Kgf Chapter 2: ಕೆಜಿಎಫ್ ಚಾಪ್ಟರ್ 2ನ ಮೇನ್ ವಿಲನ್ ಆಗಿದ್ದ ಅಚ್ಯುತ್ ಕುಮಾರ್ ಸಿನಿಮಾಗಾಗಿ ಪಡೆದಿದ್ದ ಸಂಭಾವನೆ ಎಷ್ಟು ಅಂತ ನೀವೇ ನೋಡಿ!

Achyuth Kumar ಕೆಜಿಎಫ್ ಚಾಪ್ಟರ್ 2(Kgf Chapter 2) ಎಂದಾಗ ನಾವು ಮೊದಲಿಗೆ ರಾಕಿ ಬಾಯ್ ಪಾತ್ರವನ್ನು ನಿರ್ವಹಿಸಿರುವ ರಾಕಿಂಗ್ ಸ್ಟಾರ್ ಯಶ್(Yash) ರವರ ಬಗ್ಗೆ ಮಾತನಾಡುತ್ತೇವೆ. ರಮಿಕ ಸೇನ್ ಪಾತ್ರವನ್ನು ಮಾಡಿರುವಂತಹ ರವೀನ ತಂಡನ್(Raveena Tandon) ಅವರ ಬಗ್ಗೆ ಮಾತನಾಡುತ್ತೇವೆ. ಅಥವಾ ಅದೀರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್(Sanjay Dutt) ಅವರ ಬಗ್ಗೆ ಕೂಡ ಚರ್ಚೆ ನಡೆಯಬಹುದು.

ಆದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಿಜವಾದ ವಿಲನ್ ಆಗಿ ಕಾಣಿಸಿಕೊಳ್ಳುವುದು ಗುರುಪಾಂಡ್ಯನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್(Achyuth Kumar) ರವರು. ಪ್ರತಿಯೊಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವರನ್ನು ಅಚ್ಯುತಣ್ಣ ಎಂಬುದಾಗಿ ಕರೆಯುತ್ತಾರೆ. ಊಟಕ್ಕೆ ಉಪ್ಪಿನಕಾಯಿ ಹೇಗೆ ಮುಖ್ಯವೋ ಸಿನಿಮಾದಲ್ಲಿ ಅವರ ಪೋಷಕ ಪಾತ್ರವೂ ಕೂಡ ಅಷ್ಟೇ ಮುಖ್ಯ ಎನ್ನುವಂತಿದೆ ಪ್ರತಿಯೊಂದು ಸಿನಿಮಾದಲ್ಲಿ ಅವರ ಪಾತ್ರಗಳು.

ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಪೋಷಕ ನಟರಲ್ಲಿ ಅಚ್ಯುತ್ ಕುಮಾರ್ ಅವರು ಪ್ರಥಮ ಸ್ಥಾನದಲ್ಲಿ ಕಂಡುಬರುತ್ತಾರೆ. ಇನ್ನು ಕೆಜಿಎಫ್ ಚಾಪ್ಟರ್ 2(KGf 2) ಸಿನಿಮಾದಲ್ಲಿ ಕೊನೆಯವರೆಗೂ ಕೂಡ ಅವರೇ ಮುಖ್ಯ ವಿಲ್ಲನ್ ಎಂಬುದಾಗಿ ತಿಳಿದು ಬರುವುದಿಲ್ಲ ಅಷ್ಟರಮಟ್ಟಿಗೆ ಅವರ ಪಾತ್ರದ ಗೌಪ್ಯತೆ ಎಲ್ಲರನ್ನೂ ಕಾಡಿತ್ತು. ಇನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಗುರುಪಾಂಡಿಯನ್(Gurupandian) ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಚ್ಯುತ್ ಕುಮಾರ್ ಪಡೆದ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಬಹು ಬೇಡಿಕೆಯ ಪೋಷಕ ನಟ ಎಂದ ಮೇಲೆ ಅವರ ಸಂಭಾವನೆ ಕೂಡ ಅದೇ ಲೆವೆಲ್ ನಲ್ಲಿ ಇರುತ್ತದೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2 ನಂತಹ ಸಿನಿಮಾ ಎಂದ ಮೇಲೆ ಸಂಭಾವನೆ ಕೂಡ ಹೆಚ್ಚಾಗಿಯೇ ಇರಬೇಕು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಚ್ಯುತ್ ಕುಮಾರ್(Achyuth Kumar) ರವರು 55 ರಿಂದ 60 ಲಕ್ಷ ಸಂಭಾವನೆಯನ್ನು ಪಡೆದಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಅಚ್ಯುತ್ ಕುಮಾರ್ ರವರ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!