ಸಾವು ಎನ್ನುವುದು ಯಾರು ಯಾವಾಗ ಹೇಗೆ ಆವರಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಈ ಕ್ಷಣ ನಮ್ಮ ಕಣ್ಮುಂದೆ ಇರುವವರು ಇನ್ನು ಕೆಲವೇ ಹೊತ್ತಿನಲ್ಲಿ ಇನ್ನಿಲ್ಲ ಎನ್ನುವಂತಹ ಆಗಬಹುದು. ಸಾವು ನಮ್ಮ ಸಂಬಂಧಿಕರದ್ದೆ ಆಗಬೇಕು ಎಂದೇನು ಇಲ್ಲ ಯಾರೇ ಪ್ರಾ’ಣಬಿಟ್ಟರು ನಮ್ಮ ಕಣ್ಣಿನಿಂದ ಒಂದೆರಡು ಹನಿ ಜಿನುಗುವುದು ಸಾಮಾನ್ಯ. ಅದರಲ್ಲೂ ಇನ್ನೂ ಪ್ರಪಂಚವನ್ನ ಸುತ್ತಬೇಕಾದ, ಬಾಳಿ ಬದುಕಬೇಕಾಗಿದ್ದ ಯುವ ನಟ ಒಬ್ಬ ಪ್ರಾಣವನ್ನ ಕಳೆದುಕೊಂಡನೆಂದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾದಿತೇ.

ಕಿಶೋರ್ ದಾಸ್ ಅಸ್ಸಾಮಿನ ಯುವ ನಟ ಆತನದ್ದು ಸಾಯುವ ವಯಸ್ಸಲ್ಲ ಕೇವಲ 30 ವರ್ಷದ ಯುವ ಪ್ರತಿಭೆಯನ್ನು ಇಂದೂ ಅಸ್ಸಾಂ ಚಿತ್ರರಂಗ ಕಳೆದುಕೊಂಡಿದೆ. ಅಸ್ಸಾಂ ನ ಭರವಸೆಯ ನಟ ಎನಿಸಿಕೊಂಡಿದ್ದ ಕಿಶೋರ್ ದಾಸ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇವರು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ನಾಲ್ಕನೇ ಹಂತದ ಕಿಮೋ ತೆರಫಿ ಚಿಕಿತ್ಸೆ ನಡೆಯುತ್ತಿತ್ತು ಕಿಶೋರ್ ದಾಸ್ ಅವರಿಗೆ. ಈ ಸಂದರ್ಭದಲ್ಲಿ ದುರದೃಷ್ಟ ವಿಷಾದ ಕಿಶೋರ್ ದಾಸ್ ಮೃತಪಟ್ಟಿದ್ದಾರೆ.

ಆದರೆ ಕಿಶೋರ್ ದಾಸ್ ಮೃತಪಟ್ಟಿರುವುದು ಕ್ಯಾನ್ಸರ್ ನಿಂದಲ್ಲ. ಬದಲಿಗೆ ಕರೋನಾದಿಂದ. ಹೌದು ಮೊದಲೇ ಚಿಕಿತ್ಸೆಗೆ ಒಳಪಟ್ಟಿದ್ದ ಕಿಶೋರ್ ದಾಸ್ ಅವರ ಇಮ್ಯುನಿಟಿ ಪವರ್ ಅಷ್ಟು ಉತ್ತಮವಾಗಿ ಇರಲಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಕೋವಿಡ್ 19 ಅಟ್ಯಾಕ್ ಆಗಿತ್ತು. ಹಾಗಾಗಿ ಚಿಕಿತ್ಸೆ ಫಲಕಾರಿಯಾಗಿದೆ ಕಿಶೋರ್ ದಾಸ್ ಕೊನೆಯುಸಿರೆಳೆದಿದ್ದಾರೆ. ಚೆನ್ನೈ ಆಸ್ಪತ್ರೆಯಲ್ಲಿ ಕೊವಿಡ್ ನಿಂದ ಮೃತಪಟ್ಟ ಕಿಶೋರ್ ದಾಸ್ ಅವರನ್ನು ಅಸ್ಸಾಂ ಗೆ ಕರಿದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವ ಹಾಗಿರಲಿಲ್ಲ. ಕೋವಿಡ್ ನಿಯಮಾವಳಿಗಳ ಅನ್ವಯ ಕಿಶೋರ್ ದಾಸ್ ಅವರ ಅಂತ್ಯಕ್ರಿಯೆಯನ್ನು ಚೆನ್ನೈ ನಲ್ಲಿಯೇ ನೆರವೇರಿಸಬೇಕಾಯಿತು.

ಕಿಶೋರ್ ದಾಸ್ ಒಬ್ಬ ಪ್ರತಿಭಾನ್ವಿತ ನಟರಾಗಿದ್ದವರು. ಅಸ್ಸಾಂ ಭಾಷೆಯ ಕಿರುತೆರೆ ಧಾರಾವಾಹಿಯಲ್ಲಿ ಉತ್ತಮ ಹೆಸರಿತ್ತು ಅವರಿಗೆ. ಕಿಶೋರ್ ದಾಸ್ ಕೊನೆಯದಾಗಿ ಅಭಿನಯಿಸಿದ್ದು ‘ದಾದ ತುಮಿ ದೋಸ್ತೋ ಭರ್ ‘ ಎನ್ನುವ ಸಿನಿಮಾದಲ್ಲಿ. ಇನ್ನು ಇತ್ತೀಚಿಗೆ ಚೆನ್ನೈ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ದಾಸ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಬರೆದುಕೊಂಡಿದ್ದರು. ‘ ನಾನು ಕಿಮೋ ಥೆರಪಿಯ ನಾಲ್ಕನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಇದರಿಂದ ಸಾಕಷ್ಟು ಸೈಡ್ ಎಫೆಕ್ಟ್ ಗಳು ಇವೆ. ನಾನು ಸುಸ್ತು, ವಾಂತಿ, ತಲೆತಿರುಗುವುದು ಮೊದಲಾದ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ’ ಎಂದು ತಾವು ಆಸ್ಪತ್ರೆಯಲ್ಲಿ ಇರುವ ಫೋಟೋದ ಜೊತೆಗೆ ಈ ಬರಹವನ್ನು ಪೋಸ್ಟ್ ಮಾಡಿದ್ದರು.

ಕಿಶೋರ್ ದಾಸ್ ಅವರ ಸಾ’ವಿಗೆ ರಾಷ್ಟ್ರದ ಜನತೆ ಸಂತಾಪ ಸೂಚಿಸಿದೆ. ಅವರ ಅಭಿಮಾನಿಗಳು ನಾವು ನಿಮಗಾಗಿ ಕಾಯುತ್ತಿದ್ದೇವೆ ದಾದ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಕೊಡು ದೇವರೇ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

By admin

Leave a Reply

Your email address will not be published.