ಸಿಎಂ ಸ್ವ-ಉದ್ಯೋಗ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ಸರ್ಕಾರವು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಕೂಡ ಮಾಡುತ್ತಾ ಹೋಗುತ್ತದೆ. ಅದರಲ್ಲೂ ನಮ್ಮ ಪ್ರಧಾನಮಂತ್ರಿ ಅದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ದುಡ್ಡಿನ ವಿಷಯದಲ್ಲಿ ಆಗಿರಬಹುದು. ಹಾಗೆಯೇ ಎಲ್ಲಾ ರೀತಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ನಾವು ಇಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಷ್ಟೋ ಜನ ಹೊಸ ಉದ್ಯೋಗವನ್ನು ಅಥವಾ ಬಿಸನೆಸ್ ಗಳನ್ನು ಶುರು ಮಾಡಬೇಕೆಂದು ಬಯಸುತ್ತಾರೆ. ಆದರೆ ಅವರ ಕೈಯಲ್ಲಿ ಹಣ ಇರುವುದಿಲ್ಲ. ಆದ್ದರಿಂದ ಅವರಿಗೆ ಬಂಡವಾಳ ಹೂಡುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಅಂತಾವರಿಗಾಗೇ ರಾಜ್ಯ ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಆದ ಬಿ.ಎಸ್. ಯಡಿಯೂರಪ್ಪ ಅವರು ಸ್ವ-ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಯೋಜನೆಯ ಪ್ರಕಾರ ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ.

ಇದರಲ್ಲಿ 25ರಿಂದ 30 ಶೇಕಡಾ ಅವರಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಅಂದರೆ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಸಾಲ ತೆಗೆದರೆ ಅದಕ್ಕೆ ಎರಡುವರೆ ಲಕ್ಷ ಅಥವಾ ಮೂರು ಲಕ್ಷ ಸಬ್ಸಿಡಿ ದೊರೆಯುತ್ತದೆ. ಜನವರಿ 2ರಿಂದ ಯೋಜನೆಗೆ ಅರ್ಜಿಯನ್ನು ಕರೆಯಲಾಗುತ್ತಿದೆ. ಹಾಗೆಯೇ ಇದಕ್ಕೆ ಹಲವಾರು ದಾಖಲಾತಿಗಳು ಬೇಕಾಗುತ್ತದೆ. ಮೊದಲನೆಯದಾಗಿ ಇತ್ತೀಚಿನ ಪಾಸ್ಪೋರ್ಟ್ ಸೈಜಿನ ಭಾವಚಿತ್ರ ಬೇಕಾಗುತ್ತದೆ.

ಹಾಗೆಯೇ ವಯಸ್ಸಿನ ಪತ್ರ ಬೇಕಾಗುತ್ತದೆ. ತರಬೇತಿಪಡೆದ ಯಾವುದಾದರೂ ಪ್ರಮಾಣಪತ್ರ ಬೇಕಾಗುತ್ತದೆ. ಹಾಗೆಯೇ ರೇಷನ್ ಕಾರ್ಡ್ ಜೆರಾಕ್ಸ್ ಮತ್ತು ವೋಟರ್ ಕಾರ್ಡ್ ಜೆರಾಕ್ಸ್ ಬೇಕಾಗುತ್ತದೆ. ಹಾಗೆಯೇ ಇನ್ನೂ ಹಲವಾರು ದಾಖಲಾತಿಗಳು ಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ cmegp.kar.nic.in ಈ ವೆಬ್ಸೈಟ್ ನ್ನು ನೋಡಬಹುದು. ಈ ವೆಬ್ಸೈಟ್ ನ್ನು ಒಪನ್ ಮಾಡಿದರೆ ಎಲ್ಲಾ ದಾಖಲಾತಿಗಳ ಮಾಹಿತಿಗಳು ಸಿಗುತ್ತವೆ.

Leave a Comment

error: Content is protected !!