ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆ ಒಂದು ಶಬರಿಮಲೈ ನಲ್ಲಿ ಅವರು ಮಾಡಿದ ಆ ಒಂದು ಕೆಲಸ ಆದ್ರೂ ಏನೂ ಅಂತ ತಿಳಿದರೆ ನೀವು ನಿಜಕ್ಕೂ ಬೇಸರ ಗೊಳ್ಳುತ್ತೀರಿ. ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಒಂದು ವೇದಿಕೆಯ ಮೇಲೆ ಹೇಳಿ ನೊಂದುಕೊಂಡಿದ್ದಾರೆ.ಹಾಗಾದ್ರೆ ಪುನೀತ್ ರಾಜ್ ಕುಮಾರ್ ಅವರು ಅಂತಹ ಕೆಲಸವಾದರೂ ಏನು ಮಾಡಿದ್ರು ಅನ್ನೋದನ್ನ ನೋಡೋಣ ಬನ್ನಿ.

ಶಿವರಾಜ್ ಕುಮಾರ್ ಮತ್ತು ಪುನೀತ ರಾಜಕುಮಾರ್ ಅವರು ನಮ್ಮ ಸ್ಯಾಂಡಲ್ ವುಡ್ ಅಲ್ಲಿ ಎಲ್ಲರಿಗೂ ಚಿರಪರಿಚಿತ ಎಂದೇ ಹೇಳಬಹುದು . ಪುನೀತ್ ರಾಜ್ ಕುಮಾರ್ ಅವರು ಸದಾ ಹಸನ್ಮುಖಿ ವ್ಯಕ್ತಿತ್ವ ಹೊಂದಿರುವ ದೇವತಾ ಮನುಷ್ಯ ಆದರೆ ಈ ಜಗತ್ತಿನಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಎನ್ನುವುದು ಸತ್ಯ ಹಾಗಾಗಿ ಪುನೀತ್ ರಾಜ್ ಕುಮಾರ್ ಅವರ ಒಳ್ಳೆಯತನ ಹಾಗೂ ಅವರ ಗುಣ ನೋಡಿ ಮೇಲೆ ಇರುವ ದೇವರಿಗೂ ಹೊಟ್ಟೆಕಿಚ್ಚು ಆಗಿದೆ ಹಾಗಾಗಿ ಅವನು ಕೂಡ ಅವರ ಜೊತೆ ಕಾಲ ಕಳೆಯುವ ಸಲುವಾಗಿ ಬೇಗನೆ ತನ್ನ ಹತ್ತಿರ ಕರೆದುಕೊಂಡ ಅನಿಸುತ್ತೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಯಾವುದೇ ಜಾತಿ, ಬೇಧ, ಭಾವ ಇಲ್ಲದೆ ಮೇಲೂ, ಕೀಳು ತಾನೂ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೆ ಎಲ್ಲರೂ ಹಾಕುತ್ತಾರೆ. ಇಂದಿನ ಅಯ್ಯಪ್ಪನ ಪವಾಡಗಳನ್ನು ಕಣ್ಣಾರೆ ಕಂಡಿದ್ದರು ಹಾಗೆ ತಾವು ಅಂದುಕೊಂಡ ಕೆಲಸ ಕಾರ್ಯ ಆಗಲು ಅಯ್ಯಪ್ಪನ ಮನಃಪೂರ್ವಕ ಭಕ್ತಿಯಿಂದ ಪೂಜೆ ಮಾಡಿ 48 ದಿನಗಳ ವೃತವನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಬರಿ ಮಲೆ ಬೆಟ್ಟವನ್ನು ಹತ್ತಿ ಆತನ ದರ್ಶನವನ್ನು ಮಾಡಿ ತಮ್ಮ ಜೀವನವನ್ನು ಪುನೀತರನ್ನಾಗಿ ಮಾಡಿಕೊಂಡ ಭಕ್ತರ ಪೈಕಿ ಶಿವರಾಜ್ ಕುಮಾರ್ ಹಾಗೂ ಪುನೀತ ರಾಜಕುಮಾರ್ ಕೂಡ ಹೌದು.

ಕನ್ನಡ ಚಿತ್ರರಂಗದಲ್ಲಿ ಅನೇಕ ನಟರು ಅಯ್ಯಪ್ಪನ ಭಕ್ತರು ಅವರು ಮಾಲೆ ಹಾಕಿ ಕಟ್ಟುನಿಟ್ಟಿನ ವೃತವನ್ನು ಪಾಲಿಸಿ ಶಬರಿ ಅಯ್ಯಪ್ಪನ ದರ್ಶನ್ ಪಡೆಯುವುದು ನಿಮಗೆ ತಿಳಿದ ವಿಷಯ ಪುನೀತ್ ರಾಜ್ ಕುಮಾರ್ ಅವರ ಮರಣ ನಂತರ ಅಯ್ಯಪ್ಪ ಯಾತ್ರೆಗೆ ಅವರ ಫೋಟೋವನ್ನು ಹೊತ್ತುಕೊಂಡು ಹೋಗಿ ಸ್ವಾಮಿ ದರ್ಶನ್ ಮಾಡಿದ ನಿದರ್ಶನ ನಾವು ಕೇಳಿದ್ದೀವಿ ಹಾಗೂ ನೋಡಿದ್ದೀವಿ. ಹಾಗೆಯೇ ಅವರ ಮರಣದ ನಂತರ ಅವರ ಸಹಾಯವನ್ನು ನಾವೆಲ್ಲ ತಿಳಿದದ್ದು. ಹಾಗೆಯೇ ಅವರು ಮಾಡಿದ ಸಹಾಯ ಬಲಗೈ ಅಲ್ಲಿ ಮಾಡಿದ್ದು ಎಡಗೈಗೆ ಗೊತ್ತಿಲ್ಲ . ಬಡವರಿಗೆ ಸಹಾಯ ಮಾಡಿದ ಕೊಡುಗೈ ದಾನಿ ಎಂದೇ ಹೇಳಬಹುದು ಅಂತೆಯೇ ಒಂದು ನಿದರ್ಶನ ಇಂದಿನ ಲೇಖನದ ಅಲ್ಲಿ ತಿಳಿಸಲು ಹೊರಟಿದ್ದೇವೆ.

ಪುನೀತ್ ರಾಜ್ ಕುಮಾರ್ ಅವರು ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ಹೋಗುವುದು ಸಹಜ ಒಮ್ಮೆ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆಗೆ ತೆರಳಿದ್ದಾಗ ಅಲ್ಲಿ ಒಬ್ಬ ಎರಡು ಕಾಲು ಹಾಗೂ ಒಂದು ಕೈ ಇಲ್ಲದ ಅಂಗವಿಕಲರೊಬ್ಬರು ಅಲ್ಲಿಗೆ ಮಾಲೆ ಹಾಕಿ ಬಂದಿದ್ದರು.ಇದನ್ನು ಕಂಡ ಪುನೀತ್ ರಾಜ್ ಕುಮಾರ್ ಅವರಿಗೆ ಏನನಿಸಿತ್ತೋ ಏನೋ ಗೊತ್ತಿಲ್ಲ ಕೂಡಲೇ 5 ಲಕ್ಷದ ಚೆಕ್ ಒಂದನ್ನು ಬರೆದು ಆತನ ಕೈಗೆ ನೀಡುತ್ತಾರೆ. ಹಾಗೂ ನೀನು ಇದರಿಂದ ನಿನ್ನ ಜೀವನಾನ ರೂಪಿಸಿಕೊಳ್ಳಲು ಹೇಳುತ್ತಾರೆ.

ಇದನ್ನು ಸ್ವತಃ ಶಿವಣ್ಣ ಅವರೇ ಒಂದು ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗೂ ಅಪ್ಪು ಬಗ್ಗೆ ಮಾತು ಕಥೆ ಬಂದಾಗ ಅವರು ಭಾವನಾತ್ಮಕವಾಗಿ ಈ ಘಟನೆಯನ್ನು ಹೇಳಿಕೊಂಡಿದ್ದಾರೆ. ಇಲ್ಲಿ ನಾವು ಅರಿವು ಮೂಡುವುದು ರಾಜಕುಮಾರ ಅವರು ಕೂಡ ಕಷ್ಟ ಅಂತ ಬಂದವರಿಗೆ ಸಹಾಯವನ್ನು ಮಾಡುತ್ತಾರೆ ಹಾಗೇ ಅವರ ಮಕ್ಕಳು ಕೂಡ ತಂದೆಯ ಹಾದಿಯನ್ನೇ ಪಾಲಿಸುತ್ತಾ ಇರೋದು ಸಂತಸದ ಸಂಗತಿ. ಹೀಗೆಯೆ ಇವರು ತನ್ನ ಜೀವನದಲ್ಲಿ ಒಳ್ಳೆಯ ಯಶಸ್ಸು ಗಳಿಸಲು ಅದ ದೇವರು ಆಶೀರ್ವಾದ ನೀಡಲಿ.

By admin

Leave a Reply

Your email address will not be published.