ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

Slipper shot to darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಯಾರು ಕೈ ಬಿಟ್ಟರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಕೈಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು.

ಆದರೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಸಾಂಗ್ ಆಗಿರುವ ಬೊಂಬೆ ಬೊಂಬೆ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದಿರುವಂತಹ ಘಟನೆ ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ತಲೆತಗ್ಗಿಸುವ ವಿಚಾರವಾಗಿದೆ. ಇದಕ್ಕೆ ಕಾರಣೀಕರ್ತರಾಗಿದ್ದು ಇನ್ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು. ಹಾಗಿದ್ದರೆ ಈ ಘಟನೆ ನಡೆಯುವುದರ ಹಿಂದಿನ ನಿಜವಾದ ಕಾರಣವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಸೋಶಿಯಲ್ ಮೀಡಿಯಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಅಭಿಮಾನಿ ಬಳಗದ ವಲಯದಲ್ಲಿರುವ ಕೆಲವು ವ್ಯಕ್ತಿಗಳು ಅಪ್ಪು ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೊಸಪೇಟೆಗೆ ಬರುತ್ತಿದ್ದೇವೆ ಯಾರು ಏನು ಮಾಡಿಕೊಳ್ಳಲು ಸಾಧ್ಯವೋ ಮಾಡಿಕೊಳ್ಳಿ ಎಂಬುದಾಗಿ ಅಪ್ಪು ಅಭಿಮಾನಿಗಳಿಗೆ ಚಾಲೆಂಜ್ ನೀಡುತ್ತಾರೆ.

ಇದರಿಂದ ಕುಪಿತರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹೊಸಪೇಟೆಯಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾಗಿಂತ ಹೆಚ್ಚಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್ ಹಾಗೂ ಬ್ಯಾನರ್ ಮತ್ತು ಕಟೌಟ್ಗಳನ್ನು ನಿಲ್ಲಿಸಿ ಸೆಲೆಬ್ರೇಶನ್ ಮಾಡುತ್ತಾರೆ. ಕೇವಲ ಸ್ಟಾರ್ ವಾರ್ ಎ ನ್ನುವುದು ಇಷ್ಟಕ್ಕೆ ನಿಂತಿದ್ದರೆ ಪರವಾಗಿಲ್ಲ ಆದರೆ ಇರುವಂತಹ ಎಲ್ಲಾ ಮೀತಿಗಳನ್ನು ಮೀರಿ ಬೆಳೆದು ನಿಂತಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವೇದಿಕೆಯ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಚಪ್ಪಲಿಯನ್ನು ಅವರ ಮೇಲೆ ಎಸೆದಿರುವುದು ಈಗ ಎಲ್ಲೆಲ್ಲೂ ವೈರಲ್ ಆಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕಾಲಿನಿಂದ ಕೂಡ ಅವರ ಮೇಲೆ ಹ’ಲ್ಲೆಯ ಯತ್ನವನ್ನು ಮಾಡಲಾಗಿದೆಯಂತೆ.

ಇದಕ್ಕಿನ್ನ ಮುನ್ನ ಕಾರ್ಯಕ್ರಮಕ್ಕೆ ಬರುವ ಮುಂಚೆನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸಪೇಟೆಯ ಸರ್ಕಲ್ ನಲ್ಲಿ ಇದ್ದಂತಹ ಅಪ್ಪು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗದ ಒಬ್ಬ ಘನವೆತ್ತ ನಾಯಕ ನಟನ ಮೇಲೆ ಅಪ್ಪು ಅಭಿಮಾನಿಗಳು ಈ ರೀತಿ ಮಾಡಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ತಲೆತಗ್ಗಿಸುವ ಪರಿಸ್ಥಿತಿಯನ್ನು ಮಾಡಿದೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!