ಕಷ್ಟಕಾಲದಲ್ಲಿ ಹೆಂಡತಿಯ ತಾಳಿಯನ್ನೇ ಮಾರಿದ್ದ ನಟ ಪ್ರೇಮ್. ಕಷ್ಟದ ದಿನಗಳನ್ನು ನೆನಪಿಸಿಕೊಂಡ ಪ್ರೇಮ್

ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಎಂದೇ ಪ್ರಖ್ಯಾತವಾಗಿರುವ ಪ್ರೇಮ್ ಕುಮಾರ್ ಇವರು 2004ರಲ್ಲಿ ಪ್ರಾಣ ಚಿತ್ರದ ಮೂಲಕ ಮೊದಲ ಹೆಜ್ಜೆಯನಿಟ್ಟರು. ಬಾಕ್ಸ್ ಆಫೀಸ್ನಲ್ಲಿ ತುಂಬಾ ಹಣ ಗಳಿಸದೆ ಇದ್ರು, ಬೇರೆ ಬೇರೆ ನಿರ್ದೇಶಕರು ನಿರ್ಮಾಪಕರು ಇವರನ್ನು ಗುರುತಿಸುವಂತಾಗಿತ್ತು. ಇದರ ಫಲವಾಗಿ 2005ರಲ್ಲಿ ನೆನಪಿರಲಿ ಚಿತ್ರವು ಸೂಪರ್ ಹಿಟ್ ಆಗಿ ಪ್ರೇಮ್ ಅವರ ನಟನೆಗೆ ಬೆಸ್ಟ್ ಆಕ್ಟರ್ ಫಿಲಂಫೇರ್ ಅವಾರ್ಡ್ ಕೂಡ ದೊರಕಿತು. 2006ರಲ್ಲಿ ಮೋಹಕ ತಾರೆ ರಮ್ಯಾ ಅವರೊಂದಿಗೆ ನಟಿಸಿದ ಜೊತೆ ಜೊತೆಯಲಿ ಚಿತ್ರವು ತೆರೆಕಂಡು ಸಕ್ಸಸ್ ತಂದು ಕೊಟ್ಟಿತು.

ಒಂದರ ಹಿಂದೆ ಒಂದು ಪ್ರೇಮಕಥೆಯ ಚಿತ್ರ ದಲ್ಲಿ ಕಾಣಿಸಿಕೊಂಡ ಪ್ರೇಮವರಿಗೆ ‘ಲವ್ಲಿ ಸ್ಟಾರ್’ ಎಂಬ ಬಿರುದು ಕೂಡ ಇದೆ. ಪಲ್ಲಕ್ಕಿ, ಗುಣವಂತ, ಸವಿ ಸವಿ ನೆನಪು, ಹೊಂಗನಸು, ಜೊತೆಗಾರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಚಾರ್ಮಿನಾರ್ ಚಿತ್ರದಲ್ಲಿ ಇವರ ನಟನೆಗೆ ಪ್ರಶಂಸೆಗಳ ಸಾಗರವೇ ಹರಿದುಬಂದಿತ್ತು. ಎರಡನೇ ಬಾರಿ ಬೆಸ್ಟ್ ಆಕ್ಟರ್ ಫಿಲಂಫೇರ್ ಅವಾರ್ಡ್ ದೊರಕಿತು. ಮಲ್ಟಿಸ್ತಾರರ್ ಚಿತ್ರವಾದ ಚೌಕವು ಆ ವರ್ಷದ ಹೆಚ್ಚು ಹಣ ಗಳಿಸಿದ ಚಿತ್ರವಾಗಿತ್ತು. ಸುಮಾರು 20 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಇವೆಲ್ಲ ವಿಚಾರಗಳು ಇವರ ಚಿತ್ರರಂಗದಲ್ಲಿನ ಸಾಧನೆಯನ್ನು ಹೇಳುತ್ತೀವೆ.

ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಯಾರನ್ನೂ ಬಿಡದ ಕಷ್ಟಗಳು ಇವರಿಗೂ ಎದುರಾಗಿತ್ತು. ನಟನೆಯ ಕಲೆ, ನಾಯಕನಾಗಲು ತಕ್ಕಾದ ಮೈಕಟ್ಟು, ಸೌಂದರ್ಯಗಳಿದ್ದರೂ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಅವಕಾಶಗಳನ್ನು ಹುಡುಕಿಕೊಂಡು ಚಿತ್ರರಂಗದಲ್ಲಿ ಹೆಸರುಗಳಿಸುವುದು ಸುಲಭದ ಮಾತಲ್ಲ. ಸಾಮಾನ್ಯ ವರ್ಗದ ಯುವಕನಾಗಿ ತಾನು ಪಟ್ಟ ಕಷ್ಟಗಳನ್ನು ಮುಕ್ತವಾಗಿ ಎಲ್ಲರೆದುರು ಹೇಳಿಕೊಂಡಿದ್ದಾರೆ.

ಪ್ರೇಮ್ ಅವರು ಚಿತ್ರರಂಗವನ್ನು ಪ್ರವೇಶಿಸುವುದಕ್ಕಿಂತ ಮೊದಲು ಶಿಕ್ಷಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಆ ಸಮಯದಲ್ಲಿ ಜ್ಯೋತಿ ಎಂಬ ಯುವತಿಯನ್ನು ಪ್ರೀತಿಸುತ್ತಾರೆ. ಮದುವೆಗೆ ಎರಡು ಕಡೆಯ ಕುಟುಂಬಸ್ಥರಿಂದ ಸಮ್ಮತಿ ದೊರೆಯುವುದಿಲ್ಲ. ಪ್ರೀತಿಸಿದ ಜ್ಯೋತಿಯನ್ನೇ ಮದುವೆಯಾಗಬೇಕೆಂದು ಪ್ರೇಮ್ ಅವರು ಆಂಬುಲೆನ್ಸ್ ನಲ್ಲಿ ಕದ್ದು ಮುಚ್ಚಿ ದೇವಸ್ಥಾನ ತಲುಪಿ ಮದುವೆಯಾಗುತ್ತಾರೆ. ಮನೆಯವರ ವಿರುದ್ಧವಾಗಿ ಬಂದ ಈ ಜೋಡಿಗೆ ಕೈಯಲ್ಲಿ ಕೆಲಸವೂ ಇಲ್ಲ; ಮನೆಯವರ ಹಣ ಸಹಾಯವೂ ಇಲ್ಲ. ಯಾವುದೇ ಕಷ್ಟ ಬಾರದಂತೆ ಜ್ಯೋತಿಯನ್ನು ನೋಡಿಕೊಳ್ಳಬೇಕೆಂಬ ಪ್ರೇಮವರ ಆಸೆಯು ಅನಿವಾರ್ಯದ ಪರಿಸ್ಥಿತಿಯಿಂದ ನುಚ್ಚುನೂರಾಯಿತು.

ಸಂದರ್ಶನ ಒಂದರಲ್ಲಿ ಪ್ರೇಮ್ ಹೀಗೆ ಹೇಳಿದ್ದಾರೆ; ‘20,000 ರೂಪಾಯಿಗಳನ್ನು ಸಾಲವಾಗಿ ಪಡೆದವರಲ್ಲಿ ವಾಪಸ್ ನೀಡಬೇಕಾಗಿತ್ತು. ನನ್ನ ಕೈಲಿ ಹಣವಿರಲಿಲ್ಲ. ಈ ವಿಷಯವನ್ನು ಹೆಂಡತಿಗೆ ಹೇಳಿದಾಗ ಆಕೆಯು ತಡ ಮಾಡದೆ ತಾಳಿಯ ಚೈನನ್ನು ಬಿಚ್ಚಿಕೊಟ್ಟು, ಅದರ ಮೂಲಕ ಸಾಲ ತೀರಿಸಿದ್ದೆನು. ವರಮಹಾಲಕ್ಷ್ಮಿ ಪೂಜೆಯ ದಿನದಂದು ಎಲ್ಲಾ ಹೆಣ್ಣು ಮಕ್ಕಳು ಚಿನ್ನವನ್ನು ಖರೀದಿಸುತ್ತಾರೆ ಆದರೆ ನಾನು ನನ್ನ ಹೆಂಡತಿಯ ತಾಳಿಯ ಸರವನ್ನೇ ಮಾರಿ ಬದುಕಿದ್ದೇನೆ. ನಂತರ ಚಿತ್ರರಂಗದ ಮೂಲಕ ಗಳಿಸಿದ ಹಣದಲ್ಲಿ ಆಕೆಗೆ ಕಾಸ್ಟ್ಲಿ ನೆಕ್ಲೆಸ್ ಒಂದನ್ನು ಸರ್ಪ್ರೈಸ್ ಗಿಫ್ಟಾಗಿ ನೀಡಿದ್ದೇನೆ’ ಎಂದಿದ್ದಾರೆ.

Leave a Comment

error: Content is protected !!