Astrology: ಪ್ರೀತಿಯಲ್ಲಿ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಈ ಐದು ರಾಶಿಯವರು!

Horoscope ಕೆಲವೊಂದು ಪ್ರೀತಿಯ ಸಂದರ್ಭದಲ್ಲಿ ಎದುರು ಇರುವಂತಹ ಸಂಗಾತಿ ಪ್ರೀತಿಸದಿದ್ದರೂ ಕೂಡ ಒನ್ ಸೈಡ್ ಲವ್(One Side Love) ಮಾಡುತ್ತಿರುತ್ತಾರೆ. ಪ್ರೀತಿಯಲ್ಲಿ ಇವರನ್ನು ಮೀರಿಸುವಂತಹ ಮತ್ತೊಬ್ಬರು ಯಾರು ಇರುವುದಿಲ್ಲ. ಅಷ್ಟರ ಮಟ್ಟಿಗೆ ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಹಾಗಿದ್ದರೆ ಆ ಐದು ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ(Vrishabha Rashi); ಪ್ರೀತಿಯ ಸಂಬಂಧದಲ್ಲಿ ವೃಷಭ ರಾಶಿಯವರು ಅತ್ಯಂತ ನಿಷ್ಠಾವಂತರು ಹಾಗೂ ಪ್ರಾಮಾಣಿಕರು ಆಗಿರುತ್ತಾರೆ ಆದರೆ ಕೆಲವೊಮ್ಮೆ ಹಠಮಾರಿಗಳಾಗಿ ಕಾಣಿಸಿಕೊಳ್ಳಬಹುದು. ಒನ್ ಸೈಡ್ ಲವ್ ನಲ್ಲಿ ವೃಷಭ ರಾಶಿಯವರು ತಮ್ಮದೇ ಅಗತ್ಯಗಳ ಮೇಲೆ ಗಮನ ಹರಿಸುತ್ತಾರೆ. ಕಟಕ ರಾಶಿ(Kataka Rashi); ನಮ್ಮ ಸಂಗಾತಿಯ ಕುರಿತಂತೆ ಪ್ರೀತಿಯಲ್ಲಿ ಅತ್ಯಂತ ಕಾಳಜಿ ಹಾಗೂ ಪ್ರೀತಿ ಮತ್ತು ಗೌರವವನ್ನು ಹೊಂದಿರುತ್ತಾರೆ. ಏಕಮುಖ ಪ್ರೀತಿಯಾಗಿದ್ದರೂ ಕೂಡ ಆದಷ್ಟು ಸಂಬಂಧವನ್ನು ಒಳ್ಳೆಯ ರೀತಿಯಲ್ಲಿ ಮೂಡಿ ಬರುವಂತೆ ಪ್ರಯತ್ನ ಪಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ತುಲಾ ರಾಶಿ(Thula Rashi) ಸಂಗಾತಿಯ ಸಂತೋಷಕ್ಕಾಗಿ ಎಲ್ಲವನ್ನೂ ಕೂಡ ತ್ಯಾಗ ಮಾಡುವಂತಹ ಇವರು ತಮ್ಮ ಸಂಗಾತಿಯ ಖುಷಿಗಾಗಿ ಏನು ಮಾಡಲು ಬೇಕಾದರೂ ಸಿದ್ದರಾಗುತ್ತಾರೆ. ಇವರು ಇಷ್ಟೆಲ್ಲ ಮಾಡಿದರು ತಮ್ಮ ಸಂಗಾತಿಯಿಂದ ಮಾತ್ರ ಅದೇ ಪ್ರಮಾಣದ ಪ್ರೀತಿಯನ್ನು ಇವರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಧನು ರಾಶಿ(Dhanu Rashi) ಅತ್ಯಂತ ಸಾಹಸಮೈಗಳಾಗಿರುವ ಇವರು ತಮ್ಮ ಸಂಬಂಧಕ್ಕಾಗಿ ಯಾವ ಪ್ರಯತ್ನವನ್ನು ಪಡಲು ಕೂಡ ಸಿದ್ದರಾಗಿರುತ್ತಾರೆ. ತಮ್ಮ ಸಂಗಾತಿಯ ಸ್ವತಂತ್ರವನ್ನು ಇಷ್ಟಪಡುವಂತಹ ಇವರು ಯಾವುದೇ ಕೆಟ್ಟ ಗಳಿಗೆ ನಡೆದರು ಕೂಡ ಅದನ್ನು ಸರಿದಾರಿಗೆ ತರಲು ಪ್ರಯತ್ನ ಪಡುತ್ತಾರೆ.

ಮೀನ ರಾಶಿ(Meena Rashi) ತಮಗಿಂತ ಹೆಚ್ಚಾಗಿ ತಮ್ಮ ಸಂಗಾತಿಯ ಇಷ್ಟ ಕಷ್ಟಗಳನ್ನು ಮೊದಲು ಪೂರೈಸಲು ಯೋಚಿಸುವಂತಹ ಇವರು ಅದನ್ನು ಕಾರ್ಯರೂಪಕ್ಕೆ ಕೂಡ ತರುತ್ತಾರೆ ಆದರೆ ಇವರ ಜೊತೆಗೆ ಪ್ರೀತಿಯ ಸಂಬಂಧದಲ್ಲಿ ಇವರು ಅಂದುಕೊಂಡ ಹಾಗೆ ಪ್ರೀತಿ ವಾಪಾಸ್ ಸಿಗುವುದಿಲ್ಲ ಪ್ರೀತಿಯನ್ನು ಕಳೆದುಕೊಳ್ಳುವ ಭಯದಲ್ಲಿ ಕೂಡ ಇವರು ಇರುತ್ತಾರೆ. ಆದರೂ ಕೂಡ ಇವರೆಲ್ಲರೂ ಪ್ರೀತಿಯಲ್ಲಿ ಅತ್ಯಂತ ನಿಷ್ಠರಾಗಿರುವಂತಹ ಏಕಮುಖಿ ಪ್ರೇಮಿಗಳು ಎಂದರೆ ತಪ್ಪಾಗಲಾರದು.

Leave a Comment

error: Content is protected !!