ನಟಿ ಲೀಲಾವತಿಯವರ ಒಟ್ಟೂ ಆಸ್ತಿ ಬೆಲೆ ಎಷ್ಟು ಗೊತ್ತಾ. ಕೇಳಿದರೆ ನಡುಗಿ ಹೋಗುತ್ತೀರಿ!

ಲೀಲಾವತಿಯವರು 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿಯಲ್ಲಿ ಜನಿಸಿದರು. ತಮ್ಮ ಆರನೇ ವಯಸ್ಸಿನಲ್ಲಿ ಪಾಲಕರನ್ನು ಕಳೆದುಕೊಂಡಿರುವ ಇವರು ‘ಚಂಚಲ ಕುಮಾರಿ’ ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ನಾಗಕನ್ನಿಕಾ ಚಿತ್ರದ ಮೂಲಕ ಎರಡನೇ ಹೆಜ್ಜೆ ಇಟ್ಟು ನಾಟಕ ಕಂಪನಿಯನ್ನು ಸೇರಿ ನಟಿಯಾಗಿ ಹೊರಹೊಮ್ಮುತ್ತಾರೆ.’ಭಕ್ತ ಕುಂಭಾರ’, ‘ಮನಮೆಚ್ಚಿದ ಹೆಂಡತಿ’ ಇಂತಹ ಹಲವು ಫೇಮಸ್ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಭಾಷೆಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಬರಹಗಾರ್ತಿಯಾಗಿ 50ಕ್ಕೂ ಹೆಚ್ಚು ವರ್ಷ ಕಾರ್ಯನಿರ್ವಹಿಸಿದ್ದಾರೆ.

ಈಗ ಲೀಲಾವತಿಯವರು ಬೆಂಗಳೂರಿನ ನೆಲಮಂಗಲದ ಸೋಲದೇವನಹಳ್ಳಿ ಯಲ್ಲಿ ನೆಲೆಸಿದ್ದಾರೆ. ಮೊದಲು ಚೆನ್ನೈನಲ್ಲಿ ಇದ್ದ ಇವರು ಬೆಂಗಳೂರಿಗೆ ಬಂದ ನಂತರ ಕೃಷಿಕರಾಗಿ ತಮ್ಮನ್ನು ಗುರುತಿಸಿಕೊಂಡು, ಮಗ ವಿನೋದ್ ರಾಜರೊಂದಿಗೆ ತಮ್ಮ ಕೈಲಾದ ಸಮಾಜ ಸೇವೆಯನ್ನು ಮಾಡುತ್ತ ಜೀವಿಸುತ್ತಿದ್ದಾರೆ. ಕಷ್ಟ ಸುಖಗಳ ಅನುಭವಿರುವ ಇವರು ತಮ್ಮದೇ ಸ್ವಂತ ಖರ್ಚಿನಲ್ಲಿ ಸುತ್ತಮುತ್ತಲ ಹಳ್ಳಿಗಳಿಗೆ ಅನುಕೂಲವಾಗುವಂತೆ, ಆಸ್ಪತ್ರೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಜನ ರೋಗದ ಭೀತಿಯೊಂದೆಡೆ ಆದರೆ ಆಹಾರ ಮತ್ತು ಔಷಧೋಪಚಾರಗಳ ಸಮಸ್ಯೆಯಿಂದ ನೋವು ಅನುಭವಿಸಿದ್ದಾರೆ. ಅಂತಹ ಸಮಯದಲ್ಲಿ ಲೀಲಾವತಿಯವರು ಮಗ ವಿನೋದ್ ರಾಜ್ರೊಂದಿಗೆ ತಮ್ಮ ಹಳ್ಳಿಗರ ಕಷ್ಟಕ್ಕೆ ಸಹಾಯಹಸ್ತ ನೀಡಿದ್ದಾರೆ.

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಮಾತ್ರವಲ್ಲದೆ ಚೆನ್ನೈನಲ್ಲಿ ಕೂಡ ಲೀಲಾವತಿಯವರು ಆಸ್ತಿಯನ್ನು ಹೊಂದಿದ್ದಾರೆ. ಅವರಿವರ ವ್ಯಂಗ್ಯ ಹೇಳಿಕೆಗಳಿಗೆ ತಲೆಗೊಡದೆ, ಚಿತ್ರರಂಗದಲ್ಲಿ ನಿರಂತರ ಸೇವೆ ಸಲ್ಲಿಸಿರುವುದರ ಫಲವೆನ್ನಬಹುದು. ಅವರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದಾಗ ದೊರೆತ ಹಣದಲ್ಲಿ ಭೂಮಿಯನ್ನು ಖರೀದಿಸುತ್ತಿದ್ದರಂತೆ. ಸುಮಾರು 17 ಎಕರೆ ಭೂಮಿಯು ಇವರ ಹೆಸರಿನಲ್ಲಿದೆಯಂತೆ.

https://youtu.be/4o_zA82La50

ಸಂದರ್ಶನ ಒಂದರಲ್ಲಿ ಆಸ್ತಿಯ ಬಗ್ಗೆ ಕೇಳಿದಾಗ ಲೀಲಾವತಿಯವರು ‘ಹನಿ ಹನಿ ಹಣಗಳನ್ನು ಒಟ್ಟುಗೂಡಿಸಿ ತೆಗೆದುಕೊಂಡಂತ ಭೂಮಿಯದು. ಈಗ ಕೋಟಿ ಬೆಲೆಬಾಳಬಹುದು; ಆದರೆ ಆಗ ಆಗಿನ ಕಾಲದಲ್ಲಿ ಕಷ್ಟಪಟ್ಟು ಲಕ್ಷಗಟ್ಟಲೆ ಹಣ ಹೊಂದಿಸಿ ಖರೀದಿಸಿದ ಭೂಮಿಯದು. ಕೆಲಸಗಾರರಿಗೆ ಸಂಬಳ ಹೊಂದಿಸುವ ಸಂದರ್ಭದಲ್ಲಿ ಮತ್ತು ಸೂಚನೆ ಇಲ್ಲದೆ ಬರುವ ಕಷ್ಟಕಾಲದಲ್ಲಿ ಒಂದೊಂದೇ ಎಕರೆ ಮಾರಿ ಬದುಕಿದ್ದಿದೆ’ಎಂದಿದ್ದಾರೆ.ಮಗ ವಿನೋದ್ ರಾಜ್ ಕೂಡ ಅದೇ ಸಂದರ್ಶನದಲ್ಲಿ ‘ಅಕ್ಕಪಕ್ಕದವರ ನೋಡಿ ನಮಗಿಲ್ಲವಲ್ಲ ಎಂಬ ಚಿಂತೆ ಬಿಟ್ಟು, ಇರುವುದರಲ್ಲೇ ತೃಪ್ತಿಪಡಬೇಕು’ ಎಂಬ ಸಂದೇಶವನ್ನು ನೀಡಿದ್ದಾರೆ.

Leave a Comment

error: Content is protected !!