ಹಿಂದೂ ಸಂಪ್ರದಾಯದಲ್ಲಿ ದೇವರೆಂದರೆ ವೆಂಕಟರಮಣಸ್ವಾಮಿ ಹಾಗೂ ಎಂದರೆ ಗುರು ಮಂಚಲೆಯ ರಾಘವೇಂದ್ರ ಸ್ವಾಮಿ ಎನ್ನುವ ಪ್ರತೀತಿ ಇದೆ. ಇವರ ದರ್ಶನವನ್ನು ಮಾಡಲು ಪ್ರತಿಯೊಬ್ಬ ಭಕ್ತರು ತಿರುಮಲ ಬೆಟ್ಟ ಅಂದರೆ ತಿರುಪತಿಯನ್ನು ಹಾಗೂ ಮಂತ್ರಾಲಯವನ್ನು ಹೋಗಲೇಬೇಕು ಹಾಗಾಗಿ ಪ್ರತಿವರ್ಷ ಲಕ್ಷಾಂತರ ಭಕ್ತಾಧಿಗಳು ದೇವರ ದರ್ಶನಕ್ಕೆ ಹೋಗುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಮಂತ್ರಾಲಯಕ್ಕೆ ಹೋದ ಭಕ್ತಾದಿಗಳು ಗುರುರಾಯರ ಹಾಗೂ ಗಾಣಧಾಳುನಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಹಿಂತಿರುಗಿ ಬರುತ್ತಾರೆ. ಆದರೆ ಹೀಗೆ ಮಾಡಿದರೆ ನಿಮ್ಮ ಮಂತ್ರಾಲಯದ ರಾಯರ ದರ್ಶನ ಮಾಡಿದ ಪುಣ್ಯ ಫಲವು ನಿಮಗೆ ಲಭಿಸುವುದಿಲ್ಲ ಎನ್ನುವುದು ಹಲವಾರು ಜನರಿಗೆ ಗೊತ್ತಿರದ ಸಂಗತಿಯಾಗಿದೆ.

ಮಂತ್ರಾಲಯದ ಹತ್ತಿರ ಒಂದು ಪುಣ್ಯಕ್ಷೇತ್ರ ಇದೆ. ಇದು ಶ್ರೀ ಗುರುರಾಯರ ತಪೋವನ ಹಾಗೂ ಕರ್ಮಭೂಮಿ ಮತ್ತು ಪುಣ್ಯ ಭೂಮಿ ಇಲ್ಲಿ ಶ್ರೀ ರಾಘವೇಂದ್ರ ರಾಯರು ಸುಮಾರು 13 ವರ್ಷಗಳ ತನಕ ಇಲ್ಲಿ ನೆಲೆಸಿದ್ದರು ಹಾಗೂ ಇದು ರಾಘವೇಂದ್ರ ಸ್ವಾಮಿ ಅವರ ಎರಡನೆಯ ಮನೆ ಎಂದು ಪ್ರಸಿದ್ಧಿ ಇನ್ನು ಇದನ್ನು ಎರಡನೆಯ ಮಂತ್ರಾಲಯ ಎಂದು ಸಂಬೋಧಿಸಲಾಗುತ್ತದೆಇಂದಿನ ಲೇಖನದಲ್ಲಿ ಆ ಪುಣ್ಯಕ್ಷೇತ್ರ ಯಾವುದು ಯಾಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಯವರು ಹದಿಮೂರು ವರ್ಷಗಳಲ್ಲಿ ನೆಲೆಸಿದ್ದರು ಇನ್ನು ಆ ಸ್ಥಳದ ವಿಶೇಷತೆಯೇನು ಎನ್ನುವುದನ್ನು ಸಂಪೂರ್ಣವಾಗಿ ತಿಳಿಯೋಣ.

ಮಂತ್ರಾಲಯದಿಂದ 22 ಕಿಲೋಮೀಟರ್ ದೂರ ಇರುವ ಈ ಸ್ಥಳವೇ ರಾಯರಿಗೆ ಅತಿಪ್ರಿಯವಾದ ಸ್ಥಳವಾಗಿದೆ ಈ ಸ್ಥಳದ ಹೆಸರು ಬಿಚ್ಚಲೆ ಇದನ್ನೇ ಎರಡನೇ ಮಂತ್ರಾಲಯ ಎಂದು ಪ್ರಸಿದ್ಧಿ ಈ ಸ್ಥಳವನ್ನು ಬಿಕ್ಷಲೆ ಎಂದೇ ಕರೆಯುತ್ತಾರೆ ಇದು ಅಂದ್ರ ಪ್ರದೇಶದ ಕರ್ಲೂರು ರಾಜ್ಯದಲ್ಲಿ ಮಂತ್ರಾಲಯದ ಹತ್ತಿರ ಇದೆ ಇಲ್ಲಿ ಅಪ್ಪಣ್ಣಾಚಾರ್ಯರು ಹತ್ತಾರು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುತ್ತಿದ್ದರುಅಪ್ಪಣ್ಣಾಚಾರ್ಯರು ನೇತೃತ್ವದಲ್ಲಿ ವಿದ್ಯಾಭ್ಯಾಸವನ್ನು ಮಾಡಲು ದೇಶ-ವಿದೇಶದಿಂದ ಹಲವಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರುತುಂಗಭದ್ರ ದಡದಲ್ಲಿ ಅಶ್ವತ್ಥವೃಕ್ಷದ ನೆರಳಿನಲ್ಲಿ ಇಲ್ಲಿ ವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ಅವರಿಗೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು ಇಲ್ಲಿ ವಿದ್ಯಾರ್ಥಿಗಳಿಗೆ ಸನ್ಯಾಸತ್ವದ ಜೀವನ ಹೇಗಿರುತ್ತದೆ ಎಂಬುದನ್ನು ಕುಲಂಕುಶವಾಗಿ ಹೇಳಿಕೊಡುತ್ತಿದ್ದರು ಅದಕ್ಕಾಗಿ ಅವರಿಗೆ ಜೋಳಿಗೆಯನ್ನು ನೀಡಿ ಭಿಕ್ಷಾಟನೆಯನ್ನು ಮಾಡಿಕೊಂಡು ಬರಬೇಕು ಎಂದು ತಿಳಿಸುತ್ತಿದ್ದರುಅವರ ಮಾತನ್ನು ಪಾಲನೆ ಮಾಡಿದ ವಿದ್ಯಾರ್ಥಿಗಳು ಭಿಕ್ಷಾಟನೆಯನ್ನು ಮಾಡಿ ಅದರಲ್ಲಿ ಬಂದ ಅಕ್ಕಿಯನ್ನು ತುಂಗಭದ್ರ ನದಿಯ ನೀರಿನಲ್ಲಿ ತೊಳೆದು ಅದನ್ನು ಗಂಟುಕಟ್ಟಿ ಅಶ್ವತ್ಥ ವೃಕ್ಷ ಕಟ್ಟುತ್ತಿದ್ದರು.

ಅಪ್ಪಣ್ಣಾಚಾರ್ಯರು ತಮ್ಮ ದಿನನಿತ್ಯದ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಅನ್ನಪೂರ್ಣೇಶ್ವರಿ ಅನ್ನು ಧ್ಯಾನಿಸಿ ತೀರ್ಥವನ್ನು ಪ್ರೋಕ್ಷಣೆ ಹಾಕಿ ಗಂಟಿನ ಮೇಲೆ ಮಾಡುತ್ತಿದ್ದರು ಆವಾಗ ಅಕ್ಕಿ ಗಂಟಿನ ಅನ್ನವಾಗಿ ಬದಲಾಗುತ್ತಿದೆ ಇಂತಹ ಒಂದು ಚಮತ್ಕಾರ ಅಪ್ಪಣ್ಣ ರಾಯರಲ್ಲಿ ಇತ್ತು ಇದು ಹೇಗೆ ಗುರು ರಾಘವೇಂದ್ರ ಸ್ವಾಮಿ ಅವರಿಗೆತಿಳಿಯುವುದು ಹಾಗಾಗಿ ಒಮ್ಮೆ ರಾಯರು ಅಲ್ಲಿಗೆ ಬೇಟಿ ನೀಡುತ್ತಾರೆ ಹಾಗೂ ಅಲ್ಲಿ ಅವರು ಜಪ ಮಾಡಿದ ಸ್ಥಳ ಹಾಗೂ ಅಪ್ಪಣ್ಣ ಅವರು 60 ವರ್ಷ ಹಳೆಯ ಮನೆ ಹಾಗೂ ಅವರು ನಡೆಸುತ್ತಿದ್ದ ಗುರುಕುಲದ ಬಗ್ಗೆ ತಿಳಿದು ಪ್ರಭಾವಿತ ಆಗುವರು ಆಶ್ಚರ್ಯಕರ ಸಂಗತಿಯೆಂದರೆ ಮೊದಲ ಭೇಟಿಯಲ್ಲೇ ಅಪ್ಪಣ್ಣಾಚಾರ್ಯರು ಮತ್ತು ಗುರುರಾಯರು ಆಪ್ತ ಸ್ನೇಹಿತರಾಗುತ್ತಾರೆ ಅವರಿಬ್ಬರ ಸ್ನೇಹ ಎಷ್ಟು ಮಟ್ಟಿಗೆ ಗಟ್ಟಿಯಾಗಿತ್ತು ಎಂದರೆ ಅಪ್ಪಣ್ಣಾಚಾರ್ಯ ಅವರ ಮನೆಯಲ್ಲೇ ಗುರು ರಾಘವೇಂದ್ರ ರಾಯರು ಮುಂದಿನ 13 ವರ್ಷಗಳ ಕಾಲ ಅಲ್ಲಿಯೇ ತಂಗಿದ್ದರು.

ಬಿಚ್ಚಲೇ ಅಲ್ಲಿ ಇಂದಿಗೂ ಅಪ್ಪಣ್ಣ ಆಚಾರ್ಯ ಅವರ ಮನೆ ಇಂದಿಗೂ ಇದೆ ಹಾಗೂ ಗುರು ರಾಯರು ವಿಶ್ರಾಂತಿ ಪಡೆದ ಸ್ಥಳ ಕೂಡ ಇಂದಿಗೂ ನಾವು ನೋಡಬಹುದು ಇನ್ನು ರಾಯರಿಗೆ ಬೆಳೆಯ ಚಟ್ನಿ ಅಂದರೆ ತುಂಬಾ ಇಷ್ಟ ಹಾಗಾಗಿ ಸ್ವತಃ ಅಪ್ಪಣ್ಣ ಆಚಾರ್ಯ ರುಬ್ಬಿ ಮಾಡಿಕೊಟ್ಟು ರಾಯರಿಗೆ ಉಣಬಡಿಸಿದ ಬಗ್ಗೆ ಮಾಹಿತಿ ಇದೆ ಹಾಗಾಗಿ ರಾಯರಿಗೆ ಚಟ್ನಿ ಅನ್ನುವ ರುಬ್ಬುವ ಕಲ್ಲು ಅಂದರೆ ಒರಳು ಕಲ್ಲು ಇಂದಿಗೂ ಅಲ್ಲಿ ಇದೆ ರಾಯರು ಅಲ್ಲಿಯೇ ಧ್ಯಾನ ಅನ್ನು ಸುಮಾರು 13 ವರ್ಷಗಳ ಕಾಲ ಧ್ಯಾನ ಮಾಡುತಿದ್ದರು. ಆವಾಗ ಸ್ವತಃ ಅಪ್ಪಣ್ಣ ಅವರೇ ರಾಯರ ಕಾಲನ್ನು ಒತ್ತುತ ಇದ್ದರಂತೆ ಹಾಗೂ ರಾಯರು ಕೂಡ ಅಲ್ಲಿಯೇ ಮಲಗುತ್ತಿದ್ದರು ಇಂದಿಗೂ ಈ ಹಳ್ಳಿಯಲ್ಲಿ ಹೋಗಿ ನೋಡಿದರೆ ಈ ಸ್ಥಳವು ಕಾಣಬಹುದು ಅಪ್ಪಣ್ಣ ಆಚಾರ್ಯ ಅವರ ಮನೆಯ ಬಿಲದಲ್ಲಿ ಇದ್ದ ನಾಗರಹಾವು ಕೂಡ ರಾಯರು ಪರಮ ಮಿತ್ರ ಆಗಿದ್ದು ಇಂದಿಗೂ ಕೂಡ ಅದನ್ನು ಶೇಷ ನಾಗ ಎಂದು ಅವರ ಮನೆಯಲ್ಲಿ ಕಲ್ಲಿನ ರೂಪದಲ್ಲಿ ಸ್ಥಾಪಿಸಲಾಗಿದೆ.

ರಾಯರ ಅಪ್ಪಣೆಯ ಮೇರೆಗೆ ತೀರ್ಥ ಯಾತ್ರೆ ಹೋದ ಸಮಯದಲ್ಲಿ ರಾಯರು ಬೃಂದಾವನದಲ್ಲಿ ಅಸ್ತರದ ವಿಷಯ ತಿಳಿದು ರಾಯರ ಕೊನೆಯ ದರ್ಶನ ಪಡೆಯಬೇಕು ಎಂದು ಬೃಂದಾವನಕ್ಕೆ ಮರಳುತ್ತಾರೆ ಆದರೆ ಆವಾಗ ಭೂರ್ಗೆರೆಯುವ ತುಂಗಭದ್ರ ನದಿ ಉಕ್ಕಿ ಹರಿಯುವ ಪ್ರವಾಹ ಕಾಲ ಆದರೆ ಅಪ್ಪಣ್ಣ ಅವರು ಧೃತಿಗೆಡದೆ ರಾಯರ ನೇನೆಸುತ ರಾಯರ ನಾಮ ಪಟನೆ ಮಾಡುತ ಇದ್ದಾಗ ಅದಾಗಿಯೇ ಸ್ತೋತ್ರವು ಹೊರಹೊಮ್ಮುವ ಸನ್ನಿವೇಶ ಉದ್ಭವ ಆಗಿದ್ದು ನದಿಯನ್ನು ಪ್ರವಾಹದ ವೇಳೆಯಲ್ಲಿ ದಾಟುತ್ತರ ಆದರೆ ಸ ವೇಳೆ ರಾಯರ ಬೃಂದಾವನಕ್ಕೆ ಕೊನೆಯ ಶಿಲೆಯನ್ನು ಹಾಕಿ ಮುಚ್ಚಿ ಬಿಡುತ್ತಾರೆ ಇದರಿಂದ ಅಪ್ಪಣ್ಣ ಅವರು ದುಃಖ ಉಮ್ಮಳಿಸಿ ಬಂದು ಬಿಕ್ಕುತಾರೆ ಆವಾಗ ಇವರು ಹೇಳುತಿದ್ದ ಕೊನೆಯ ಶ್ಲೋಕ ಅಪೂರ್ಣ ಆದಾಗ ರಾಯರು ಬೃಂದಾವನ ಒಳಗಿನ ರಾಯರೇ ಪೂರ್ಣಗೊಳಿಸುತ್ತಾರೆ ನೀವು ಭಕ್ತಿಯಿಂದ ಹೇಳುತ್ತಿರುವ ಹಯಗ್ರೀವ ಸ್ತೋತ್ರ ಆಗಿದೆ ಹಾಗೂ ಅಪ್ಪಣ್ಣ ಆಚಾರ್ಯ ಕೂಡ ರಚಿಸಿದ ಈ ಸ್ತೋತ್ರವನ್ನು 108 ಬಾರಿ ಹೇಳಿದರೆ ನಿಮ್ಮ ಸಕಲ ದರಿದ್ರ ಹಾಗೂ ಸಂಕಷ್ಟಗಳು ಕೂಡ ಪರಿಹಾರ ಆಗುವುದು.

ರಾಯರ ಅಸ್ತಂಗತವಾದ ಬಳಿಕ ಅಪ್ಪಣ್ಣಾಚಾರ್ಯರು ಬಿಚ್ಚಾಲೆ ಗೆ ಬಂದು ಅಲ್ಲಿ ರಾಯರು ಕುಳಿತು ಜಪ ಮಾಡುತ್ತಿದ್ದ ಸ್ಥಳ ಅಲ್ಲಿ ಏಕಶಿಲಾ ಬೃಂದಾವನ ಅನ್ನು ಸ್ಥಾಪಿಸುತ್ತಾರೆ ಹಾಗೂ ಉಗ್ರ ನರಸಿಂಹ ಸ್ವಾಮಿ ದೇವಾಲಯ ಕೂಡ ಇದೆ ಇನ್ನು ಮಂತ್ರಾಲಯ ಅಲ್ಲಿ ಯಾವೆಲ್ಲ ಪೂಜೆ ನೆರವೇರುವುದು ಅದು ಕೂಡ ಬಿಚ್ಚಲೆ ಅಲ್ಲಿ ಕೂಡ ನೆರವೇರುವುದು ಹಾಗೂ ಪ್ರತಿ ವರ್ಷ ರಾಯರ ಆರಾಧನಾ ಮಹೋತ್ಸವ 3 ದಿನಗಳ ಕಾಲ ಅನ್ನು ಬಹಳ ವಿಜೃಂಭಣೆ ಇಂದ ನೆರವೇರುವುದು ಇಲ್ಲಿ ಇರುವ ನಾಗ ಪ್ರತಿಮೆ ಹಿಂದೆ ಇಲ್ಲಿ ನಾಗ ಕ್ಷೇತ್ರ ಎನ್ನುವುದರ ಬಗ್ಗೆ ಮಾಹಿತಿ ಇದೆ ಶ್ರಾವಣಮಾಸದಲ್ಲಿ ತುಂಗಭದ್ರ ನದಿ ಉಕ್ಕಿ ಹರಿದು ರಾಯರ ಶಿಲೆಯನ್ನು ಜಲಾಭಿಷೇಕ ಮಾಡುತ್ತದೆ ಹಾಗಾಗಿ ಮಾಸದಲ್ಲಿ ಇಲ್ಲಿ ಅಪ್ಪಣ್ಣಾಚಾರ್ಯರು ವಂಶಸ್ಥರು ಇಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ ಹಾಗಾಗಿ ಒಮ್ಮೆ ಬೇಟಿಯನ್ನು ಮಾಡಿ.

By admin

Leave a Reply

Your email address will not be published.