ಗಜಕರ್ಣ ಹುಳುಕಡ್ಡಿ ತೊಂದರೆಗಳಿಗೆ ಸೂಕ್ತ ಮನೆ ಮದ್ದು

ಗಜಕರ್ಣ ಹುಳುಕಡ್ಡಿ ತೊಂದರೆಗಳಿಗೆ ಡಾಕ್ಟರ್ ಪ್ರವೀಣ್ ಅವರು ಆಯುರ್ವೇದ ಮದ್ದನ್ನು ತಿಳಿಸುತ್ತಾರೆ ಅದು ಏನು ಎಂಬುದನ್ನು ನಾವೂ ತಿಳಿಯೋಣ ಬನ್ನಿ ಗಜಕರ್ಣ ಇದು ಒಂದು ರೀತಿಯ ತುರಿಕೆ ಉಂಟಾಗುವ ಚರ್ಮ ವ್ಯಾಧಿ. ಇದು ಬ್ಯಾಕ್ಟೀರಿಯಾ ಇಂದ ಫಂಗಲ್ ಇನ್ಫೆಕ್ಷನ್ ಆಗ್ ಬರುತ್ತದೆ. ಇದಕ್ಕೆ ಏನು ಕಾರಣ ಅಂದ್ರೆ, ಅನೈಜೆನಿಕ್, ಸ್ವಚ್ಚತೆಯ ಕೊರತೆಯಿಂದ ಚರ್ಮ ರೋಗ ಉಂಟಾಗಲು ಕಾರಣ. ಒದ್ದೆ ಬಟ್ಟೆ ಧರಿಸುವುದು, ಅತಿಯಾಗಿ ಬೆವರುವುದು ಇದರಿಂದ ತೇವ ಉಂಟಾಗಿ ಅಲ್ಲಿ ಕ್ರಿಮಿಗಳು ಹುಟ್ಟುತ್ತವೆ ಇದರಿಂದಾಗಿ ಚರ್ಮ ರೋಗ ಉಂಟಾಗುತ್ತದೆ.

ಈ ಗಜಕರ್ಣ ರೋಗವು ಸುಮಾರು ಕುತ್ತಿಗೆಯ ಹಿಂಬಾಗದಲ್ಲಿ, ಕಂಕುಳ ಸಂಧಿಗಳಲ್ಲಿ ಹಾಗೂ ಅತಿಯಾಗಿ ಬೆವರು ನಿಲ್ಲುವ ಜಾಗದಲ್ಲಿ ಹೆಚ್ಚು ಉಂಟಾಗುತ್ತವೆ. ಆದ್ದರಿಂದ ಅತಿಯಾಗಿ ಬೆವರು ಬರುವ ಜಾಗವನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಗಜಕರ್ಣಕ್ಕೆ ಮನೆ ಮದ್ದುಗಳು ಏನಪ್ಪಾ ಅಂದ್ರೆ, ಬೇವಿನ ಸೊಪ್ಪು ಅದನ್ನ ಜಜ್ಜಿ ಅದಕ್ಕೆ ಚಿಟಕಿ ಅರಿಶಿನ ಪುಡಿ ಸೇರಿಸಿ ಗಜಕರ್ಣ ಆಗಿರುವ ಜಾಗಕ್ಕೆ ದಿನಕ್ಕೆ ಎರಡು ಸಲ ಹಚ್ಚಬೇಕು ಹೀಗೆ ಹಲವಾರು ತಿಂಗಳುಗಳ ಕಾಲ ಮಾಡಬೇಕು. ಹೀಗೆ ಮಾಡುವುದರಿಂದ ಗಜಕರ್ಣ ಕಡಿಮೆ ಆಗುತ್ತದೆ.

ಇದು ಬಿಟ್ಟರೆ ಇನ್ನೊಂದು ಔಷಧಿ ಏನು ಅಂತ ನೋಡೋಣ. ಮಂಜಿಶ್ಟ ಎನ್ನುವ ಒಂದು ಬೇರು ಸುಗುತ್ತೆ ಅದನ್ನ ತಂದು ಸಾಣೆ ಕಲ್ಲಿನಲ್ಲಿ ಅರೆದು ಅದರಿಂದ ಬರುವ ಗಂಧವನ್ನು ಗಜಕರ್ಣ ಆಗಿರುವ ಜಾಗಕ್ಕೆ ಲೇಪಿಸಿದರೆ ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಈ ಮನೆ ಮದ್ದುಗಳಿಕದ ಕಡಿಮೆ ಆಗುತ್ತದೆ ಆದರೂ ಕಡಿಮೆ ಆಗದೆ ಇದ್ರೆ ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಅದಕ್ಕೆ ಆಯುರ್ವೇದದಲ್ಲಿ ಸೂಕ್ತ ಔಷಧಿ ಇದೆ ಎನ್ನುತ್ತಾರೆ ಡಾಕ್ಟರ್ ಪ್ರವೀಣ್ ಅವರು.

Leave a Comment

error: Content is protected !!