ಎರಡು ಎಕರೆ ಜಮೀನಿನಲ್ಲಿ 22 ಲಕ್ಷ ಸಂಪಾದಿಸಿದ ರೈತ

ನಮ್ಮ ದೇಶದ ಬೆನ್ನೆಲುಬು, ಅರ್ಥ ವ್ಯವಸ್ಥೆಯ ಬೆನ್ನೆಲುಬು ಅಂದರೆ ಅದು ನಮಗೆಲ್ಲ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಲು ಬೆಳೆಗಳನ್ನು ಬೆಳೆದು ಪೂರೈಸುತ್ತಿರುವ ರೈತ. ಇಂದು ನಮ್ಮ ದೇಶದಲ್ಲಿ ಬೆಳೆಗಳನ್ನು ಬೆಳೆಯುವ ರೈತರು ಮತ್ತು ಅವರ ಕುಟುಂಬ ಪ್ರತಿ ನಿತ್ಯ ಹೊಟ್ಟೆ ತುಂಬಾ ಊಟ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ದೇಶದ ಪ್ರತಿಯೊಬ್ಬ ಜನತೆಯ ಹೊಟ್ಟೆಗೆ ಅನ್ನ ನೀಡುತ್ತಾರೆ. ಆದರೆ ವಿಪರ್ಯಾಸ ಎಂದರೆ ಇಂದು ನಮ್ಮೆಲ್ಲರ ಅನ್ನದಾತರ ಸ್ಥಿತಿ ಶೋಚನೀಯವಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ ಲಾಭವಿಲ್ಲದ ಬರೀ ನಷ್ಟ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಉದ್ಭವಿಸಿದೆ.

ಇಂದಿನ ಕಾಲದಲ್ಲಿ ತಾನು ರೈತ ಅಥವಾ ಮುಂದೊಂದು ದಿನ ತಾನು ರೈತನಾಗುತ್ತೇನೆ ಎಂದು ಹೇಳಿಕೊಳ್ಳುವ ಜನರು ಕಾಣಸಿಗುವುದು ತುಂಬಾ ವಿರಳ. ಇದಕ್ಕೆ ಕಾರಣ ನಮ್ಮ ಸಮಾಜ. ರೈತ ಅಂದ್ರೆ ಸರಿಯಾಗಿ ಹಣ ಇರಲ್ಲ, ರೈತ ಎಂಬ ಕಾರಣಕ್ಕೆ ಮದುವೆಯಾಗಲು ಯಾರು ಮುಂದೆ ಬರಲ್ಲ ಎಂಬ ಕಾರಣಕ್ಕೆ ಯಾರು ತಾವು ರೈತ ಎಂದು ಅಷ್ಟಾಗಿ ಹೇಳಿಕೊಳ್ಳಲ್ಲಾ. ಆದರೆ, ಪ್ರತಿಯೊಬ್ಬ ರೈತ ಕೂಡ ಒಬ್ಬ ವಿಜ್ಞಾನಿ ಆಗಿರ್ತಾನೆ ಅನ್ನೋದು ನಮಗೆ ತಿಳಿಯದ ವಿಷಯ. ಇಲ್ಲಿ ಒಬ್ಬ ರೈತ ಇದಕ್ಕೆ ವಿರುದ್ಧ ಎನ್ನುವಂತೆ ಹಲವಾರು ಬಾರಿ ಸೋಲನ್ನು ಕಂಡರೂ ಕೊನೆಗೆ ತನ್ನ ಎರಡು ಎಕರೆ ಜಮೀನಿನಲ್ಲಿ 22 ಲಕ್ಷ ರೂಪಾಯಿ ಲಾಭ ಗಳಿಸಿ ಜೀವನದಲ್ಲಿ ಮೇಲೆ ಬಂದಿದ್ದಾರೆ ಅವರು ಯಾರು ಹೇಗೆ ಈ ಸಾಧನೆ ಮಾಡಿದರು ಅಂತ ತಿಳಿಯೋಣ ಬನ್ನಿ.

ದೊಡ್ಡಬಳ್ಳಾಪುರದ ಸದಾನಂದ ಎಬುವವರು ಮೊದಲು ತಮ್ಮ ಜಮೀನಿನಲ್ಲಿ ಬೇರೆಯವರನ್ನು ನೋಡಿ ಅವರು ಕೂಡ ಪ್ರಾರಂಭದಲ್ಲಿ ಟೊಮೆಟೊ ಈರುಳ್ಳಿ ಬೆಳೆಗಳನ್ನು ಇದ್ದಷ್ಟು ಜಮೀನಿಗೆ ಒಂದೇ ಬೆಳೆಯನ್ನು ಬೆಳೆದರು. ಇದು ಅತ್ಯಂತ ಅಪಾಯ ಯಾಕೆ ಅಂದ್ರೆ ಎಲ್ಲ ರೈತರು ಇಡೀ ಜಮೀನಿಗೆ ಒಂದೇ ಬಾರಿ ಯಾವುದೇ ಒಂದೆ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರೆ, ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿಯುತ್ತದೆ. ಒಂದೊಂದೂ ಬಾರಿ ಬೆಳೆಗಳು ಕೈ ಕೊಡುತ್ತವೆ ಆಗ ವ್ಯವಸಾಯದಲ್ಲಿ ಆಸಕ್ತಿ ಇರಲ್ಲ. ಪ್ರಾರಂಭದಲ್ಲಿ ಇದೆ ತಪ್ಪನ್ನು ಮಾಡಿದ ಸದಾನಂದ ಅವರು ಸೋಲನ್ನು ಅನುಭವಿಸಿದ್ದರು ಮುಂದೆ ಹೀಗೆ ಆದರೆ ಕಷ್ಟ ಎನಿಸಿ ಒಂದು ಉಪಾಯ ಮಾಡಿ, ತನಗೆ ಇರುವ ಜಮೀನನ್ನು ವ್ಯವಸ್ಥಿತವಾಗಿ ವಿಭಜಿಸಿ ಮೊದಲು ಅದರಲ್ಲಿ ಅಡಿಕೆ ತೆಂಗನ್ನು ಬೆಳೆಸಿದರು. ನಂತರ ಒಂದು ತಿಂಗಳಿನ ಅಂತರದಲ್ಲಿ ಶುಂಠಿ, ಸಪೋಟ, ಕ್ಯಾಪ್ಸಿಕಂ ಬೆಳೆದರು.

ಹೀಗೆ ಕಾಲದ ಮಿತಿ ಹಾಕಿ ಬೆಳೆಗಳನ್ನು ಬೆಳೆದರು. ಸದಾನಂದ ಅವರ ಯೋಜನೆಯ ಪ್ರಕಾರ ಒಂದು ತಿಂಗಳು ಶುಂಠಿ ಬೆಳೆ ಬಂದರೆ ಮುಂದಿನ ತಿಂಗಳು ಶುಂಠಿ ಬೆಳೆ ಬರುವಂತಿತ್ತು. ಹೀಗೆ ಮಾಡಿ ತಾವು ಬೆಳೆದ ಬೆಳೆಗಳ ಹಣವನ್ನು ಪ್ರತಿ ತಿಂಗಳು ಕೈಗೆ ಬರುವಂತೆ ಮಾಡಿಕೊಂಡರು. ಹೀಗೆ ಮಾಡಿದರೆ ಒಂದು ಬೆಳೆಯಲ್ಲಿ ನಷ್ಟ ಆದರೂ ಇನ್ನೊಂದು ಬೆಲೆಯಲ್ಲಿ ಲಾಭ ಆಗುತ್ತಿತ್ತು . ಹೀಗೆ ಬೆಳೆಗಳನ್ನು ಬೆಳೆಯುತ್ತಾ ಸದಾನಂದ ಅವರು ವರ್ಷಕ್ಕೆ 22 ಲಕ್ಷ ಆದಾಯ ಗಳಿಸುತ್ತಾ ಇದ್ದರೆ. ವ್ಯವಸಾಯ ಅನ್ನೋದು ಸಂಶೋಧನೆಯ ಆವಿಷ್ಕಾರ ಇದ್ದಂತೆ. ಅದಕ್ಕೆ ಸೀಮಿತ ಮಿತಿ ಇರಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಹೊಸ ವಿಧಾನಗಳನ್ನು ಕಂಡುಹಿಡಿಯಲು ಸುಲಭ.

Leave a Comment

error: Content is protected !!