ಶ್ರೀ ಕೃಷ್ಣನ ಅಂತ್ಯ ಹೇಗಾಯಿತು ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು

ಕೃಷ್ಣನ ಅಂತ್ಯ ಹೇಗಾಯಿತು ಹಾಗೂ ಕೃಷ್ಣನ ದೇಹದ ಯಾವ ಭಾಗ ಸುಡದೆ ಉಳಿಯಿತು ಎಂಬುದನ್ನು ಕಥೆಯ ಮೂಲಕ ಈ ಲೇಖನದಿಂದ ತಿಳಿಯೋಣ.

ಶ್ರೀ ಕೃಷ್ಣನ ಲೀಲೆಯು ರೋಚಕತೆಯಿಂದ ಕೂಡಿದೆ. ಕೃಷ್ಣನ ಅನುಮತಿಯಿಲ್ಲದೆ ಒಂದು ಎಲೆಯು ಸಹ ಅಲುಗಾಡುವುದಿಲ್ಲ. ಅವನು ಪರಮ ಪಿತಾಮಹ ಪರಮಾತ್ಮನಾಗಿದ್ದಾನೆ. ಮಹಾಭಾರತದ ಯುದ್ಧ ಸಹ ಅವನ ಇಚ್ಛೆಯಂತೆ ನಡೆಯುತ್ತದೆ. ಯುದ್ದದಲ್ಲಿ ತನ್ನ ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ ದುಃಖದಲ್ಲಿರುತ್ತಾಳೆ ಆಗ ಅವಳಿಗೆ ಸಮಾಧಾನ ಮಾಡಲು ಶ್ರೀ ಕೃಷ್ಣ ಹೋಗುತ್ತಾನೆ.‌ ಕೃಷ್ಣನನ್ನು ನೋಡಿ ಗಾಂಧಾರಿ ಕೆಂಡಾ’ಮಂಡಲವಾಗುತ್ತಾಳೆ. ತನ್ನೆಲ್ಲಾ ಪುತ್ರರ ಸಾವಿಗೆ ಕೃಷ್ಣನೆ ನೇರ ಹೊಣೆ ಎಂದು ಭಾವಿಸಿದ ಗಾಂಧಾರಿ ಕೃಷ್ಣನಿಗೆ 36 ವರ್ಷದ ನಂತರ ನೀನು ಮೃತ್ಯುವಾಗುತ್ತೀಯ ಎಂದು ಶಾಪ ಕೊಡುತ್ತಾಳೆ. ಭೂಮಿಗೆ ಬಂದ ಪ್ರತಿ ಜೀವಿಯು ಮರಣ ಹೊಂದಬೇಕು ಗಾಂಧಾರಿಯ ಶಾಪ ನಿಮಿತ್ತ ಮಾತ್ರ. ಯದು ವಂಶದವರು ಧನ, ಜನಬಲ ಮತ್ತು ಕುದುರೆಗಳು ಇತ್ಯಾದಿಗಳಿಂದ ಬಲಶಾಲಿಗಳಾಗಿದ್ದಾರೆ. ಯದು ವಂಶದವರನ್ನು ಸೋಲಿಸಲು ಯದು ವಂಶದವರೆ ಸರಿಸಾಟಿ ಎಂದು ಅರಿತಿದ್ದ ಕೃಷ್ಣ. ಅದೇ ವಂಶದಲ್ಲಿ ಕಲಹ ಸೃಷ್ಟಿಸಿ ಇಡೀ ವಂಶ ನಿರ್ನಾಮವಾಗಬೇಕು ಇದರ ನಂತರ ತಾನು ದೇಹತ್ಯಾಗ ಮಾಡಬಹುದೆಂದು ಯೋಚಿಸುತ್ತಾನೆ ಶ್ರೀ ಕೃಷ್ಣ.

ಭಗವಾನ್ ಶ್ರೀಕೃಷ್ಣ ದ್ವಾರಕಾ ನಗರದ ರಾಜನಾಗಿದ್ದ. ಒಮ್ಮೆ ಋಷಿ ವಿಶ್ವಾಮಿತ್ರ, ನಾರದ ಮುನಿಗಳು ಹಾಗೂ ಋಷಿ ದೂರ್ವಾಸರು ದ್ವಾರಕಾ ನಗರಕ್ಕೆ ಆಗಮಿಸುತ್ತಾರೆ. ಯದುವಂಶದ ಯುವಕರದು ಚಂಚಲ ಸ್ವಭಾವವಾಗಿತ್ತು. ಕೃಷ್ಣ ಪುತ್ರ ಸಾಂಬನನ್ನು ಸ್ತ್ರೀ ವೇಷಧರಿಸಿ ಬಂದವರ ಮುಂದೆ ಪ್ರಸ್ತುತಪಡಿಸಿ ಇವಳು ಗರ್ಭವತಿ ಮಹಿಳೆ ಎಂದು ತಮಾಷೆ ಮಾಡುತ್ತಾರೆ. ಸಿಟ್ಟಾದ ದೂರ್ವಾಸ ಮುನಿಗಳು ನಿನ್ನ ತಮಾಷೆಯ ಹೊಟ್ಟೆಯಿಂದಲೆ ಕಲ್ಲು ಬತ್ತಿಯ ಉತ್ಪತ್ತಿಯಾಗುತ್ತದೆ ಹಾಗೂ ಅದರಿಂದಲೇ ನಿಮ್ಮ ಇಡೀ ಕುಲ ನಾಶವಾಗುತ್ತದೆ ಎಂದು ಶಾಪ ನೀಡುತ್ತಾರೆ. ಋಷಿಗಳು ಹೋದನಂತರ ಸಾಂಬಾನ ಹೊಟ್ಟೆಯನ್ನು ಹರಿದು ನೋಡಿದಾಗ ಕಲ್ಲು ಬತ್ತಿ ಸಿಗುತ್ತದೆ. ಗಾಬರಿಯಾದ ಯುವಕರು ಈ ಘಟನೆಯನ್ನು ಉ’ಗ್ರ ಸೇನನಿಗೆ ತಿಳಿಸಿದರು ಆಗ ಉ’ಗ್ರ ಸೇನ ಸೈನಿಕರನ್ನು ಕರೆಯಿಸಿ ಕಲ್ಲು ಬತ್ತಿಯನ್ನು ಪುಡಿ ಪುಡಿ ಮಾಡಿ ಸಮುದ್ರಕ್ಕೆ ಎಸೆಯುವಂತೆ ಆಜ್ಞೆ ಮಾಡುತ್ತಾನೆ. ಕಲ್ಲು ಬತ್ತಿಯ ಕೆಲ ಕಬ್ಬಿಣದ ತುಂಡುಗಳು ಮೀನಿನ ಹೊಟ್ಟೆ ಸೇರುತ್ತದೆ ಆ ಮೀನು ಒಂದು ದಿನ ಮೀನುಗಾರರ ಬಲೆಗೆ ಸಿಗುತ್ತದೆ. ಮೀನಿನ ಹೊಟ್ಟೆಯಲ್ಲಿ ಸಿಕ್ಕ ಕಬ್ಬಿಣದ ತುಂಡನ್ನು ಒಬ್ಬ ಬಿಲ್ಲುಗಾರ ಬಾಣದ ತುದಿಗೆ ಅಂಟಿಸಿಕೊಳ್ಳುತ್ತಾನೆ.

ನಂತರ ದ್ವಾರಕ ನಗರದಲ್ಲಿ ಅಪಶಕುನಗಳು, ದುರ್ಘಟನೆಗಳು ನಡೆಯತೊಡಗಿದವು. ತನ್ನ ನಗರವಾಸಿಗಳಿಗೆ ಪ್ರಭಾಸ ಕ್ಷೇತ್ರಕ್ಕೆ ವಲಸೆ ಹೋಗಲು ತಿಳಿಸುತ್ತಾನೆ. ಪ್ರಭಾಸ ಕ್ಷೇತ್ರಕ್ಕೆ ತಲುಪಿದ ಕೆಲವರು ಪೂಜೆಗಳಲ್ಲಿ ತೊಡಗಿದರೆ ಇನ್ನು ಕೆಲವರು ಕೆಲಸವಿಲ್ಲದೆ ಮೋಜು-ಮಸ್ತಿ ಕುಡಿತದಲ್ಲಿ ತೊಡಗಿದರು. ಇದರಿಂದ ತಮ್ಮ ತಮ್ಮಲ್ಲೇ ಯುದ್ಧ ಮಾಡಲು ಪ್ರಾರಂಭಿಸುತ್ತಾರೆ. ದಿನೆ ದಿನೇ ಯದು ವಂಶದವರ ನಾಶವಾಗುತ್ತದೆ. ನಂತರ ಒಮ್ಮೆ ಭಗವಾನ್ ಶ್ರೀಕೃಷ್ಣ ಅರಳಿ ಮರದ ಕೆಳಗೆ ಕುಳಿತು ನಾಲ್ಕು ದಿಕ್ಕಿನಲ್ಲಿ ಆವರಿಸಿದ ಕತ್ತಲೆಯನ್ನು ಹೋಗಲಾಡಿಸಿ ಪ್ರಕಾಶಮಾನ ಮಾಡತೊಡಗಿದ. ಆ ಸಮಯದಲ್ಲಿ ಕೃಷ್ಣನು ತನ್ನ ಬಲಗಾಲಿನ ಮೇಲೆ ಎಡಗಾಲನ್ನು ಹಾಕಿ ಕುಳಿತುಕೊಂಡಿರುತ್ತಾನೆ ಅವನ ಚರಣಗಳು ಪ್ರಜ್ವಲಿಸುತ್ತಿದ್ದವು. ಕೃಷ್ಣನ ಚರಣಗಳನ್ನು ದೂರದಿಂದ ನೋಡಿದ ಕಬ್ಬಿಣದ ತುಂಡನ್ನು ಬಾಣಕ್ಕೆ ಅಂಟಿಸಿಕೊಂಡ ಬಿಲ್ಲುಗಾರನಿಗೆ ಜಿಂಕೆಯ ಮುಖದಂತೆ ಕಾಣಿಸಿತು ಬಿಲ್ಲುಗಾರನು ಗುರಿಯಿಟ್ಟು ಬಾಣ ಹೊಡೆದನು ನಂತರ ಬಿಲ್ಲುಗಾರನು ಹೋಗಿ ನೋಡಿದರೆ ಕೃಷ್ಣ ಪರಮಾತ್ಮ. ಬಿಲ್ಲುಗಾರನಿಗೆ ತಾನು ಮಾಡಿದ ತಪ್ಪನ್ನು ಅರಗಿಸಿಕೊಳ್ಳಲಾಗಲಿಲ್ಲ.

ಕೃಷ್ಣನು ದೇಹತ್ಯಾಗ ಮಾಡಿದನು. ಕೆಲವರ ಪ್ರಕಾರ ಕೃಷ್ಣನ ದೇಹಕ್ಕೆ ಅಗ್ನಿ ಸಂಸ್ಕಾರ ಮಾಡಲಾಗಿತ್ತು ಪಂಚತತ್ವದಿಂದ ನಿರ್ಮಿತವಾದ ಕೃಷ್ಣನ ದೇಹ ದಿವ್ಯವಾಗಿತ್ತು. ಪಾಂಡವರು ಕೃಷ್ಣನ ಅಂತ್ಯಸಂಸ್ಕಾರ ಮಾಡಿದರು ಇಡೀ ದೇಹ ಸುಟ್ಟರೂ ಕೃಷ್ಣನ ಹೃದಯ ಸುಡಲೇ ಇಲ್ಲ ಹೃದಯವನ್ನು ಸುಡಲು ಪ್ರಯತ್ನಪಟ್ಟರು ಆಗಲಿಲ್ಲ. ನಂತರ ಪಾಂಡವರು ಹೃದಯವನ್ನು ನೀರಿಗೆ ಬಿಟ್ಟರು ಕೃಷ್ಣನ ಹೃದಯ ರಾಜ ಇಂದ್ರಿಯಂನಿಗೆ ಸಿಕ್ಕಿತು ಅವನು ಜಗನ್ನಾಥನ ಭಕ್ತನಾಗಿದ್ದನು ಕೃಷ್ಣನ ಹೃದಯವನ್ನು ಜಗನ್ನಾಥನ ಮೂರ್ತಿಯಲ್ಲಿ ಪ್ರತಿಷ್ಠಾಪಿಸಿದನು ಜಗನ್ನಾಥನ ಮೂರ್ತಿಯಲ್ಲಿ ಕೃಷ್ಣನ ಹೃದಯ ಇನ್ನೂ ಜೀವಂತವಾಗಿ ಬಡಿದುಕೊಳ್ಳುತ್ತದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.

Leave a Comment

error: Content is protected !!