ಚೆನ್ನಾಗಿ ಓದಿಕೋ ಎಂದಿದ್ದಕ್ಕೆ ಈ ಹೆಣ್ಣು ಮಗಳು ಮಾಡಿಕೊಂಡಿದ್ದು ಏನು ಗೊತ್ತಾ? ಹಿಂಗು ಇರ್ತಾರಾ?

ಇತ್ತೀಚಿನ ಜಮಾನದ ಯುವಜನತೆಯಲ್ಲಿ ನಿಜಕ್ಕೂ ಕೂಡ ಯಾವುದನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾಕೆಂದರೆ ಚಿಕ್ಕ ಪುಟ್ಟ ಮಾತಿಗೂ ಕೂಡ ತಮ್ಮ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರದತ್ತ ಮುಖ ಮಾಡುತ್ತಾರೆ ಇಂದಿನ ಯುವ ಜನತೆ. ದಿನ ಕಳೆದರೆ ನಾವು ಈ ರೀತಿ ಹಲವಾರು ಸುದ್ದಿಗಳನ್ನು ಕೇಳಿ ತಿಳಿಯುತ್ತೇವೆ.

ಅದರಲ್ಲೂ ವಿಶೇಷವಾಗಿ ಒಂದು ವೇಳೆ ಕಡಿಮೆ ಮಾರ್ಕ್ಸ್ ಅನ್ನು ಪಡೆಯುತ್ತಿದ್ದರೆ ಮನೆಯವರು ಚೆನ್ನಾಗಿ ಓದಿಕೋ ಉತ್ತಮ ಅಂಕ ತೆಗೆಯಲು ಪ್ರಯತ್ನ ಪಡು ಎಂದು ಹೇಳಿದರೆ ಸಾಕು ಮನೆ ಬಿಟ್ಟು ಓಡಿ ಹೋಗುವಂತಹ ನಿರ್ಧಾರವನ್ನು ಹಾಗೂ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರವನ್ನು ಕೂಡ ಮಾಡುತ್ತಿರುವುದು ನಿಜಕ್ಕೂ ಕೂಡ ಸಮಾಜದ ಶೋಚನೀಯ ಪರಿಸ್ಥಿತಿಗೆ ಉದಾಹರಣೆಯಾಗಿದೆ.

ಇತ್ತೀಚಿಗಷ್ಟೇ ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ನಡೆದಿರುವ ಒಂದು ಘಟನೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದರೇ ತಪ್ಪಾಗಲಾರದು. ಮೊದಲನೇ ವರ್ಷದ ಬಿಕಾಂ ವ್ಯಾಸಂಗವನ್ನು ಮಾಡುತ್ತಿದ್ದ 18 ವರ್ಷದ ಪವಿತ್ರ ಇದೇ ರೀತಿ ಕೆಲಸ ಮಾಡುವ ಮೂಲಕ ಹೆತ್ತವರ ಕಣ್ಣೀರಿಗೆ ಕಾರಣಳಾಗಿದ್ದಾಳೆ. ಆಟ ಆಡೋದ್ರಲ್ಲಿ ಸಮಯವನ್ನು ಹಾಳು ಮಾಡುತ್ತಿದ್ದೀಯಾ, ಚೆನ್ನಾಗಿ ಓದಿಕೋ ಉತ್ತಮ ಅಂಕವನ್ನು ಪಡೆಯಬಹುದು ಎಂಬುದಾಗಿ ಹೆತ್ತವರು ಬುದ್ದಿ ಮಾತನ್ನು ಹೇಳಿದ್ದಾರೆ.

ಇದನ್ನೇ ಮನಸ್ಸಿಗೆ ತೆಗೆದುಕೊಂಡ ಪವಿತ್ರ ಪೋಷಕರು ನನಗೆ ಬೈಯುತ್ತಿದ್ದಾರೆ ಎಂಬುದಾಗಿ ಹೇಳಿ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಈಗ ನಡೆದಿದೆ. ಈಗಾಗಲೇ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಅದೇನೇ ಇರಲಿ ಮಕ್ಕಳಿಗೆ ಪೋಷಕರಲ್ಲದೆ ಇನ್ಯಾರು ತಾನೆ ಬುದ್ಧಿ ಮಾತನ್ನು ಹೇಳಲು ಸಾಧ್ಯ. ಇದನ್ನು ಕೂಡ ಅರಿಯದೆ ಈ ರೀತಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನೀವೇ ನಿಮ್ಮ ಅಭಿಪ್ರಾಯಗಳಲ್ಲಿ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!