Leelavathi: 600ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಲೀಲಾವತಿ ಅವರ ಈಗಿನ ನಿಜವಾದ ವಯಸ್ಸೆಷ್ಟು ಗೊತ್ತಾ?

Actress Leelavathi ನಟಿ ಲೀಲಾವತಿಯವರು ಕನ್ನಡ ಚಿತ್ರರಂಗದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಕೂಡ ನಟನೆ ಮಾಡಿಕೊಂಡು ಬಂದವರು. ಆರಂಭದಲ್ಲಿ ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡ ಲೀಲಾವತಿಯವರು(Leelavathi) ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಪೋಷಕ ಕಲಾವಿದೆಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

600 ಸಿನಿಮಾಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳನ್ನು ನಟಿ ಲೀಲಾವತಿ(Leelavathi) ಅವರು ಕನ್ನಡ ಚಿತ್ರರಂಗದಲ್ಲಿಯೇ ಮಾಡಿದ್ದಾರೆ. ಕೇವಲ ಅವರು ಮಾತ್ರವಲ್ಲದೆ ಅವರ ಮಗ ಆಗಿರುವಂತಹ ವಿನೋದ್ ರಾಜ್(Vinod Raj) ಕೂಡ ಆರಂಭಿಕ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಭರವಸೆಯ ನಾಯಕ ನಟನಾಗಿ ಅದರಲ್ಲೂ ವಿಶೇಷವಾಗಿ ತಮ್ಮ ಡಾನ್ಸ್ ಪರ್ಫಾರ್ಮೆನ್ಸ್ ಮೂಲಕ ಎಲ್ಲರಲ್ಲಿಯೂ ಕೂಡ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ನಿರೀಕ್ಷೆಯನ್ನು ಮೂಡಿಸಿದ್ದರು.

ಆದರೆ ಅಂದುಕೊಂಡಂತೆ ಯಾವುದೂ ಕೂಡ ಆಗಲಿಲ್ಲ ಎನ್ನುವುದೇ ಮತ್ತೊಂದು ಬೇಸರದ ವಿಚಾರ. ವಿನೋದ್ ರಾಜ್(Vinod Raj) ಅವರು ಹಾಗೂ ತಾಯಿ ಲೀಲಾವತಿ ಇಬ್ಬರೂ ಕೂಡ ಈಗ ಕೃಷಿ ಮಾಡಿಕೊಂಡು ಸಂತೋಷದ ಜೀವನ ನಡೆಸುತ್ತಿದ್ದರು ಕೂಡ ಮತ್ತೊಮ್ಮೆ ಅವರು ಕೆಲವೊಂದು ವಿಚಾರಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿ ಆಗುತ್ತಿರುವುದು ನಿಮಗೆಲ್ಲರಿಗೂ ಯಾವ ಕಾರಣಕ್ಕೆ ಎನ್ನುವುದು ಗೊತ್ತೇ ಇದೆ.

ಇನ್ನು ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಇರುವಂತಹ ನಟಿ ಲೀಲಾವತಿ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಮಿತ್ರರೇ, ಇಳಿ ವಯಸ್ಸಿನಲ್ಲಿ ಕೂಡ ಸಮಾಜ ಸೇವೆಗಳನ್ನು ಮಾಡುತ್ತಿರುವ ನಟಿ ಲೀಲಾವತಿ ಅವರ ನಿಜವಾದ ವಯಸ್ಸು 86 ವರ್ಷ ವಯಸ್ಸಾಗಿದೆ.

Leave a Comment

error: Content is protected !!