Kishore Kannada Actor: 20 ಲಕ್ಷ ಸಂಬಳ ಇದ್ದರೂ ಕೂಡ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಪತ್ನಿ ಮಾಡುತ್ತಿರುವುದೇನು ಗೊತ್ತಾ?


Actor Kishore ನಟ ಕಿಶೋರ್ ಕುಮಾರ್(Actor Kishore Kumar) ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವಂತಹ ಪೋಷಕ ಹಾಗೂ ಖಳನಟ. ಇತ್ತೀಚಿಗಷ್ಟೇ ಕಾಂತಾರ(Kantara) ಸಿನಿಮಾದಲ್ಲಿ ಕೂಡ ಅರಣ್ಯ ಅಧಿಕಾರಿಯ ಪಾತ್ರದ ಮೂಲಕ ಎಲ್ಲರ ಮನಸೂರೆಗೊಂಡವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ಲೀಲಾಜಾಲವಾಗಿ ನೀರು ಕುಡಿದಷ್ಟು ಸುಲಭವಾಗಿ ಮಾಡಬಲ್ಲಂತಹ ನಟ ಎನ್ನಬಹುದು.

ಇನ್ನು ಕಿಶೋರ್ ಕುಮಾರ್(Kishore Kumar) ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ವಿಶಾಲಾಕ್ಷಿ(Vishalakshi) ಎನ್ನುವವರನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ಕೂಡ ಮದುವೆಯಾಗಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ಆ ಸಂದರ್ಭದಲ್ಲಿ ಅವರು ಪ್ರೊಫೆಸರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು ಹಾಗೂ ವಿಶಾಲ(Vishala) ಅವರು ಒಳ್ಳೆಯ ಅನುಕೂಲಸ್ತ ಕುಟುಂಬದಿಂದ ಬಂದವರು. ಇದೆಲ್ಲಾ ಆದ ನಂತರವೇ ಕಿಶೋರ್ ಅವರಿಗೆ ಚಿತ್ರರಂಗದಲ್ಲಿ ಅವಕಾಶ ದೊರೆತದ್ದು.

Actor Kishore With wife Vishala

ಇನ್ನು ಅಂದಿನ ಕಾಲದಲ್ಲಿ ಕಿಶೋರ್(Kishore) ಅವರ ಪತ್ನಿ ವಿಶಾಲ ಅವರಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ವರ್ಷಕ್ಕೆ 20 ಲಕ್ಷ ರೂಪಾಯಿ ಸಂಬಳ ದೊರೆಯುತ್ತಿತ್ತು. ಈಗಂತೂ ಬಿಡಿ ಅವರ ಸಂಬಳದ ವ್ಯಾಲ್ಯೂ ಲೆಕ್ಕಕ್ಕೆ ಸಿಗದು. ಹೇಗಿದ್ದರೂ ಕೂಡ ಸೆಲೆಬ್ರಿಟಿಯ ಮನಸ್ಥಿತಿ ಹೊಂದಿರದೆ ಇಬ್ಬರೂ ಕೂಡ ಬೆಂಗಳೂರಿಂದ ಮೂವತ್ತು ಕಿಲೋಮೀಟರ್ ದೂರ ಇರುವ ಕರಿಯಪ್ಪನ ದೊಡ್ಡಿಯನ್ನುವ ಹಳ್ಳಿಯಲ್ಲಿ ಭೂಮಿಯನ್ನು ಖರೀದಿಸಿ ಕೃಷಿ ಮಾಡಲು ಪ್ರಾರಂಭಿಸುತ್ತಾರೆ. ಕಿಶೋರ್ ಆಗಲಿ ಅಥವಾ ಅವರ ಪತ್ನಿ ಆಗಲಿ ಸಿನಿಮಾ ಅಥವಾ ಯಾವುದಾದರೂ ಪ್ರಮುಖ ಕೆಲಸ ಇದ್ದರೆ ಮಾತ್ರ ನಗರದಲ್ಲಿ ಇರುತ್ತಿದ್ದರು ಇಲ್ಲದಿದ್ದರೆ ಹಳ್ಳಿಯಲ್ಲಿಯೇ ಅವರ ವಾಸ.

ಸ್ವಲ್ಪ ಸೆಲೆಬ್ರಿಟಿ ಸ್ಟೇಟಸ್ ಬಂದ್ರೆ ಸಾಕು ಬೆಂಗಳೂರಿನಂತಹ ನಗರಗಳಲ್ಲಿ ಐಷಾರಾಮಿ ಜೀವನವನ್ನು ನಡೆಸಬೇಕು ಎನ್ನುವ ಕನಸನ್ನು ಕಾಣುವಂತಹ ಸೆಲೆಬ್ರಿಟಿಗಳ ನಡುವೆ ಕಿಶೋರ್(Kishore) ಹಾಗೂ ಅವರ ಪತ್ನಿ ಎಲ್ಲರಿಗೂ ಕೂಡ ಮಾದರಿ. ಕೃಷಿಕನಾಗಿ ಬಾಳಬೇಕು ಎನ್ನುವ ಕಿಶೋರ್ ಹಾಗೂ ಅವರ ಪತ್ನಿಯ ಕನಸು ಹಾಗೂ ಈಗ ಆ ಕನಸಿನಂತೆ ನಡೆದುಕೊಳ್ಳುತ್ತಿರುವ ಅವರ ಜೀವನದ ರೀತಿ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಲಿ ಎಂಬುದಾಗಿ ಹಾರೈಸೋಣ.


Leave A Reply

Your email address will not be published.