ಬಿಗ್ ಬಾಸ್ ಗೆ ಎಂಟ್ರಿ ಕೊಡಲಿರುವ ಮಹಾಲಕ್ಷ್ಮಿ ರವೀಂದರ್ ಜೋಡಿ

ಚಿತ್ರರಂಗದ ನಾಯಕ-ನಾಯಕಿಯರಂತೆ, ಕಿರುತೆರೆಯ ನಟ ನಟಿಯರು ತಮ್ಮ ಅಭಿನಯದ ಮೂಲಕ ಅದೆಷ್ಟೋ ಮನೆ ಮನಗಳ ಗೆದ್ದು, ಸ್ವಂತ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಸಿನಿರಂಗದ ದಿಗ್ಗಜರು ಯಾವ ಚಿತ್ರದಲ್ಲಿ ಯಾರೊಂದಿಗೆ ನಟಿಸುತ್ತಿದ್ದಾರೆ? ಯಾವ ಪಾತ್ರದಲ್ಲಿ ಕಾಣಿಸುತ್ತಾರೆ? ಎಂಬ ವಿಚಾರವಾಗಿ ಕುತೂಹಲ ತೋರಿಸುವ ಪ್ರೇಕ್ಷಕರಂತೆ, ಕಿರುತೆರೆಯ ನಟ-ನಟಿಯರು ಯಾವ ಹೊಸ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ? ಧಾರವಾಹಿಗಳಲ್ಲಿ ಯಾರೊಂದಿಗೆ ಅಭಿನಯಿಸಲಿದ್ದಾರೆ? ಎಂಬೆಲ್ಲಾ ಕುತೂಹಲವನ್ನು ತೋರಿಸುತ್ತಿರುತ್ತಾರೆ.

ಇದಷ್ಟೇ ಅಲ್ಲದೆ ತಮ್ಮ ನೆಚ್ಚಿನ ಕಲಾವಿದರ ವೈಯಕ್ತಿಕ ಜೀವನ ದಲ್ಲಿಯೂ ಆಸಕ್ತಿ ತೋರಿಸುವ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅನುಯಾಯಿಗಳಾಗಿರುತ್ತಾರೆ. ನಟ ನಟಿಯರ ಕುಟುಂಬ, ಮದುವೆ, ಮಕ್ಕಳು, ಹೀಗೆ ನಾನಾ ವಿಚಾರವಾಗಿ ಅಭಿಮಾನಿಗಳು ಹುಡುಕುತ್ತಿರುತ್ತಾರೆ. ಡೇಟಿಂಗ್, ಮದುವೆ, ಡಿವೋರ್ಸ್ ವಿಚಾರಗಳಿಗಂತೂ ಹೆಚ್ಚಿನ ಆಸಕ್ತಿ ತೋರಿಸುವ ಮಂದಿ ಬಹಳಷ್ಟಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ಕಮೆಂಟ್ಸ್ಗಳಿಗಂತೂ ಬರವೇ ಇಲ್ಲ.

ಇತ್ತೀಚಿಗಷ್ಟೇ ಮದುವೆಯಾಗಿರುವ ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಸದ್ಯದ ಕುತೂಹಲಕಾರಿ ವಿಚಾರ. ನಟಿ ಮಹಾಲಕ್ಷ್ಮಿಯು ನಿರ್ಮಾಪಕರಾದ ರವೀಂದರ್ ಅವರನ್ನು ಮದುವೆಯಾಗಿದ್ದು, ಈ ಜೋಡಿಯ ಮದುವೆ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದಿವೆ. ‘ಇದು ಜೋಡಿಯೇ ಅಲ್ಲ’ ಎಂಬ ಕಮೆಂಟ್ಸ್ ಗಳು ಕೂಡ ಬಂದಿವೆ. ‘ಮಿಸ್ ಮ್ಯಾಚ್ ಜೋಡಿ’ ಎಂದವರು ಕೂಡ ಮದುವೆಯ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ವೀಕ್ಷಿಸಿದ್ದಾರಂತೆ.

ಮಹಾಲಕ್ಷ್ಮಿಯವರು ತಮಿಳಿನ ಧಾರವಾಹಿಗಳ ಮೂಲಕ ಕಿರುತೆರೆಯಲ್ಲಿ ಫೇಮಸ್ ಆದವರು. ರವೀಂದರ್ ನಿರ್ಮಾಪಕರಾಗಿದ್ದು ಹಲವಾರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಇವರ ವಿಡಿಯೋ ವಾರೈ ಕಾಥಿರು ಚಿತ್ರದಲ್ಲಿ ನಟಿ ಮಹಾಲಕ್ಷ್ಮಿ ನಟಿಸಿದ್ದು, ಅದೇ ಚಿತ್ರವು ಅವರಿಬ್ಬರಲ್ಲಿ ಪ್ರೀತಿ ಚಿಗುರಿಸಲು ಕಾರಣ ಎಂದು ಹೇಳಲಾಗುತ್ತಿದೆ.ಮದುವೆಯಾಗಿರೋದು ನಿಜ ಹೌದೋ ಅಲ್ಲವೋ ಎಂಬಷ್ಟರ ಮಟ್ಟಿಗೆ ಸಂಚಲನ ಮೂಡಿಸಿದ್ದ ಈ ಜೋಡಿ, ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡುವುದರ ಮೂಲಕ ಮದುವೆಯಾಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿತ್ತು. ನಟಿ ಮಹಾಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಪತಿಯೊಂದಿಗಿರುವ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಮದುವೆಯ ಸಮಯದಲ್ಲಿ ನಿರ್ಮಾಪಕ ರವೀಂದರ್ ಅವರು ಒಂದು ಕೆಜಿ ಚಿನ್ನ ನೀಡಿದ್ದು, ದೇಶ ವಿದೇಶಗಳನ್ನು ಸುತ್ತಿದ್ದು ಕೂಡ ಪೋಲೊವರ್ಸ್ ಗಳ ಆಸಕ್ತಿಯ ವಿಚಾರವೇ ಆಗಿತ್ತು.

ಇದೀಗ ಈ ದಂಪತಿಗಳ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದ್ದು, ಅಕ್ಟೋಬರ್ ನಲ್ಲಿ ಆರಂಭವಾಗುವ ತಮಿಳಿನ ಬಿಗ್ ಬಾಸ್ ನಲ್ಲಿ ಈ ಜೋಡಿಯು ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೊಂದೆಡೆ ನಟಿ ಮಹಾಲಕ್ಷ್ಮಿ ಒಬ್ಬರೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಒಟ್ಟಿಗೆ ಸ್ಪರ್ಧಿಗಳಾಗಿ ಬರುತ್ತಾರೋ ಅಥವಾ ಒಬ್ಬರೇ ಮನೆಯೊಳಗೆ ಹೋಗುತ್ತಾರೋ ಎಂಬುದನ್ನು ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಪ್ರಾರಂಭವಾದ ಬಳಿಕವೇ ನೋಡಬೇಕಿದೆ.

Leave a Comment

error: Content is protected !!