ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ.

ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು ಬದಲಿಸಿಕೊಂಡಿದ್ದನ್ನು ಕೂಡ ನೀವು ನೋಡಿರುತ್ತೀರಿ. ಹೆಸರು ಬದಲಾದ ನಂತ್ರ ಅದೃಷ್ಟ ಬದಲಾದ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಮದುವೆಯಾಗುವ ಸಂದರ್ಭದಲ್ಲಿ ನಾವು ಜಾತಕ ನೋಡ್ತೇವೆ. ಆದ್ರೆ ಹೆಸರಿಗೆ ಹೆಚ್ಚು ಮಹತ್ವ ನೀಡಲು ಹೋಗುವುದಿಲ್ಲ. ಶಾಸ್ತ್ರದಲ್ಲಿ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರ, ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗಿದೆ. ಶಾಸ್ತ್ರದಲ್ಲಿ ವ್ಯಕ್ತಿಯ ಹೆಸರಿನ ಮಹತ್ವವನ್ನು ಹೇಳಲಾಗಿದೆ. ಹಾಗೆಯೇ ಯಾವ ಹೆಸರಿನಿಂದ ಶುರುವಾಗುವ ಹುಡುಗಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನೂ ಹೇಳಲಾಗಿದೆ.

ಜ್ಯೋತಿಷ್ಯದ ಪ್ರಕಾರ, ಕೆಲ ಹೆಸರಿನ ಹುಡುಗಿಯರು ತಾವು ಮದುವೆಯಾಗುವ ಹುಡುಗನಿಗೆ ಅದೃಷ್ಟ ತರ್ತಾರೆ. ಮದುವೆಯ ನಂತರ ಹುಡುಗರಿಗೆ ಲಾಟರಿ ಹೊಡೆದಂತೆ. ಜೀವನ ಪರ್ಯಂತ ಲಕ್ಷ್ಮಿ ಮನೆಯಲ್ಲಿರುತ್ತಾಳೆ. ಸಂಪತ್ತಿನ ದೇವರ ಕೃಪೆಯಿರುವ ಹುಡುಗಿಯರು ಮನೆಯಲ್ಲಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.

ಹೆಸರು ವ್ಯಕ್ತಿಯ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಇದನ್ನು ಧರ್ಮಗ್ರಂಥಗಳಲ್ಲಿಯೂ ವಿವರಿಸಲಾಗಿದೆ. ಹಿಂದೂ ಧರ್ಮದಲ್ಲಿ 16 ವಿಧಿಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಹೆಸರಿಡುವ ಆಚರಣೆಯೂ ಒಂದು. ಧರ್ಮಗ್ರಂಥಗಳ ಪ್ರಕಾರ, ಸಂಸ್ಕಾರವು ಒಬ್ಬ ವ್ಯಕ್ತಿಯನ್ನು ತನ್ನ ಸಮುದಾಯದ ಯೋಗ್ಯ ಸದಸ್ಯನನ್ನಾಗಿ ಮಾಡುವ ಮೂಲಕ ಅವನ ದೇಹ, ಮನಸ್ಸನ್ನು ಪವಿತ್ರೀಕರಿಸುವ ಧಾರ್ಮಿಕ ಕಾರ್ಯಗಳು. ಅದಕ್ಕಾಗಿಯೇ ಹೆಸರಿಡುವಾಗ ಅತ್ಯಂತ ಕಾಳಜಿ ವಹಿಸಲಾಗುತ್ತದೆ. ಗ್ರಹಗಳ ಸ್ಥಾನವನ್ನು ಲೆಕ್ಕಹಾಕಲಾಗುತ್ತದೆ. ನಾಮಕರಣವನ್ನು ಶುಭ ಮುಹೂರ್ತದಲ್ಲಿ ಮಾಡಲಾಗುತ್ತದೆ.

ಕೆಲವೊಂದು ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಈ ಅಕ್ಷರಗಳಿಂದ ಆರಂಭವಾಗು ಹೆಸರುಳ್ಳ ಹುಡುಗಿಯರು ಪ್ರತಿಯೊಂದು ಕೆಲಸದಲ್ಲಿಯೂ ನಿಪುಣರಾಗಿರುತ್ತಾರೆ ಮತ್ತು ಪತಿ ಮತ್ತು ಅತ್ತೆ-ಮಾವಂದಿರನ್ನು ಗೌರವಿಸುವಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತಾರೆ. ಅವರು ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿಲ್ಲ ಎಂದು ಹೇಳಲಾಗುತ್ತದೆ. ಅವರು ತಮಗಾಗಿ ಮಾತ್ರವಲ್ಲದೇ ತಮ್ಮ ಗಂಡ ಮತ್ತು ಅತ್ತೆ-ಮಾವಂದಿರಿಗೂ ಸಹ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ.

B ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಹುಡುಗಿಯರು ತಮ್ಮ ಅತ್ತೆ-ಮಾವಂದಿರನ್ನು ಸುಖವಾಗಿ ನೋಡಿಕೊಳ್ಳುತ್ತಾರೆ. ಅವರು ಸಾಕಷ್ಟು ಉಲ್ಲಾಸಭರಿತರಾಗಿರುತ್ತಾರೆ. ಅವರು ತುಂಬಾ ಪ್ರೀತಿಸುವ ಗಂಡನನ್ನು ಪಡೆಯುತ್ತಾರೆ. ಅಲ್ಲದೇ ತಮ್ಮ ಗಂಡನಿಗೆ ತುಂಬಾ ಲಕ್ಕಿ ಕೂಡ ಆಗಿರುತ್ತಾರೆ ಈ ಹುಡುಗಿಯರು. ಅಷ್ಟೇ ಅಲ್ಲ, ಈ ಹೆಸರಿನ ಹುಡುಗಿಯರು ತಾವು ಮದುವೆಯಾಗುವ ಮನೆಯಲ್ಲಿ ಪ್ರಗತಿ ಸಾಧಿಸಲು ಪ್ರಾರಂಭಿಸುತ್ತಾರೆ. ಅವರು ಸಾಕಷ್ಟು ಪ್ರಾಕ್ಟಿಕಲ್ ಆಗಿರುತ್ತಾರೆ ಮತ್ತು ಎಲ್ಲರ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ. ಜೊತೆಗೆ ಅವರು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

E ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರನ್ನು ಸಹ ತುಂಬಾ ಲಕ್ಕಿ ಎನ್ನುತ್ತಾರೆ. ಅವಳು ಮದುವೆಯಾಗುವ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಅವರ ಜೀವನದಲ್ಲಿ ಹಣದ ಕೊರತೆಯಿರೋದಿಲ್ಲ. ಅವಳು ತನ್ನ ಪತಿ ಮತ್ತು ಅತ್ತೆ-ಮಾವಂದಿರ ಹೃದಯ ಸುಲಭವಾಗಿ ಗೆಲ್ಲುತ್ತಾಳೆ. ಅವರು ತುಂಬಾ ಪ್ರೀತಿಯ ಗಂಡನನ್ನು ಪಡೆಯುತ್ತಾರೆ.

L ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ತಮ್ಮ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಅವರು ಶ್ರೀಮಂತ ಕುಟುಂಬದಲ್ಲಿ ಮದುವೆಯಾಗುತ್ತಾರೆ ಮತ್ತು ಮದುವೆಯ ನಂತರ, ಅವರ ಪತಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಪಡೆಯಲು ಪ್ರಾರಂಭಿಸುತ್ತಾರೆ.
L ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರನ್ನು ಅತ್ತೆ, ಮಾವ, ಗಂಡ, ಫ್ಯಾಮಿಲಿ ಹೀಗೆ ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಅವರು ಸ್ವಭಾವದಲ್ಲಿ ಸಾಕಷ್ಟು ಒಳ್ಳೆಯವರು ಮತ್ತು ಎಲ್ಲರನ್ನೂ ಸಂತೋಷವಾಗಿಡಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಇದರಿಂದ ಇವರ ಜೀವನವು ಸುಂದರವಾಗಿರುತ್ತದೆ.

K ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಹುಡುಗಿಯರು ತಮ್ಮ ಕುಟುಂಬ ಸದಸ್ಯರನ್ನು ತುಂಬಾ ಪ್ರೀತಿಸುತ್ತಾರೆ. ಅವರು ಅವರನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅವರು ಎಲ್ಲರ ಸಂತೋಷವನ್ನು ನೋಡಿಕೊಳ್ಳುತ್ತಾರೆ. ಮದುವೆಯಾಗಿ ಹೋಗುವ ಮನೆಯಲ್ಲಿ ಸಂಪತ್ತು ಹೆಚ್ಚೇ ಇರುತ್ತದೆ, ಜೊತೆಗೆ ಇವರ ಕಾಲ್ಗುಣದಿಂದ ಮತ್ತಷ್ಟು ಪ್ರಗತಿ ಹೊಂದುತ್ತಾರೆ.

By admin

Leave a Reply

Your email address will not be published.