ತುರಿಕೆ ಕಜ್ಜಿ ಮುಂತಾದ ಚರ್ಮರೋಗ ನಿವಾರಣೆಗೆ ಈ ಗಿಡದ ಎಲೆ ಇದ್ರೆ ಸಾಕು


ಬಹುತೇಕ ಜನರಿಗೆ ಹಳ್ಳಿಗಳಲ್ಲಿ ಇರುವಂತ ಔಷಧಿ ಸಸ್ಯಗಳ ಬಗ್ಗೆ ತಿಳಿದಿರೋದಿಲ್ಲ, ಅಂತಹ ಸಸ್ಯಗಳ ಸಾಲಿನಲ್ಲಿ ಈ ನೆಲನೆಲ್ಲಿ ಗಿಡ ಕೂಡ ಒಂದಾಗಿದೆ, ಇದನ್ನು ಕಜ್ಜಿ ತುರಿಕೆ ಮುಂತಾದ ಚರ್ಮ ರೋಗ ನಿವಾರಣೆಗೆ ಬಳಸಲಾಗುತ್ತದೆ. ಅಷ್ಟಕ್ಕೂ ಈ ಸಸ್ಯವನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಮುಂದೆ ತಿಳಿಸುತ್ತವೆ ನಿಮಗೆ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಈ ಸಸ್ಯದ ಬಗ್ಗೆ ಹಳ್ಳಿಯ ಜನರಿಗೆ ಹೆಚ್ಚು ಪರಿಚಯವಿರುತ್ತದೆ, ಈ ಗಿಡವನ್ನು ನೆಲನೆಲ್ಲಿ ಗಿಡ ಎಂಬುದಾಗಿ ಕರೆಯುತ್ತಾರೆ, ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ ನೆಲನೆಲ್ಲಿ ಗಿಡದ ಎಲೆಗಳೊಂದಿಗೆ ಉಪ್ಪನ್ನು ಸೇರಿಸಿ, ಅರೆದು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕಜ್ಜಿ, ತುರಿಕೆಗಳಂಥ ಚರ್ಮ ರೋಗಗಳು ನಿಯಂತ್ರಣಕ್ಕೆ ಬರುತ್ತವೆ.

ಇನ್ನು ಮಳೆಗಾಲದಲ್ಲಿ ಶೀತ ಹೆಚ್ಚಾಗಿ ಉಂಟಾಗುವಂತ ಕಫ ಇದರ ನಿವಾರಣೆಗೆ ಎರಡು ಗ್ಲಾಸ್ ಬಿಸಿನೀರು ಸೇವನೆ ಮಾಡುವುದರಿಂದ ಕಫ ನಿವಾರಣೆಯಾಗಿ ಉಸಿರಾಟದ ತೊಂದರೆ ಇಲ್ಲದಂತಾಗುವುದು.

ಮಲಬದ್ಧತೆ ಸಮಸ್ಯೆ ಇರೋರಿಗೆ ಮನೆಮದ್ದು: ಖರ್ಜುರ ಹಣ್ಣನ್ನು ರಾತ್ರಿ ಹಾಲಿನಲ್ಲಿ ನೆನಸಿಟ್ಟು ಬೆಳಗಿನ ಸಮಯದಲ್ಲಿ ತಗೆದು ನೀರು ಹಿಂಡಿ ತಿಂದರೆ, ಮಲ ವಿಸರ್ಜನೆ ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ನಡೆಯುತ್ತದೆ. ಇದು ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಉಪಯೋಗಕಾರಿ ಅನ್ನಬಹುದು.


Leave A Reply

Your email address will not be published.