ಕಂಪನಿ ಅಂದ್ರೆ ಅದಕ್ಕೆ ತನ್ನದೆಯಾದ ವಿಶೇಷತೆ ಮಹತ್ವ ಹಾಗೂ ಗೌರವ ಇದ್ದೆ ಇರುತ್ತದೆ, ಕಂಪನಿಯ ಮಾಲೀಕ ತನ್ನ ವರ್ಕರ್ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರೆ ಕಂಪನಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಅನ್ನೋದು ಈ ಕಂಪನಿಯ ಮಾಲೀಕ ಅವರ ಮಾತು, ನಾವು ನಮ್ಮ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಯಾವತ್ತೂ ಹೊರಗಿನವರಂತೆ ಕಾಣೋದಿಲ್ಲ ನಮ್ಮ ಮನೆಯವರ ರೀತಿಯಲ್ಲಿ ನೋಡುತ್ತೇವೆ ಎಂಬುದಾಗಿ ಹೇಳುತ್ತಾರೆ ಆದ್ದರಿಂದ ಪ್ರತಿ ವರ್ಷ ಈ ಕಂಪನಿಯಲ್ಲಿ ಉತ್ತಮ ಕೆಲಸ ಮಾಡೋರಿಗೆ ಬೋನಸ್ ರೀತಿಯಲ್ಲಿ ಉತ್ತಮ ಗಿಫ್ಟ್ ಅನ್ನು ಕೊಡಲಾಗುತ್ತದೆ. ಅಷ್ಟಕ್ಕೂ ಆ ಕಂಪನಿ ಯಾವುದು ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ.

ಇವರ ಹೆಸರು ಸಾವ್ಜಿ ಢೋಲಕಿ ಎಂಬುದಾಗಿ ಸೂರತ್ ನ ದೊಡ್ಡ ವಜ್ರ ವ್ಯಾಪರು ಹಾಗೂ ಬಟ್ಟೆ ಉದ್ಯಮದಲ್ಲಿ ಭಾರೀ ಯಶಸ್ಸು ಕಂಡಿರೋ ಬಿಲಿಯನೇರ್. ಇವರ ಕಂಪನಿಯಲ್ಲಿ ವರ್ಷಕ್ಕೊಮ್ಮೆ ದೀಪಾವಳಿ ದಸರಾಕ್ಕೆ ಬೋನಸ್ ರೀತಿಯಲ್ಲಿ ವರ್ಕರ್ ಗೆ ಒಳ್ಳೆಯ ಗಿಫ್ಟ್ ಕೊಡಲಾಗುತ್ತದೆ, ಅದೇ ನಿಟ್ಟಿನಲ್ಲಿ ೨೦೧೭ ರಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಒಟ್ಟು 1726 ನೌಕರರನ್ನು ಆಯ್ಕೆ ಮಾಡಿ ಯಾರ ಬಳಿ ಕಾರ್ ಇದೆಯೋ ಅವರಿಗೆ ಪ್ಲಾಟ್ ಹಾಗೂ ಯಾರ ಬಳಿ ಪ್ಲಾಟ್ ಇದೆಯೋ ಅವರಿಗೆ ಕಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ದೇಶಾದ್ಯಂತ ಹೆಸರಾದ ಹರೇ ಕೃಷ್ಣ ಎಕ್ಸ್ಪೋರ್ಟ್ಸ್ ಕಂಪನಿ ಮಾಲೀಕರಾದ ಸಾವ್ಜಿ ಢೋಲಕಿ ಅವರು ಹೇಳೋದು ಒಂದೇ ನಮ್ಮ ಕಂಪನಿಯಲ್ಲಿ ಮಾಲೀಕರಂತೆ ದುಡಿಯುವವರು ಚೆನ್ನಾಗಿರಬೇಕು ಅನ್ನೋದು ಅವರ ಆಶಯವಾಗಿದ್ದು ಪ್ರತಿ ವರ್ಷವೂ ಕೆಲಸಗಾರರಿಗೆ ಉತ್ತಮ ಗಿಫ್ಟ್ ಅನ್ನು ಕೊಡುತ್ತಾರೆ, ಕಂಪನಿ ಒಳ್ಳೆಯ ಆದಾಯವನ್ನು ಗಳಿಸಿದ ಹಿನ್ನಲೆಯಲ್ಲಿ ಕಳೆದ ವರ್ಷ ಸ್ವರ್ಣ ಮಹೋತ್ಸವದ ಸಂಭ್ರಮ ಆಚರಿಸಿಕೊಂಡಿದೆ ಅದರ ಖುಷಿಗೆ 491 ಕಾರ್ಗಳು ಮತ್ತು 200 ಫ್ಲಾಟ್ಗಳನ್ನು ನೀಡಿತ್ತು.

ಅದೇನೇ ಇರಲಿ ಕೆಲವು ಕಂಪನಿಗಳು ಕೊಡೊ ಸಂಬಳಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುವವರ ಮುಂದೆ ಇಂತಹ ಮಾಲೀಕರು ಕೆಲಸಗಾರರನ್ನು ಮನೆಯವರಂತೆ ನೋಡಿ ಖುಷಿ ಪಡುವುದರ ಜೊತೆಗೆ ಅವರ ಕಷ್ಟಕ್ಕೆ ಮುಂದಾಗುವವರು ಗ್ರೇಟ್ ಅಲ್ಲವೇ?

By admin

Leave a Reply

Your email address will not be published.