ನಟಿ ಪ್ರೇಮಾ ಅವರು 15 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರೂ ಕೂಡ ಒಂದೇ ಒಂದು ಅ ಶ್ಲೀಲ ದೃಶ್ಯಗಳಲ್ಲಿ ನಟಿಸಿಲ್ಲ ಯಾಕೆ ಗೊತ್ತಾ


ಪಾತ್ರಗಳ ಮೂಲಕ ಮತ್ತು ಅಭಿವ್ಯಕ್ತಿಗಳ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಟಿಯರು ಕೇವಲ ಅಭಿನಯ ಮತ್ತು ಪಾತ್ರದ ಮೂಲಕ ವೀಕ್ಷಕರನ್ನು ಗಮನ ಸೆಳೆಯುವುದು ಜೋಕೇ ಅಲ್ಲ. ಈಗಿನ ಕಾಲದ ಯೋಗ್ಯ ಮತ್ತು ಸುಸಂಸ್ಕೃತ ನಟಿಯರು ಕಾಣ ಸಿಗುವುದು ತುಂಬಾ ಕಡಿಮೆ.

ಹಣಕ್ಕೋಸ್ಕರ ಈಗಿನ ಕಾಲದ ನಟಿಯರು ಎಂತಹ ಪಾತ್ರವೇ ಇರಲಿ ಎಂತಹ ದೃಶ್ಯಗಳಲ್ಲಿ ನಟಿಸಲು ರೆಡಿ ಇರುತ್ತಾರೆ. ಆದರೆ ನಟಿ ಪ್ರೇಮಾ ಅವರು ಹಾಗಲ್ಲ. ಇವರು ನಡೆದ ದಾರಿಯೇ ಬೇರೆ. 90 ರ ದಶಕದಿಂದ 2೦೦೫ ರ ವರೆಗೂ ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದರು. ನಟಿ ಪ್ರೇಮಾ ಅವರು ಬೋಲ್ಡ್ ಹಾಗೂ ಅ ಶ್ಲೀಲ ದೃಶ್ಯಗಳಲ್ಲಿ ನಟಿಸದೆ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ನಿಜಕ್ಕೂ ಅದ್ಭುತ.

ಎಲ್ಲಾ ನಟಿಯರು ಮೋಹಕ ಮತ್ತು ಅಶ್ಲೀಲ ದೃಶ್ಯಗಳಲ್ಲಿ ನಟಿಸಲು ರೆಡಿ ಇರುತ್ತಾರೆ ಆದರೆ ನಟಿ ಪ್ರೇಮ ಮಾತ್ರ ಇಂಥ ದೃಶ್ಯಗಳಲ್ಲಿ ಯಾಕೆ ನಟಿಸಿಲ್ಲ ಎಂಬುದನ್ನು ತಿಳಿದುಕೊಳ್ಳಲು ಹಲವರಿಗೆ ಕುತೂಹಲವಿದೆ. ನಟಿ ಪ್ರೇಮಾ ಅವರು ತಮ್ಮ ಪ್ರಾರಂಭದ ದಿನಗಳಿಂದಲೂ ಪಾತ್ರದ ಮೂಲಕ ಜನರ ಮನಸ್ಸನ್ನು ಗೆಲ್ಲಲು ಹೋರಾಟ ನಡೆಸುತ್ತಿದ್ದರು. ನಟಿ ಪ್ರೇಮಾ ಅವರು ಕಲ್ಪನಾ ಅವರ ಶರಪಂಜರ ಚಿತ್ರಗಳನ್ನು ನೋಡಿ ಅಭಿನಯವನ್ನು ಕಲಿತಿದ್ದರು. ಅಭಿನಯ ಹಾಗೂ ಅಭಿವ್ಯಕ್ತಿಯಿ೦ದಲೇ ಸಿನಿಮಾರಂಗದಲ್ಲಿ ಕೊನೆವರೆಗೂ ಉಳಿಯಲು ಸಾಧ್ಯ ಎಂಬುದು ಅವರ ಯೋಚನೆ.

ಇದಕ್ಕೂ ಮೇಲಾಗಿ ಪ್ರೇಮಾ ಅವರು ಇಂತಹ ಬೋಲ್ಡ್ ಹಾಗೂ ಅ ಶ್ಲೀಲ ದೃಶ್ಯಗಳಿರುವ ನಟಿಸದೇ ಇರಲು ಕಾರಣ ಪ್ರೇಮಾ ಅವರ ತಾಯಿ. ನಟಿ ಪ್ರೇಮಾ ಅವರ ಜೊತೆಗೆ ಯಾವುದೇ ಸಿನಿಮಾಗಳನ್ನು ಮಾಡಬೇಕಿದ್ದರೂ ಸಹ ಮೊದಲು ಪ್ರೇಮ ತಾಯಿಯ ಒಪ್ಪಿಗೆ ಪಡೆಯಬೇಕಿತ್ತು. ಸಿನಿಮಾದ ಕಥೆಯನ್ನು ಹೇಮಾ ಅವರಿಗೆ ಹೇಳುವುದಕ್ಕಿಂತಲೂ ಮುಂಚೆ ಪ್ರೇಮಾ ಅವರ ತಾಯಿಗೆ ವಿವರಿಸಬೇಕಿತ್ತು. ಚಿತ್ರದ ಕಥೆಯನ್ನು ಮತ್ತು ಪಕ್ಷವನ್ನು ಕೇಳಿದ ಮೇಲೆ ಪ್ರೇಮ ಅವರ ತಾಯಿ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ಪ್ರೇಮ ಅವರು ಚಿತ್ರಕ್ಕೆ ಸಹಿ ಹಾಕುತ್ತಿದ್ದರು.

ಇಂಥ ದೃಶ್ಯಗಳಲ್ಲಿ ನಟಿಸಬೇಕು ಇಂತಹ ದೃಶ್ಯಗಳಲ್ಲಿ ನಟಿಸಬಾರದು ಎಂದು ಪ್ರೇಮಾ ಅವರ ತಾಯಿ ಅಚ್ಚುಕಟ್ಟಾಗಿ ಪ್ರೇಮಾ ಅವರಿಗೆ ತಿಳಿ ಹೇಳಿದ್ದರು. ಪ್ರೇಮಾ ಅವರು ಕನ್ನಡ ಚಿತ್ರರಂಗದ ಉತ್ತುಂಗ ಸ್ಥಾನದಲ್ಲಿದ್ದ ಅವರಿಗೆ ಹಿಂದಿ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು. ಆದರೆ ಹಿಂದಿ ಸಿನಿಮಾಗಳಲ್ಲಿ ಅ ಶ್ಲೀಲ ದೃಶ್ಯಗಳಲ್ಲಿ ಪ್ರೇಮ ಅಭಿನಯಿಸಬೇಕು ಎಂಬ ಕಾರಣಕ್ಕೆ ಪ್ರೇಮಾ ಅವರು ಹಿಂದಿ ಚಿತ್ರಗಳನ್ನೇ ಕೈಬಿಟ್ಟರು. ಹಣಕ್ಕೋಸ್ಕರ ಎಂತಹ ದೃಶ್ಯ ಕೂಡ ಅಭಿನಯಿಸಲು ರೆಡಿ ಇರುವ ಈಗಿನ ಕಾಲದ ನಟಿಯರು ಪ್ರೇಮಾ ಅವರನ್ನು ನೋಡಿ ಕಲಿಯುವ ಪಾಠಗಳು ಸಾಕಷ್ಟಿದೆ .


Leave A Reply

Your email address will not be published.