99% ಜನಕ್ಕೆ ಶಬರಿ ಮಲೆ ಅಯ್ಯಪ್ಪನ ಈ ರಹಸ್ಯ ಗೊತ್ತೇ ಇಲ್ಲ

ಭಾರತದ ಕೇರಳದ ಬೆಟ್ಟದ ಮೇಲಿರುವ ಅಯ್ಯಪ್ಪ ವಿಶ್ವವಿಖ್ಯಾತಿ. ಅಯ್ಯಪ್ಪ ದೇವರು ಹೇಗೆ ಜನಿಸಿದರು, ಯಾರ ಮಗ, ಯಾವ ಕಾರಣಕ್ಕೆ ಜನಿಸಿದರು ಪೌರಾಣಿಕ ಹಿನ್ನೆಲೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಪುರಾಣದ ಪ್ರಕಾರ ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುತ್ತಾಳೆ ಇದರಿಂದ ಕೋಪಗೊಂಡ ಆತನ ಸಹೋದರಿ ಮಹಿಷಿ ಸೇಡು ತೀರಿಸಿಕೊಳ್ಳಲು ದೀರ್ಘಕಾಲ ಬ್ರಹ್ಮನನ್ನು ತಪಸ್ಸು ಮಾಡಿ ಒಲಿಸಿಕೊಳ್ಳುತ್ತಾಳೆ ಶಿವ ಮತ್ತು ವಿಷ್ಣುವಿನ ಮಗುವನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಮರಣ ಬರಬಾರದೆಂದು ವರ ಪಡೆಯುತ್ತಾಳೆ. ಶಿವ ಮತ್ತು ವಿಷ್ಣು ಪುರುಷರಾಗಿದ್ದು ಅವರಿಂದ ಮಗು ಹೇಗೆ ಸಾಧ್ಯ, ತಾನು ಅಮರ ಎಂದು ಭಾವಿಸುತ್ತಾಳೆ. ಇದರಿಂದ ಮಹಿಷಿ ಅಟ್ಟಹಾಸ ಮಿತಿಮೀರುತ್ತದೆ. ಮಾನವರು ಮತ್ತು ದೇವಾನುದೇವತೆಗಳನ್ನು ತೊಂದರೆಗೆ ಒಳಪಡಿಸುತ್ತಾಳೆ. ಆಗ ದೇವತೆಗಳು ಶಿವ ಮತ್ತು ವಿಷ್ಣುವಿನ ನೆರವನ್ನು ಪಡೆಯಲು ನಿರ್ಧರಿಸುತ್ತಾರೆ. ಆಗ ವಿಷ್ಣು ಮೋಹಿನಿ ರೂಪವನ್ನು ತಾಳಿ ಶಿವನೊಂದಿಗೆ ಮಿಲನವಾಗಿ ಮಗು ಪಡೆಯಬಹುದು ಎಂದು ನಿರ್ಧರಿಸುತ್ತಾರೆ.

ಹೀಗೆ ಶಿವ ಮತ್ತು ವಿಷ್ಣು ಅವರಿಗೆ ಹುಟ್ಟಿದ ದೈವಿಕ ಮಗುವೇ ಅಯ್ಯಪ್ಪ. ಅಯ್ಯಪ್ಪನನ್ನು ಹುಟ್ಟಿದ ಕೂಡಲೇ ಆತನ ಕೊರಳಿಗೆ ಹಾರ ಹಾಕಿ ಪಂಪಾ ನದಿ ತೀರದಲ್ಲಿ ಬಿಡುತ್ತಾರೆ. ಮಕ್ಕಳಿಲ್ಲದ ರಾಜ ರಾಜಶೇಖರ ನದಿಯ ಹತ್ತಿರ ಸಾಗುತ್ತಿದ್ದಾಗ ಮಗುವಿನ ಅಳುವನ್ನು ಕೇಳಿ ಮಗುವನ್ನು ತೆಗೆದುಕೊಂಡು ಅರಮನೆಗೆ ಹೋಗುತ್ತಾನೆ. ಆ ಮಗುವಿಗೆ ಮಣಿಕಂಠ ಎಂದು ಹೆಸರಿಟ್ಟು ತನ್ನ ಮಗುವೆಂದು ಸಾಕುತ್ತಾನೆ ನಂತರ ರಾಜ ರಾಜಶೇಖರನ ಪತ್ನಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ರಾಜಶೇಖರನಿಗೆ ಮಣಿಕಂಠ ತನ್ನ ಉತ್ತರಾಧಿಕಾರಿಯಾಗಬೇಕೆಂದು ನಿರ್ಧರಿಸುತ್ತಾನೆ. ಇದು ಇಷ್ಟವಿಲ್ಲದ ರಾಣಿ ಅನಾರೋಗ್ಯದ ನಾಟಕವಾಡುತ್ತಾಳೆ. ರಾಣಿಯ ಆಜ್ಞೆಯಂತೆ ವೈದ್ಯರು ಹುಲಿಯ ಹಾಲನ್ನು ಕುಡಿಯುವುದರಿಂದ ರಾಣಿಯ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಇದರಿಂದ ಮಣಿಕಂಠ ಹುಲಿ ಹಾಲನ್ನು ತರಲು ಕಾಡಿಗೆ ಹೋಗುತ್ತಾನೆ ಆಗ ಮಹಿಷಿ ಎದುರಾಗಿ ಇಬ್ಬರ ನಡುವೆ ದೀರ್ಘಕಾಲದ ಕಾಳಗ ಉಂಟಾಗಿ ಅಂತಿಮವಾಗಿ ಮಣಿಕಂಠ ಮಹಿಷಿಯನ್ನು ಕೊಲ್ಲುತ್ತಾನೆ.

ನಂತರ ಶಿವನು ಭೇಟಿಯಾಗುತ್ತಾನೆ ಮಣಿಕಂಠನಿಗೆ ತನ್ನ ಜನ್ಮ ರಹಸ್ಯ ತಿಳಿಯುತ್ತದೆ. ಮಣಿಕಂಠನು ಕಾಡಿನಿಂದ ಅರಮನೆಗೆ ಹೋಗುವುದರೊಳಗೆ ರಾಜಶೇಖರನು ರಾಣಿಯ ಕಪಟ ತಿಳಿದಿರುತ್ತಾನೆ, ಮಣಿಕಂಠನಲ್ಲಿ ಕ್ಷಮೆ ಕೇಳುತ್ತಾನೆ ಮತ್ತು ಅರಮನೆಯಲ್ಲಿ ಉಳಿಯುವಂತೆ ಹೇಳುತ್ತಾನೆ ಆದರೆ ಮಣಿಕಂಠ ಅದನ್ನು ನಿರಾಕರಿಸಿ ರಾಜನಿಗೆ ಸಮಾಧಾನಪಡಿಸಿ ಶಬರಿಮಲೆಯಲ್ಲಿ ಭಕ್ತರ ಒಳಿತಿಗಾಗಿ ನೆಲೆಯೂರುತ್ತಾನೆ. ಅಯ್ಯಪ್ಪ ದೇವರಿರುವ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. 41 ದಿನಗಳ ಉಪವಾಸದ ಬಳಿಕ ಲಕ್ಷಾಂತರ ಭಕ್ತರು ಕಾಲುನಡಿಗೆ ಮೂಲಕ ಶಬರಿಮಲೆಗೆ ಭೇಟಿ ಕೊಡುತ್ತಾರೆ. ಅಯ್ಯಪ್ಪ ದೇವರು ಬ್ರಹ್ಮಚಾರಿ ಅಯ್ಯಪ್ಪ ಯೋಗದ ಭಂಗಿಯಲ್ಲಿ ಕುಳಿತುಕೊಂಡಿದ್ದಾರೆ ಕತ್ತಿನಲ್ಲಿ ಸರ ಹಾಕಿಕೊಂಡಿದ್ದಾನೆ.

ಅಯ್ಯಪ್ಪನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಮಂಡಲ ಪೂಜೆ ನಡೆಯುವಾಗ ಇಡೀ ಬೆಟ್ಟ ಅಯ್ಯಪ್ಪ ದೇವರ ಮಂತ್ರಘೋಷದಿಂದ ತುಂಬಿಹೋಗಿರುತ್ತದೆ. ಭಕ್ತರು ಪಂಪಾ ನದಿಯಲ್ಲಿ ಸ್ನಾನ ಮಾಡಿ 18 ಮೆಟ್ಟಿಲುಗಳನ್ನು ಏರಿ ದೇವಸ್ಥಾನಕ್ಕೆ ಹೋಗಬೇಕು. ಈ ಮೆಟ್ಟಿಲುಗಳು ಮಾನವನ ನಡವಳಿಕೆಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಇದೆ. ಮೊದಲ 5 ಮೆಟ್ಟಿಲುಗಳು ಮಾನವನ ವಿವೇಕವನ್ನು ಪ್ರತಿನಿಧಿಸುತ್ತದೆ, ನಂತರದ ಎಂಟು ಮೆಟ್ಟಿಲುಗಳು ಮಾನವನ ಭಾವನೆಯನ್ನು ಪ್ರತಿನಿಧಿಸುತ್ತದೆ. ನಂತರದ ಮೂರು ಮೆಟ್ಟಿಲುಗಳು ಮಾನವನ ಗುಣಗಳ ಪ್ರತಿಕಾರವಾದರೆ ಕೊನೆಯ ಎರಡು ಮೆಟ್ಟಿಲುಗಳು ಜ್ಞಾನ ಮತ್ತು ಅಜ್ಞಾನದ ಸಂಕೇತವಾಗಿದೆ. ಮಕರ ಸಂಕ್ರಾಂತಿ, ಏಪ್ರಿಲ್ ನಲ್ಲಿ ನಡೆಯುವ ಮಹಾ ಶಿಶು ಸಂಕ್ರಾಂತಿ ಹಾಗೂ ಮಲಯಾಳಂ ಮಾಸದ ಮೊದಲ ಐದು ದಿನ ಅಯ್ಯಪ್ಪ ದೇವರ ದರ್ಶನಕ್ಕೆ ಮುಕ್ತವಾಗಿರುತ್ತದೆ.

Leave a Comment

error: Content is protected !!