೆಯನ್ನು ತೋರ್ಪಡಿಸಿದ್ದಾರೆ.

ಹೌದು ಗೆಳೆಯರೇ ವಜ್ರಮುನಿ ಅವರ ಮೊಮ್ಮಗ ಆಕರ್ಷ್(Akarsh Vajramuni grandson) ತಮ್ಮ ತಾತನ ಡೈಲಾಗ್ ಡೆಲಿವರಿಯನ್ನು ಮಾಡುವಂತಹ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮುಂದಿನ ದಿನಗಳಲ್ಲಿ ತಾತನ ಹಾಗೆ ಕನ್ನಡ ಚಿತ್ರರಂಗವೇ ಮೆಚ್ಚುವಂತಹ ಖಳನಾಯಕನಾಗಿ ಕಾಣಿಸಿಕೊಂಡರೂ ಕೂಡ ಅಚ್ಚರಿ ಪಡಬೇಕಾಗಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ನೀವು ಕೂಡ ವಜ್ರಮುನಿಯವರ ಮೊಮ್ಮಗ ಆಗಿರುವ ಆಕರ್ಷ್ ಅವರ ಫೋಟೋವನ್ನು ಇಲ್ಲಿ ನೋಡಬಹುದಾಗಿದೆ.

Leave a Comment

error: Content is protected !!