ಭಕ್ತರ ಕಷ್ಟಗಳನ್ನು ಪರಿಹರಿಸುವ ಸೌತಡ್ಕ ಗಣಪನ ವಿಶೇಷತೆಯನೊಮ್ಮೆ ಓದಿ..

ಗಣಪತಿ, ಗಣೇಶ, ಗಜಾನನ, ವಿನಾಯಕ, ಹೀಗೆ ನಾನಾ ಹೆಸರುಗಳಿಂದ ಭಕ್ತರ ಸಂಕಷ್ಟ ಗಳನ್ನು ಈಡೇರಿಸುವ ಗಣಪನಿಗೆ ಎಲ್ಲಾ ಪೂಜೆಗಳಲ್ಲಿ ಮೊದಲ ಆದ್ಯತೆ. ಗಣೇಶನಿಗೆ ನಮ್ಮಲ್ಲಿ ಸಾಕಷ್ಟು ದೇವಾಲಯಗಳಿಗೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸಮೀಪದಲ್ಲೂ ಒಂದು ದೇವಾಲಯವಿದೆ ಅದುವೆ ಸೌತಡ್ಕ ಮಹಾಗಣಪತಿ ದೇವಸ್ಥಾನ. ಇದರ ಕ್ಷೇತ್ರ ಪರಿಚಯ, ಹಾಗೂ ಅದರ ವಿಶೇಷತೆ ಏನು ಎಂಬುದಾಗಿ ಈ ಮೂಲಕ ತಿಳಿಯೋಣ.

ಸುಮಾರು ೮೦೦ ವರ್ಷಗಳ ಕಾಲ ಇತಿಹಾಸ ಇರುವ ಅಧ್ಬುತ ಸೌತಡ್ಕ ಮಹಾಗಣಪತಿ ದೇವಾಲಯ. ಎಲ್ಲಾ ಭಕ್ತರನ್ನು ಸೆಳೆಯುತ್ತಿರುವ ತಾಣ ಇದಾಗಿದೆ. ಈ ದೇವಾಲಯ ಮರದ ನೆರಳಿನಲ್ಲಿ, ಪ್ರಕೃತಿಯ ಸೊಬಗಿನನಲ್ಲಿ, ಮರದ ಬುಡದಲ್ಲಿ ನೆಲೆಸಿದ್ದಾನೆ. ಈ ಗಣಪನಿಗೆ ಗುಡಿ ಇಲ್ಲ. ಧಾರ್ಮಿಕ ಕ್ಷೇತ್ರಕಷ್ಟೇ ಹೆಸರುವಾಸಿಯಾಗಿಲ್ಲದೆ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಂಡು ಭಕ್ತರನ್ನು ಆನಂದಪಡಿಸಿದೆ. ಈ ಕ್ಷೇತ್ರದ ಹಿಂದೆ ಒಂದು ಪುರಾಣ ಕಥೆಯೇ ಇದೆ. ಕಥೆಗೆ ಗೋಪಾಲಕರ ಭಕ್ತಿಯ ನಂಟಿದೆ. ದನ ಮೇಯಿಸಲು ಬರುವಂತಹ ಹುಡುಗರು ತಮ್ಮ ಮನೆಯಿಂದ ತಂದಂತಹ ಬುತ್ತಿಯನ್ನು ಗಣಪನಿಗೆ ನೈವೇದ್ಯ ಮಾಡಿ ನಂತರ ಸ್ವೀಕರಿಸುತ್ತಿದ್ದರು. ಗೋಪಾಲಕೃಷ್ಣ ಭಟ್ ರವರು ಧಾರ್ಮಿಕ ವ್ಯಕ್ತಿ,ಈ ದೇವಸ್ಥಾನದ ಗಣಪತಿಯನ್ನು ವ್ಯವಸ್ಥಿತವಾದ ಒಂದು ಕಟ್ಟೆಯನ್ನು ಕಟ್ಟಿ ಆ ಕಟ್ಟೆಗೆ ಪ್ರತಿಷ್ಟಾಪನೆ ಮಾಡಿಸುವ ಒಂದು ಕಾರ್ಯವನ್ನು ಮಾಡಿ, ದೇವರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೈವೇದ್ಯ ಮಾಡಿಸುತ್ತಿದ್ದರು. ಕಳೆದ ೬೦ ವರ್ಷಗಳಿಂದ ಎಲ್ಲಾ ಜಿಲ್ಲೆ ತಾಲೂಕಿನಿಂದ ಹೆಚ್ಚೆಚ್ಚು ಜನ ಆಗಮಿಸಿಲು ಶುರು ಮಾಡಿದರು. ಬಯಲೇ ಆಲಯವಾಗಿಸಿಕೊಂಡು ಬಡವ, ಶ್ರೀಮಂತ ಎನ್ನುವ ಬೇಧ-ಭಾವ ತೋರದೆ ಮಾನವನಿಗೂ ಸಕಲ ಜೀವ ರಾಶಿಗಳಿಗೂ ಅಭಯ ಹಸ್ತನಾಗಿ ಎಲ್ಲರನ್ನು ರಕ್ಷಿಸುತ್ತಿದ್ದಾವನೆ ಗಣಪ.

ಸೌತಡಕನಷ್ಟೇ ವಿಶೇಷ ವಾಗಿದೆ ಇಲ್ಲಿನ ಹರಕೆಗಳು. ಭಕ್ತರು ತಮ್ಮ ಬೇಡಿಕೆಗಳು ನೆರವೇರಿದಾಗ ಗಣಪನಿಗೆ ಗಂಟೆ ಕೊಡುವ ನಿಯಮ ಇದೆ. ಗಣಪನ ದೇವಾಲಯಕ್ಕೆ ಬಂದೊಡನೆ ವಿಧ ವಿಧವಾದ ಗಂಟೆಗಳನ್ನು ಕಾಣಬಹುದು. ಗಂಟೆಯ ಜೊತೆಗೆ ವಿಶಿಷ್ಟ ಪೂಜೆಗಳು ನೆರವೇರುತ್ತವೆ. ಅಪ್ಪ ಕಜ್ಜಾಯ, ಪಂಚ ಕಜ್ಜಾಯ, ರಂಗ ಪೂಜೆ, ಈ ದೇವಾಲಯದಲ್ಲಿ ನಡೆಯುವ ವಿಶೇಷ ಸೇವೆಗಳು. ಹಾಗೂ ಗಣಪನಿಗೆ ಪ್ರಿಯವಾದ ಮೊದಕ ತಿಂಡಿಗಳನ್ನು ಮನೆಯಲ್ಲಿಯೇ ಮಾಡಿಕೊಂಡು ನೈವೇದ್ಯ ಮಾಡುತ್ತಾರೆ. ಯಾವುದೇ ನಿಬಂಧನೆ ಇಲ್ಲ ತಮಗೆ ಯಾವ ಭಕ್ಷವನ್ನು ದೇವರಿಗೆ ಒಪ್ಪಿಸಬೇಕೋ ಅದನ್ನು ತಂದು ಕೊಡಬಹುದು. ವಿದ್ಯೆ, ಸಂತಾನ, ಆರ್ಥಿಕ ಸಮಸ್ಯೆ, ಹೀಗೆ ಭಕ್ತರ ಹಲವು ಕಷ್ಟ ಗಳನ್ನು ಈಡೇರಿಸುತ್ತಾನೆ ಗಣಪ. ಇದಕ್ಕೆ ಸಾಕ್ಷಿ ಪ್ರತಿದಿನ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು. ಇಲ್ಲಿನ ನಿತ್ಯ ಪೂಜೆಗಳು ಅತ್ಯಂತ ಸರಳ. ಪ್ರತಿದಿನ ಬೆಳಿಗ್ಗೆ ಅಭಿಷೇಕ, ಹಣ್ಣು ಕಾಯಿ, ಅವಲಕ್ಕಿಯ ಪಂಚ ಕಜ್ಜಾಯ ಹಾಗೆ ಅನ್ನದ ನೈವೇದ್ಯ, ತಾಂಬೂಲಾದಿಗಳನ್ನು ನೀಡಿ ಮಹಾಪೂಜೆ ನೆರವೇರಿಸುತ್ತಾರೆ.

ರಾತ್ರಿ ಹಣ್ಣು ಕಾಯಿ ಪಂಚ ಕಜ್ಜಾಯ ನೀಡಿ ಮಹಾಪೂಜೆ ನೆರವೇರಿಸಲಾಗುತ್ತದೆ. ಅಲ್ಲದೆ ಪ್ರತಿದಿನ ಗಣಪತಿ ಹೋಮವನ್ನು ಮಾಡುತ್ತಾರೆ. ಬಯಲಿನಲ್ಲಿ ಪ್ರಕೃತಿಯ ಮಧ್ಯೆ ಮಧ್ಯೆ ಇರುವ ಗಣಪ ಪ್ರಾಣಿ ಪಕ್ಷಿಗಳ ಪ್ರಿಯ. ಪ್ರಕೃತಿಯ ಸೊಬಗನ್ನು ಕಾಣಬಹುದು. ಇಲ್ಲಿ ಬೃಹತ್ ಗೋಶಾಲೆಯೂ ಇದೆ. ೨೪೦ ಕ್ಕಿಂತ ಹೆಚ್ಚು ಹಸುಗಳು ಇವೆ. ದೇವಸ್ಥಾನದಿಂದಲೇ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಗಣಪತಿಗೆ ಸಂಕಷ್ಟ ಚೌತಿ, ಗಣೇಶ ಚೌತಿಯ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ಗಣೇಶನಿಗೆ ಬಹಳ ವಿಶೇಷ ಶಕ್ತಿ ಇದ್ದು ಬಂದಿರುವ ಎಲ್ಲಾ ಭಕ್ತರಿಗೂ ಒಳ್ಳೆಯದೆ ಆಗಿದೆ.

ಗಣಪನೆ ಹಾಗೆ ಎಲ್ಲರಿಗೂ ಬಹುಬೇಗನೆ ಇಷ್ಟವಾಗುತ್ತಾನೆ. ಎಲ್ಲರ ಕಷ್ಟಗಳನ್ನು ಬಹುಬೇಗನೆ ನೆರವೇರಿಸುವ ಶಕ್ತಿ ಇವನಲ್ಲಿದೆ. ನೀವು ಒಮ್ಮೆ ಭೇಟಿ ಕೊಡಿ ನಿಮ್ಮ ಇಷ್ಟಗಳನ್ನು ಈಡೇರಿಸಿಕೊಳ್ಳಬಹುದು.

Leave a Comment

error: Content is protected !!