Lord Shani Dev: ಜೀವನದಲ್ಲಿ ಎಷ್ಟೇ ಕಷ್ಟ ಇರಲಿ ಈ ರಾಶಿಯವರ ಜೊತೆಗಿದ್ದು ಕೈ ಹಿಡಿದು ನಡೆಸುತ್ತಾನೆ ಶನಿದೇವ

Lord Shani dev: :ಶನಿ ಜಯಂತಿ (Shani Jayanti) ಎಂದರೆ ಶನಿದೇವನು ಜನಿಸಿದ ಪುಣ್ಯ ದಿನ. ಶನಿದೇವನನ್ನು ಕರ್ಮಫಲ ದಾತ ಎಂದು ಕರೆಯುತ್ತಾರೆ. ಕರ್ಮದ ಅಧಿಪತಿಯೇ ಶನಿ,ಮನುಷ್ಯ ಮಾಡಿದ ಪಾಪಕರ್ಮಗಳಿಗೆ ಶನಿ ಶಿಕ್ಷೆ ನೀಡುತ್ತಾನೆ. ಶನಿ ದೇವನಿಂದ ಕೆಲವು ರಾಶಿಗಳಿಗೆ ಅಶುಭ ಫಲ ಉಂಟಾಗುತ್ತದೆ ಹಾಗೂ ಇನ್ನೂ ಕೆಲವರಿಗೆ ಶುಭ ಫಲ ಉಂಟಾಗುತ್ತದೆ. ಮೇ 19 ರಂದು ವೈಶಾಖ ಮಾಸದ ಅಮಾವಾಸ್ಯೆಯ ದಿನದಂದು ಶನಿ ಜಯಂತಿ ಆಚರಿಸಲಾಗುತ್ತದೆ. ಶನಿದೇವರ (Shani Dev’s grace) ಕೃಪೆಯಿಂದ ಯಾವ ಯಾವ ರಾಶಿಗಳಿಗೆ ಅದೃಷ್ಟ ಫಲ ದೊರಕಿದೆ ಎಂದು ನಾವು ಇಲ್ಲಿ ನೋಡೋಣ.

ಮೇಷ ರಾಶಿ : (Aries) ಮೊದಲನೇದಾಗಿ ಮೇಷ ರಾಶಿಗೆ ಅದೃಷ್ಟ ಫಲ ದೊರಕುತ್ತದೆ. ಶನಿ ಜಯಂತಿ ಸಮಯದಲ್ಲಿ ಮೇಷ ರಾಶಿಯವರಿಗೆ ಗಜಕೇಸರಿ ಯೋಗ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭವನ್ನು ಕಾಣುತ್ತೀರಿ ಹಾಗೂ ಕೆಲಸದಲ್ಲಿ ಕೂಡ ಹೆಚ್ಚಿನ ಅವಕಾಶ ಸಿಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ.

ಮಿಥುನ ರಾಶಿ : (Gemini) ಗಜಕೇಸರಿ ಯೋಗದಿಂದಾಗಿ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ ಹಾಗೂ ಆರೋಗ್ಯದಲ್ಲಿ ತುಂಬಾ ಸುಧಾರಣೆ ಕಾಣುತ್ತೀರಿ. ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ದೊರಕುವ ಸಾಧ್ಯತೆಗಳು ತುಂಬಾ ಹೆಚ್ಚಾಗಿದೆ ಪ್ರಯತ್ನ ಪಟ್ಟರೆ ಒಂದು ಒಳ್ಳೆಯ ಕೆಲಸ ಸಿಗುತ್ತದೆ.

ತುಲಾ ರಾಶಿ : (Libra) ತುಲಾ ರಾಶಿಯವರ ಮೇಲೆ ಶನಿದೇವನ ಕೃಪೆ ಯಾವಾಗಲೂ ಇರುತ್ತದೆ. ಶನಿ ಜಯಂತಿಯಂದು ಪೂಜೆ ಮಾಡುವುದರಿಂದ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ ಹಾಗೂ ಒಳ್ಳೆಯ ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ.

ಇದನ್ನೂ ಓದಿ..ಒಂದು ವರ್ಷದ ನಂತರ ಸೂರ್ಯನ ಕೃಪೆಯಿಂದ ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ.

Leave a Comment

error: Content is protected !!