ನರಹುಳಿ ಸ್ಕಿನ್ ಟ್ಯಾಗ್ ನಿವಾರಿಸುವ ಸೂಕ್ತ ಮನೆಮದ್ದು

ನರಹುಳಿ ಸಮಸ್ಯೆ ಈಗ ಎಲ್ಲರಲ್ಲೂ ಕಂಡುಬರುವ ಸರ್ವೆ ಸಾಮಾನ್ಯ ಸಮಸ್ಯೆ ಆಗಿದೆ. ಅದಕ್ಕೆ ಕಾರಣ ಏನು ನಿವಾರಿಸಲು ಉಪಾಯಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹ್ಯೂಮನ್ ಪ್ಯಾಪಿಲೋಮ ಎಂಬ ವೈರಸ್ಸಿನಿಂದಾಗಿ ನರಹುಳಿ ಸಮಸ್ಯೆ ಉಂಟಾಗುತ್ತದೆ. ಇದು ನೂರರಲ್ಲಿ ಶೇಕಡ 20ರಷ್ಟು ಜನರಲ್ಲಿ ಕಂಡುಬರುತ್ತದೆ ಇದಕ್ಕೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.

ಮೊದಲನೆಯದಾಗಿ ಈರುಳ್ಳಿ.ಅರ್ಧದಷ್ಟು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ನೀರನ್ನು ಸೇರಿಸದೇ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಅದನ್ನು ಹಿಂದಿ ರಸ ತೆಗೆದುಕೊಂಡು ಒಂದು ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ಕೈ ಇಂದ ಅಥವಾ ಹತ್ತಿಯ ಸಹಾಯದಿಂದ ನರಹುಳಿ ಆದ ಜಾಗಕ್ಕೆ ಹಚ್ಚಬೇಕು. ಹತ್ತು ನಿಮಿಷ ಆರಲು ಬಿಟ್ಟು ಮತ್ತೆ ಹಚ್ಚಿ ಹೀಗೆ ೩/೪ ತಾಸು ಬಿಡಬೇಕು ಅಥವಾ ರಾತ್ರಿ ಮಲಗುವಾಗ ಆದ್ರೂ ಹಚ್ಚಿಕೊಳ್ಳಬಹುದು. ಹೀಗೆ ಸತತವಾಗಿ ಒಂದು ವಾರ ಮಾಡಿದರೆ ನರಹುಳಿ ಕಡಿಮೆ ಆಗುತ್ತದೆ.

ಒಂದೆರಡು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನು ಜಜ್ಜಿಕೊಳ್ಳಬೇಕು. ತರಿ ತರಿಯಾದ ಬೆಳ್ಳುಳ್ಳಿಯನ್ನು ನರಹುಳಿ ಆದ ಜಾಗಕ್ಕೆ ಹಚ್ಚಿ ಬೀಳದಂತೆ ಅದರ ಮೇಲೆ ಪ್ಲಾಸ್ಟರ್ ಹಚ್ಚಬೇಕು. ಇದನ್ನ ಹಚ್ಚಿ ಸುಮಾರು ಒಂದು ಗಂಟೆ ಆದರೂ ಬಿಡಬೇಕು ಇಲ್ಲವಾದರೆ ರಾತ್ರಿ ಹಚ್ಚಿ ಬೆಳಿಗ್ಗೆ ತೆಗೆಯಬಹುದು.
ಈರುಳ್ಳಿ ಮತ್ತು ಬೆಳ್ಳುಳ್ಳಿ ಇವೆರಡೂ ಈ ನರಹುಳಿಯನ್ನು ನಿವಾರಿಸಲು ಉತ್ತಮ ಮನೆ ಮದ್ದುಗಳು. ಹೀಗೆ ಒಂದು ವಾರ ಮಾಡುವುದರಿಂದ ನರಹುಳಿ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

Leave a Comment

error: Content is protected !!