ನೇಪೋಟಿಸಂ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯಲ್ಲ; ವಿಕ್ರಮ್ ರವಿಚಂದ್ರನ್ ಹೀಗೆ ಹೇಳಿದ್ಯಾಕೆ?
ಇದೀಗ ಸ್ಯಾಂಡಲ್ ವುಡ್ ನ ಸೌಂಡ್ ತುಂಬಾನೇ ಜೋರಾಗಿದೆ. ಕನ್ನಡ ಸಿನಿಮಾಗಳು ವಿಶ್ವಾದ್ಯಂತ ಫೇಮಸ್ ಆಗ್ತಿವೆ. ಅಷ್ಟೇ ಅಲ್ಲ, ಚಂದನವನದ ಹೀರೋ ಅಂದ್ರೆ ಎಲ್ಲಾ ಸಿನಿಮಾ ಚಿತ್ರರಂಗ ಗುರುತಿಸುತ್ತೆ ಕೂಡ. ಆದರೆ ಸಿನಿಮಾ ಇಂಡಸ್ಟ್ರಿ ಎನ್ನುವುದು ಒಂದು ಮಹಾ ಸಾಗರ ಇದ್ದ ಹಾಗೆ. ಇಲ್ಲಿ ಅದೆಷ್ಟೋ ಕಲಾವಿದರು ಬರ್ತಾರೆ ಹೋಗ್ತಾರೆ. ಹಾಗಾಗಿ ಯಾವ ನಟರು ಎಷ್ಟು ಸಿನಿಮಾ ಮಾಡಿದ್ರೂ ಅನ್ನೋದಕ್ಕಿಂತ ಎಷ್ಟು ಕ್ವಾಲಿಟಿ ಸಿನಿಮಾ ಕೊಟ್ಟಿದ್ದಾರೆ ಎಂಬುದು ಮುಖ್ಯವಾಗುತ್ತದೆ.
ಇತ್ತೀಚಿಗೆ ನೀವು ಗಮನಿಸಿರಬಹುದು ಸ್ಯಾಂಡಲ್ ವುಡ್ ಇಂಡಸ್ಟ್ರಿಯ ತೆಗೆದುಕೊಂಡರೆ, ಇಲ್ಲಿ ಹಲವಾರು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಿವೆ. ಈಗಿನ ಸಿನಿಮಾಗಳಲ್ಲಿ ನಟಿಸುವ ನಾಯಕರು ಎಷ್ಟು ಸಿನಿಮಾ ಮಾಡಿದ್ದಾರೆ ಅನ್ನೋದಕ್ಕಿಂತ ಯಾವ ಸಿನಿಮಾ ಮಾಡಿದ್ದಾರೆ ಅನ್ನೋದನ್ನೇ ಜನ ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಯಾಕಂದ್ರೆ ಇಂದು ನಟರ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತ ಇರೋದು. ಸಿನಿಮಾಗಳಲ್ಲಿ ಒಂದೇ ಮುಖವನ್ನು ಹಲವಾರು ಸಿನಿಮಾಗಳಲ್ಲಿ ನೋಡೋದಕ್ಕಿಂತ ಬೇರೆಬೇರೆ ನಟರನ್ನ ಬೇರೆ ಬೇರೆ ಸಿನಿಮಾಗಳಲ್ಲಿ ನೋಡಲು ಜನ ಇಷ್ಟಪಡುತ್ತಾರೆ.
ಇನ್ನು ಈ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್, ನೇಪೋಟಿಸಂ ಬಗ್ಗೆಯೂ ಕೂಡ ಹೇಳಿದ್ದಾರೆ. ‘ಸಿನಿಮಾ ರಂಗದಲ್ಲಿ ನೆಪೋಟಿಸಂ ನಡೆಯೋದಿಲ್ಲ. ಅಂದರೆ ಇಲ್ಲಿ ಯಾರು ನೀನೊಬ್ಬ ಹೀರೋನ ಮಗ ಅಥವಾ ಹೀರೋಯಿನ್ ಮಗ ಅನ್ನುವ ಕಾರಣಕ್ಕೆ ಮಣೆ ಹಾಕಲ್ಲ. ಒಬ್ಬ ಸಿನಿಮಾದಲ್ಲಿ ಹಿಟ್ ಆಗ್ಬೇಕು ಅಂದ್ರೆ, ಅದು ಆತನ ವಯಕ್ತಿಕ ಪ್ರತಿಭೆಯಿಂದ ಮಾತ್ರ ಸಾಧ್ಯ ಎಂದಿದ್ದಾರೆ ವಿಕ್ರಮ್. ಒಂದೇ ಸಿನಿಮಾದಲ್ಲಿ ಯಾರು ಸೂಪರ್ ಸ್ಟಾರ್ ಅನಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮೊದಲನೇ ಸಿನಿಮಾದಲ್ಲಿಯೇ ಗುರುತಿಸಿಕೊಳ್ಳುವುದಕ್ಕೆ ಆಗಲ್ಲ. ನಾನು ಒಬ್ಬ ಹೀರೋನ ಮಗನಾಗಿರಬಹುದು. ಆದರೆ ನಾನೇ ಫೈಟಿಂಗ್ ಕಲಿತು ಫೈಟ್ ಮಾಡಬೇಕು.
ಸಿನಿಮಾ ತರಗತಿಗೆ ಸೇರಿ ನಟನೆಯನ್ನ ಕಲಿಯಬೇಕು. ರವಿಚಂದ್ರನ್ ರೋಮ್ಯಾನ್ಸ್ ಮಾಡಿದಂತೆ ನಾನು ನೂರು ಸಿನಿಮಾ ಮಾಡಿದರು ಹಾಗೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ವಯಕ್ತಿಕವಾಗಿಯೇ ಸಿನಿಮಾದಲ್ಲಿ ಹೆಸರು ಮಾಡಬೇಕು ಎಂದು ವಿಕ್ರಮ್ ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.ಮುಂದುವರಿದ ಅವರು, ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿದೆ. ಆಗ ಡಾ. ರಾಜಕುಮಾರ್, ಶಿವಣ್ಣ ನನ್ನ ತಂದೆ ರವಿಚಂದ್ರನ್ ಇವರೆಲ್ಲರ ಸಿನಿಮಾ ಲೆಕ್ಕಚಾರ ಹಾಕುವುದಾದರೆ 100- 150 ಸಿನಿಮಾಗಳನ್ನು ದಾಟುತ್ತೆ.
ಅದೇ ಧ್ರುವ ಸರ್ಜಾ ಅವರನ್ನ ತಗೊಂಡ್ರೆ 5 ಫಿಲ್ಮ್ ಆದ್ರೆ ಅವರು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಜನರೇಶನ್ ಬದಲಾದ ಹಾಗೆ ಸಿನಿಮಾಗಳೂ ಕಡಿಮೆ ಆಗುತ್ತವೆ. ಹಾಗಾಗಿ ಸಿನಿಮಾ ಅಂದ್ರೆ ಕಷ್ಟ ಪಡಲೆಬೇಕು ಅಂತ ಸ್ಯಾಂಡಲ್ ವುಡ್ ಗೆ ಈಗತಾನೆ ಎಂಟ್ರಿ ಕೊಡ್ತಾ ಇರೋ ವಿಕ್ರಮ್ ರವಿಚಂದ್ರನ್ ಅವರ ಮಾತು. ಒಟ್ಟಿನಲ್ಲಿ ಹಿಟ್ ಆಗೋಕೆ ಹೆಚ್ಚು ಸಿನಿಮಾಗಳನ್ನು ಮಾಡಬೇಕಾಗಿಲ್ಲ ಮಾಡುವುದು ಕೆಲವೇ ಸಿನಿಮಾ ಆದರೂ ಅದರಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು ಅನ್ನೋದು ಅಕ್ಷರಶಃ ಸತ್ಯ.