ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಬೇಕೆಂದ್ರೆ ಇದನ್ನು ಗಮನಿಸಿ

ಈಗಿನ ಯುವ ಜನತೆಗೆ ಬೈಕ್ ಗಳ ಮೇಲೆ ಹೆಚ್ಚು ಹುಚ್ಚು ಇದೆ. ದೊಡ್ಡ ಬೈಕ್ ತೆಗೆದುಕೊಂಡು ಅದರ ಮೇಲೆ ವೇಗವಾಗಿ ಹೋಗುವುದೆಂದರೆ ತುಂಬಾ ಖುಷಿ. ಬೈಕ್ ಬಗೆಗೆ ಏನೆ ಮಾಹಿತಿ ಕೇಳಿದರೂ ತಿಳಿಯದ ವಿಷಯಗಳು ಇಲ್ಲವೆನ್ನಬಹುದು. ಬೈಕ್ ಕೊಳ್ಳುವ ಮೊದಲು ಅದರ ಮೈಲೇಜ್ ಕೆಪಾಸಿಟಿಯನ್ನು ಮೊದಲು ನೋಡುತ್ತಾರೆ. ಪೆಟ್ರೋಲ್ ದರ ಏರಿಕೆಯಾದಷ್ಟು ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳಿಗೆ ಬೇಡಿಕೆ ಹೆಚ್ಚು. ಹಾಗಾದರೆ ಏನು ಮಾಡಿದರೆ ಬೈಕ್ ಹೆಚ್ಚು ಮೈಲೇಜ್ ಕೊಡುತ್ತದೆ ಎಂಬ ವಿಷಯವನ್ನು ಇಲ್ಲಿರುವ ಮಾಹಿತಿಯಿಂದ ತಿಳಿಯೋಣ.

ಬೈಕ್ ನ ಮೈಲೇಜ್ ಹೆಚ್ಚು ಸಿಗುವಂತೆ ಆಗಲು ಮೂರು ಅಂಶಗಳು ಇವೆ. ಮೊದಲನೆಯದಾಗಿ ಬೈಕ್ ಚಾಲನೆ ಮಾಡುವ ರೀತಿ, ಎರಡನೆಯದಾಗಿ ಬೈಕ್ ಗೆ ಹಾಕಿಸುತ್ತಿರುವ ಇಂಧನ,
ಮೂರನೆಯದಾಗಿ ಬೈಕ್ ಹೊಂದಿರುವ ಸ್ಥಿತಿ. ಇವು ಮೂರು ಅಂಶಗಳು ಬೈಕ್ ಮೈಲೇಜನ್ನು ಹೆಚ್ಚಿಸುತ್ತದೆ. ಮೊದಲನೆಯ ಅಂಶ ಬೈಕ್ ಚಾಲನೆ ಮಾಡುವ ರೀತಿ. ಬೈಕ್ ಸವಾರಿಯನ್ನು ಪ್ರಾರಂಭಿಸಿದ ಮೊದಲು ಐದು ಕಿ.ಮೀ ಗಳ ವರೆಗೂ ನಿಧಾನವಾಗಿ ಹೋಗಬೇಕು. ಯಾಕೆಂದರೆ ಇಂಜಿನ್ ತಂಪಾಗಿರುತ್ತದೆ. ಅದಕ್ಕೆ ಬೇಕಾದ ಇಂಧನದ ಪೂರೈಕೆ ನಿಧಾನವಾಗಿ ಆಗುತ್ತದೆ. ಆದ್ದರಿಂದ ನಿಧಾನವಾಗಿ ಹೋದಷ್ಟು ಇಂಜಿನ್ ಗೆ ಹೊಡೆತ ಹಾಗೂ ಒತ್ತಡ ಬೀಳುವುದಿಲ್ಲ. ಹಾಗೇಯೆ ತಕ್ಷಣ ಬ್ರೇಕ್ ಒತ್ತುವುದು, ಪದೆ ಪದೆ ಬ್ರೇಕ್ ಹಾಕುವುದು ಹಾಗೂ ಗೇರ್ ಬದಲಾಯಿಸುವುದು ಮೈಲೇಜ್ ನ ಮೇಲೆ ಒತ್ತಡ ಬರುತ್ತದೆ. ಹೆಚ್ಚಾಗಿ ಏರು ತಗ್ಗು ಇರುವ ಪ್ರದೇಶಗಳಿಗಿಂತ ಸಮತಟ್ಟು ಇರುವ ರಸ್ತೆಗಳಲ್ಲಿ ಸಾಗುವುದು ಒಳಿತು ಇಂಧನ ಉಳಿತಾಯದ ಜೊತೆಗೆ ಮೈಲೆಜ್ ಹೆಚ್ಚು ಪಡೆಯಬಹುದು. ಟಾಪ್ ಗೇರ್ ಹಾಕಿಕೊಂಡು ಬೈಕ್ ಓಡಿಸುವಾಗ 45 ಕಿ.ಮೀ. ವೇಗದಲ್ಲಿ ಓಡಿಸುವುದರಿಂದ ಉತ್ತಮ ಮೈಲೇಜ್ ಪಡೆಯಬಹುದು.

ಬೈಕ್ ಹೊರಗಡೆ ಚೆನ್ನಾಗಿರುವುದು ಎಷ್ಟು ಮುಖ್ಯವೋ ಹಾಗೆಯೆ ಒಳಗಡೆಯು ಚೆನ್ನಾಗಿರುವುದು ಅಷ್ಟೇ ಮುಖ್ಯ ಆದ್ದರಿಂದ ಬೈಕ್ ಗೆ ಹಾಕಿಸುವ ಇಂಧನದ ಮೇಲೆಯು ಗಮನ ನೀಡಬೇಕು. ಅಂಗಡಿಗಳಲ್ಲಿ ಬಾಟಲಿಗಳಲ್ಲಿ ಮಾರಲು ಇಟ್ಟಿರುವ ಪೆಟ್ರೋಲ್ ಬಳಸದೆ ಗೊತ್ತಿರುವ ಹಾಗೂ ಉತ್ತಮ ಸರ್ವಿಸ್ ನೀಡುವ ಬಂಕ್ ಗಳಲ್ಲಿ ಇಂಧನ ಖರೀದಿಸುವುದು ಉತ್ತಮ. ಕಳಪೆ ಇಂಧನದಿಂದ ಎಂಜಿನ್ ಹಾಳಾಗುತ್ತದೆ. ಹಾಗೆಯೆ ಇಂಧನ ತುಂಬಿಸಿಕೊಳ್ಳುವಾಗ ಬೆಳಿಗ್ಗೆ ಸಮಯ ತುಂಬಿಸಿಕೊಳ್ಳುವುದು ಉತ್ತಮ. ಕೆಲವೊಂದು ಬಂಕ್ ಗಳಲ್ಲಿ ಪೆಟ್ರೋಲ್ ತುಂಬುವಾಗ ಮೋಸ ಮಾಡುವ ಸಾಧ್ಯತೆ ಇರುತ್ತದೆ ಹಾಗಾಗಿ ರೀಡರ್ ಮೇಲೆ ಗಮನ ನೀಡುವುದು ಉತ್ತಮ. ಹೆಚ್ಚಾಗಿ 50, 100, 200, 500 ರೂಪಾಯಿಗಳ ಇಂಧನ ಭರಿಸದೆ 60, 110, 220, 530 ರೂಪಾಯಿಗಳು ಹೀಗೆ ಇಂಧನ ಭರ್ತಿ ಮಾಡಿಕೊಳ್ಳುವುದು ಉತ್ತಮವಾದ ದಾರಿ.

ಬೈಕ್ ಮೈಲೇಜ್ ಹೆಚ್ಚು ಬೇಕಾದಲ್ಲಿ ಬೈಕ್ ಸುಸ್ಥಿತಿಯಲ್ಲಿ ಇರುವುದು ತುಂಬಾ ಮುಖ್ಯವಾದ ಅಂಶ. ಆಗಾಗ ಬೈಕ್ ಸರ್ವಿಸ್ ಮಾಡುವುದು ಉತ್ತಮ. ಹೆಚ್ಚೆಂದರೆ ಎರಡು ಸಾವಿರ ಕಿಲೋ ಮೀಟರ್ ಗಳಿಗೆ ಒಮ್ಮೆ ಇಂಜಿನ್ ಎಣ್ಣೆಯನ್ನು ಬದಲಾಯಿಸುವುದು ಒಳ್ಳೆಯದು. ಹೀಗೆ ಇಂಜಿನ್ ಆಯಿಲ್ ಬದಲಾಯಿಸುವಾಗ ಉತ್ತಮ ಗುಣಮಟ್ಟದ, ಉತ್ತಮ ಕಂಪನಿಯ ಆಯಿಲ್ ಬಳಕೆ ಒಳ್ಳೆಯದು. ದೂಳುಗಳಿಂದ ತೊಂದರೆ ಆಗದಂತೆ ಅಗಾಗ ಏರ್ ಪಿಲ್ಟರ್ ಹಾಗೂ ಏರ್ ಪಿಲ್ಟರ್, ಕಾರ್ಬೊರೇಟರ್ ಗಳ ಸರ್ವಿಸ್ ಮಾಡಿಸುವುದು ಉತ್ತಮ‌. ಇದರಲ್ಲಿ ಸಿಲುಕಿದ ಧೂಳುಗಳು ಬೈಕ್ ಮೈಲೇಜ್ ನ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೆ ಬೈಕ್ ನ ಸ್ಪಾರ್ಕ್ ಪ್ಲಗ್ ನ ಮೇಲೆ ಗಮನ ನೀಡುವುದು ಒಳ್ಳೆಯದು. ಇದರ ಅಲೈನ್ಮೆಂಟ್ ಹೆಚ್ಚು ಕಡಿಮೆ ಆದರೆ ಮೈಲೇಜ್ ನ ಮೇಲೆ ಪ್ರಭಾವ ಬೀರುತ್ತದೆ. ಬೈಕ್ ನ ಕಂಪನಿಯಯ ಕೊಟ್ಟ ಸಲಹೆಯಂತೆ ಬೈಕ್ ಟೈರ್ ನ ಗಾಳಿಯನ್ನು ತುಂಬಿಸಿ. ಬೈಕ್ ನ ಸರ್ವಿಸ್ ಮಾಡಿಸಿ. ಆದಷ್ಟು ನೆರಳು ಇರುವ ಜಾಗಗಳಲ್ಲಿ ಬೈಕ್ ನಿಲ್ಲಿಸಿ.

ಮೇಲೆ ತಿಳಿಸಿದಂತೆ ಬೈಕ್ ಸರ್ವಿಸ್ ಹಾಗೂ ಕಾಳಜಿ ಮಾಡಿದರೆ ಅಧಿಕ ಮೈಲೇಜ್ ಪಡೆದುಕೊಳ್ಳಬಹುದು. ಹಾಗೆಯೆ ಬೈಕ್ ನ ಸ್ಥಿತಿಯನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು.

Leave a Comment

error: Content is protected !!