ಮಗಳು ವಂಶಿಕಾಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುತ್ತಾರಾ ಮಾಸ್ಟರ್ ಆನಂದ್!
ಕನ್ನಡದ ಹಿರಿದರೆ ಹಾಗೂ ಕಿರುತೆರೆಗೆ ನಟ ಮಾ. ಆನಂದ್ ಹೊಸ ಪರಿಚಯವೇನಲ್ಲ. ಈಗಲೂ ಮಾಸ್ಟರ್ ಆನಂದ ಬಾಲ ನಟನಾಗಿ ನಟಿಸಿರುವ ಚಿತ್ರಗಳನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಅವರ ಅತ್ಯದ್ಭುತ ಅಭಿನಯ ಆ ಬಾಲಕನಲ್ಲಿ ಕಾಣಬಹುದಾಗಿತ್ತು. ಮಾಸ್ಟರ್ ಆನಂದ್ ಹೆಚ್ಚಾಗಿ ಆಗಿನ ಕಾಲದ ಎಲ್ಲಾ ದಿಗ್ಗಜ ನಟರೊಂದಿಗೆ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಅನಂತನಾಗ್ ಮೊದಲಾದ ನಟರೊಂದಿಗೆ ಅಭಿನಯಿಸಿದ್ದ ಖ್ಯಾತಿ ಮಾಸ್ಟರ್ ಆನಂದ್ ಅವರದ್ದು.
ಆದರೆ ಒಬ್ಬ ಹೀರೋ ಆಗಿ ಮಾಸ್ಟರ್ ಆನಂದ ಹೆಸರು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಒಬ್ಬ ಕಿರುತೆರೆಯ ನಿರೂಪಕನಾಗಿ ಕಾಮಿಡಿ ಕಿಲಾಡಿಗಳು ಶೋವನ್ನು ಅತ್ಯದ್ಭುತವಾಗಿ ನಡೆಸಿಕೊಟ್ಟ ಖ್ಯಾತಿ ಮಾಸ್ಟರ್ ಆನಂದ್ ಅವರದ್ದು. ಇದೀಗ ಮಾಸ್ಟರ್ ಆನಂದ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವುದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ ಮಾಸ್ಟರ್ ಆನಂದ್ ಈಗ ಸುದ್ದಿಗೆ ಬರುತ್ತಿರುವುದು ಅವರ ಮಗಳು ವಂಶಿಕ ಅವಳಿಂದ. ಅತ್ಯಂತ ಕ್ಯೂಟ್ ಹಾಗೂ ಚೂಟಿಯಾಗಿರುವ ವಂಶಿಕ ಕಲರ್ಸ್ ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿದ್ದಾರೆ.
ಮಾಸ್ಟರ್ ಆನಂದ್ ಅವರು 2010ರಲ್ಲಿ ಯಶಸ್ವಿನಿ ಅವರ ಜೊತೆ ಮದುವೆಯಾದರು. ಇವರಿಗೆ ಕೃಷ್ಣಶೇತನ್ಯ ಹಾಗೂ ವಂಶಿಕ ಆಂಜನಿ ಕಶ್ಯಪ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದೀಗ ವಂಶಿಕ ತಾಯಿ ಯಶಸ್ವಿನಿಯವರ ಜೊತೆ ಕಲಸ್ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಮೂಲಕ ಫೇಮಸ್ ಆದ ವಂಶಿಕ ಈಗ ಕಲರ್ಸ್ ಫೈನಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ ಭೂಮಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಪುಟಾಣಿ ವಂಶಿಕ ನಟನಿಗೂ ಸೈ, ನಿರೂಪಣೆಗೂ ಸೈ, ನೃತ್ಯಕ್ಕೂ ಸೈ. ತೀರ್ಪುಗಾರರ ಫೇವರೆಟ್ ಆಗಿರುವ ವಂಶಿಕ ಅಪ್ಪನಂತೆ ಬಾಲ್ಯದಲ್ಲಿಯೇ ನಟನೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ಅಮ್ಮನೊಂದಿಗೆ ಅಪ್ಪನೊಂದಿಗೆ ಸೇರಿ ಮಾಡುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಜನರು ತಮ್ಮನೆಯ ಹುಡುಗಿ ಎಂದು ಪ್ರೀತಿಸುವಷ್ಟರ ಮಟ್ಟಿಗೆ ವಂಶಿಕ ಕರುನಾಡಿನಲ್ಲಿ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ನಟ ಮಾಸ್ಟರ್ ಆನಂದ್ ವಂಶಿಕ ಅವರ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮೊದಲಿಗೆ, ಬೆಳಿಗ್ಗೆ ಸುಮಾರು 9:30. ಕಂಟೆಸ್ಟೆಂಟ್ ನಂಬರ್ ಒನ್ ಕಂಟೆಸ್ಟೆಂಟ್ ನಂಬರ್ 2 ಎನ್ನುತ್ತಾ ವಂಶಿಕ ಹಾಗೂ ತಮ್ಮ ಪತ್ನಿ ಯಶಸ್ವಿನಿ ಮಲಗಿರುವ ವಿಡಿಯೋವನ್ನು ಮಾಸ್ಟರ್ ಆನಂದ್ ಮಾಡಿದ್ದಾರೆ. ಇಷ್ಟೊತ್ತಾದರೂ ಮಲಗಿರುವ ಇವರಿಬ್ಬರು ಬಿಗ್ ಬಾಸ್ ಸ್ಪರ್ಧಿಗಳಾಗಿ ಹೋದರೆ ಹೇಗಿರುತ್ತೆ! ಅಲ್ಲಿ ಬೆಳಿಗ್ಗೆ 6 ಗಂಟೆಗೆ ಸಾಂಗ್ ಹಾಕಿ ಎಬ್ಬಿಸಿ ರುಬ್ಬುತ್ತಾರೆ ನಾನು ಮನೆಯಲ್ಲಿ ಕುಳಿತು ಇವರನ್ನ ಟಿವಿಯಲ್ಲಿ ನೋಡೋದಕ್ಕೆ ಮಜವಾಗಿರುತ್ತೆ. ಅಂತ ಫನ್ನಿ ಆಗಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ ತರಾವರಿ ಕಮೆಂಟ್ ಗಳನ್ನು ಕೂಡ ಪಡೆದುಕೊಳ್ಳುತ್ತದೆ. ಮಾ. ಆನಂದ್ ಕೂಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು.