ಪುನೀತ್ ಆ ಸಿನಿಮಾದಲ್ಲಿ ಕೊಟ್ಟ ಒಳ್ಳೆ ಸಂದೇಶ ನೋಡಿ, 200 ಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ದಾಶ್ರಮದಿಂದ ವಾಪಸ್ ಕರೆದುಕೊಂಡು ಹೋಗ್ತಾರೆ ಆ ಸಿನಿಮಾ ಯಾವುದು ಗೊತ್ತಾ

See the good message given by Puneeth in that movie, more than 200 children take their parents back from the old age home. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಕೂಡ ಪಕ್ಕಾ ಫ್ಯಾಮಿಲಿ ಒಟ್ಟಾಗಿ ಕುಳಿತುಕೊಂಡು ನೋಡುವಂತಹ ಸಿನಿಮಾವನ್ನೇ ನಾಯಕ ನಟನಾಗಿ ಮಾಡುತ್ತಿದ್ದರು. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಕೌಟುಂಬಿಕ ಪ್ರೇಕ್ಷಕರ ನೆಚ್ಚಿನ ನಾಯಕ ನಟ ಎಂಬುದಾಗಿ ಕರೆಯಲಾಗುತ್ತಿತ್ತು. ಅದರಲ್ಲೂ ಇಂತಹ ಸಿನಿಮಾಗಳಲ್ಲಿ ವಿಶೇಷವಾಗಿ ರಾಜಕುಮಾರ ಸಿನಿಮಾ ವಿಭಿನ್ನವಾಗಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಯಾಕೆಂದರೆ ರಾಜಕುಮಾರ ಸಿನಿಮಾ ನಿಜಕ್ಕೂ ವಿಶೇಷ ಸಿನಿಮಾ ಆಗಿತ್ತು.

Rajkumar ರಾಜಕುಮಾರ ಸಿನಿಮಾಗೆ ತಂದೆಯವರ ಹೆಸರನ್ನು ನೀಡಿದ್ದು ಕೂಡ ಅರ್ಥಪೂರ್ಣವಾಗಿತ್ತು. ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವಂತಹ ಈ ಸಿನಿಮಾವನ್ನು ನೋಡಿ ನಿಜ ಜೀವನದಲ್ಲಿ ಕೂಡ ಹಲವಾರು ಮಂದಿ ಪ್ರೇರೇಪಣೆಗೊಂಡು ಬದಲಾದವರಿದ್ದಾರೆ. ರಾಜಕುಮಾರ ಸಿನಿಮಾ ನೋಡಿ ಅದೆಷ್ಟೋ ಜನರು ವೃದ್ಧಾಶ್ರಮದಲ್ಲಿದ್ದ ತಮ್ಮ ತಂದೆ ತಾಯಿಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಮಟ್ಟಿಗೆ ಸಮಾಜದಲ್ಲಿ ರಾಜಕುಮಾರ ಸಿನಿಮಾ ನಿಜವಾದ ಪರಿಣಾಮವನ್ನು ಬೀರಿತು. ರಾಜಕಾರಣಿಗಳು ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರೂ ಕೂಡ ಈ ಸಿನಿಮಾ ನೋಡಿ ಕಣ್ಣೀರು ಹಾಕಿದ್ದರು.

ಎಲ್ಲಕ್ಕಿಂತ ವಿಶೇಷವಾಗಿ 200ಕ್ಕೂ ಅಧಿಕ ಮಂದಿ ವೃದ್ಧಾಶ್ರಮದಲ್ಲಿ ಇದ್ದಂತಹ ತಮ್ಮ ತಂದೆ ತಾಯಿಗಳನ್ನು ಮನೆಗೆ ಕರೆದುಕೊಂಡು ಬಂದು ಮತ್ತೆ ಸಾಕಲು ಪ್ರಾರಂಭಿಸಿದ್ದರು. ಕೇವಲ ಒಂದು ತೆರೆಯ ಮೇಲೆ ಮೂಡಿಬರುವಂತಹ ಸಿನಿಮಾ ಇಷ್ಟೊಂದು ಬದಲಾವಣೆ ಮಾಡುತ್ತದೆ ಅಂದರೆ ಅದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟನೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಕೇವಲ ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಆಲ್ ಟೈಮ್ ಇಂಡಸ್ಟ್ರಿ ಹಿಟ್ ಸಿನಿಮಾ ರಾಜಕುಮಾರ ಈ ರೀತಿಯ ಸಕಾರಾತ್ಮಕ ಸಾಮಾಜಿಕ ಬದಲಾವಣೆಗೂ ಕೂಡ ಮೂಲ ರಹದಾರಿಯಾಗಿ ಪರಿಣಮಿಸಿದೆ ಎಂದರು ತಪ್ಪಾಗಲಾರದು.

ಅಭಿಮಾನಿಯ ಕೈಯಲ್ಲಿ ಅಪ್ಪು ಅವರ ಟ್ಯಾಟೂ ನೋಡಿ ಪಿಧಾ ಆದ ಯುವರಾಜಕುಮಾರ್

ಇಂತಹ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಲ್ಲದೆ ಬೇರೆ ಯಾರು ಕೂಡ ಕನ್ನಡ ಇಂಡಸ್ಟ್ರಿಗೆ ನೀಡಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ಅಪ್ಪು ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ಮಾಪಕರಾಗಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರಿಗೆ ಧನ್ಯವಾದಗಳು ಸಲ್ಲಿಸಬೇಕು. ರಾಜಕುಮಾರ ಸಿನಿಮಾದ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Comment

error: Content is protected !!