Rakshit Shetty ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

Rakshit Shetty ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ದಲ್ಲಿ ಕೇವಲ ಒಬ್ಬ ಸಾಮಾನ್ಯ ನಟನಾಗಿರದೆ ಎ ದರ್ಜೆಯ(A Grade) ಸ್ಟಾರ್ ನಟರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ 777 ಚಾರ್ಲಿ ಸಿನಿಮಾ ಬಹುಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡು 100 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತ್ತು. ಇನ್ನು ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಇದಾದ ನಂತರ ಕುತೂಹಲ ಹೆಚ್ಚಿದೆ ಎಂದು ಹೇಳಬಹುದು.

ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಗಾಳಿ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸ್ವತಹ ನಟ ರಕ್ಷಿತ್ ಶೆಟ್ಟಿ ಅವರೇ ತೆರೆಯನ್ನು ಎಳೆಯುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗಿದ್ದರೆ ಬನ್ನಿ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಬಿಚ್ಚಿಟ್ಟಿರುವ ರಹಸ್ಯವನ್ನು ಸಂಪೂರ್ಣವಾಗಿ ತಿಳಿಯೋಣ. ಸದ್ಯಕ್ಕೆ ಸಪ್ತಸಾಗರದ ಆಚೆ ಎಲ್ಲೋ ಸಿನಿಮಾದ ಬಿಡುಗಡೆಗಾಗಿ ರಕ್ಷಿತ್ ಶೆಟ್ಟಿ ಅವರು ಎದುರು ನೋಡುತ್ತಿದ್ದಾರೆ.

Rakshit Shetty

ಇದಾದ ನಂತರ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರಲಿರುವ ರಿಚರ್ಡ್ ಆಂಥೋನಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲಿದ್ದು ಅದಾದ ನಂತರ ಪುಣ್ಯಕೋಟಿ ಸರಣಿ ಎರಡು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಇದಾದ ನಂತರ ರಕ್ಷಿತ್ ಶೆಟ್ಟಿ ಅವರು ಮಿಡ್ ವೇ ಟು ಮೋಕ್ಷ ಎನ್ನುವ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುವ ಕುರಿತಂತೆ ಟ್ವಿಟರ್(Twitter) ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಪ್ರತಿಯೊಬ್ಬರೂ ಕೂಡ ಕಿರಿಕ್ ಪಾರ್ಟಿ ಸಿನಿಮಾದ ಎರಡನೇ ಭಾಗದ ಕುರಿತಂತೆ ಕೂಡ ರಕ್ಷಿತ್ ಶೆಟ್ಟಿ ಅವರ ಬಳಿ ಬೆಂಬಿಡದಂತೆ ಪ್ರಶ್ನೆಯನ್ನು ಕೇಳುತ್ತಿದ್ದರು ಇದಕ್ಕೂ ಕೂಡ ರಕ್ಷಿತ್ ಶೆಟ್ಟಿ ಅವರು ಉತ್ತರವನ್ನು ನೀಡಿದ್ದಾರೆ. ಹೌದು ಮಿತ್ರರೇ, ರಕ್ಷಿತ್ ಶೆಟ್ಟಿ ಅವರು ಇದರ ಕುರಿತಂತೆ ಮಾತನಾಡುತ್ತಾ ಸದ್ಯಕ್ಕಂತೂ ಕಿರಿಕ್ ಪಾರ್ಟಿ ಸಿನಿಮಾದ ಎರಡನೇ ಭಾಗವನ್ನು ಮಾಡುವ ಯೋಜನೆಯನ್ನು ಮಾಡಿಲ್ಲ ಆದರೆ ಈ ಬಗ್ಗೆ ಉತ್ತಮ ಯೋಜನೆಯೊಂದಿಗೆ ನಾವು ನಿಮ್ಮ ಮುಂದೆ ಬರುತ್ತೇವೆ ಎಂಬುದಾಗಿ ಭರವಸೆಯನ್ನು(Promised) ನೀಡಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಇದ್ದಂತಹ ವದಂತಿಗಳಿಗೆ ಪರಿಹಾರಾತ್ಮಕ ಉತ್ತರವನ್ನು ನೀಡಿದ್ದಾರೆ.

Leave a Comment

error: Content is protected !!