ರಾಕಿಂಗ್ ಸ್ಟಾರ್ ಯಶ್ ಧರಿಸುವ ಡೈಮಂಡ್ ಇಯರ್ ರಿಂಗ್ ಬೆಲೆ ಎಷ್ಟು ಗೊತ್ತಾ? ಯಪ್ಪಾ ಏನ್ ಗುರು ದುಬಾರಿ!


ಕೆಜಿಎಫ್ ಸರಣಿ ಚಿತ್ರಗಳು ಬಿಡುಗಡೆಯಾದ ಮೇಲಿಂದ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಗಿರಿಯನ್ನು ಅನುಭವಿಸುತ್ತಿದ್ದಾರೆ. ಒಂದು ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರಿಗೆ ಗಾಂಧಿನಗರದಲ್ಲಿ ತಮ್ಮ ಕಟೌಟ್ ಬೀಳಬೇಕು ಎನ್ನುವ ಆಸೆ ಇತ್ತು. ಆದರೆ ಇಂದು ಚಿತ್ರರಂಗಕ್ಕೆ ಕಾಲಿಡುತ್ತಿರುವ ಎಷ್ಟೋ ಯುವ ಪೀಳಿಗೆಗೆ ಅವರಂತೆ ಆಗಬೇಕು ಎನ್ನುವ ಆಸೆಯನ್ನು ಮೂಡಿಸುವಂತೆ ಮಾಡಿದ್ದಾರೆ. ಇದೇ ಅಲ್ವಾ ನಿಜವಾದ ಸಾಧನೆ ಎಂದರೇ.

ಇನ್ನು ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ ಆಗಿರುವ ಸೈಮ ಅವಾರ್ಡ್ಸ್ ಕೂಡ ದಶಕದ ಸಂಭ್ರಮವನ್ನು ಇತ್ತೀಚಿಗಷ್ಟೇ ನಮ್ಮ ಬೆಂಗಳೂರಿನಲ್ಲಿ ಆಚರಿಸಿಕೊಂಡಿದೆ. ಇಂತಹ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ ಯಾವತ್ತೂ ಕೂಡ ಹೈದರಾಬಾದ್ ಅಥವಾ ದುಬೈನಲ್ಲಿ ನಡೆಯುತ್ತಿತ್ತು. ಆದರೆ ಈ ವರ್ಷ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು ಇದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ರವರು ಎಂಬುದಾಗಿ ಕೂಡ ಕೇಳಿ ಬಂದಿತ್ತು. ರಾಕಿಂಗ್ ಸ್ಟಾರ್ ಯಶ್ ಅವರು ಪ್ರತಿಬಾರಿ ಕೂಡ ಕನ್ನಡ ಹಾಗೂ ಕನ್ನಡಿಗರು ಹೆಮ್ಮೆಪಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಬಹುದಾಗಿದೆ.

ಇನ್ನು ಇತ್ತೀಚಿಗಷ್ಟೇ ನಡೆದಿರುವ ಸೈಮ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸಾಂಸ್ಕೃತಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಕಣ್ಮನವನ್ನು ಸೆಳೆದಿತ್ತು. ಇದರ ಜೊತೆಗೆ ಅವರು ಕಿವಿಗೆ ಡೈಮಂಡ್ ಇಯರ್ ರಿಂಗ್ ಹಾಕಿಕೊಂಡಿದ್ದರು ಎಂಬುದು ಕೂಡ ಎಲ್ಲರ ಕಣ್ಣಿಗೆ ಬಿದ್ದಿದೆ. ಇದರ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಸ್ನೇಹಿತರೆ, ಇದರ ಒಂದು ಪೀಸ್ ನ ಬೆಲೆ ನಮ್ಮ ಆರು ತಿಂಗಳ ಸಂಬಳ ಎಂದರು ಕೂಡ ತಪ್ಪಾಗಲಾರದು.

ಪ್ರತಿಷ್ಠಿತ ತನೀಶ್ಕ್ ಜ್ಯುವೆಲರಿ ಯಿಂದ ಖರೀದಿಸಿರುವ ಈ ಡೈಮಂಡ್ ಇಯರ್ ರಿಂಗ್ ನ ಒಂದು ಪೀಸ್ ನ ಬೆಲೆ ಭರ್ಜರಿ 1.5 ಲಕ್ಷ ರೂಪಾಯಿಗಳಾಗಿವೆ. ಕೇವಲ ಸಿನಿಮಾದಲ್ಲಿ ಜಬರ್ದಸ್ತಾಗಿ ನಟಿಸುವುದರಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ದುಬಾರಿಯಾಗಿ ಬದುಕುವುದಕ್ಕೆ ರಾಕಿಬಾಯ್ ಗೆ ಗೊತ್ತಿದೆ ಎಂಬುದಾಗಿ ನೆಟ್ಟಿಗರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.


Leave A Reply

Your email address will not be published.