ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿ ನಟ ನಿರ್ಮಾಪಕ ನಿರ್ದೇಶಕನಾಗಿ ನಟ ರಾಮ್ ಕುಮಾರ್ ಅವರು ಮಿಂಚಿದ್ದಾರೆ.ಇವರು ಪ್ರಖ್ಯಾತ ನಟ ಹಾಗೂ ನಿರ್ದೇಶಕ ಶೃಂಗಾರ ರಾಜ್ ಅವರ ಸುಪುತ್ರ. 1990 ರಲ್ಲಿ ತೆರೆಕಂಡ ಆವೇಶ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು ನಂತರ ಗೆಜ್ಜೆನಾದ ಚಿತ್ರದ ಮೂಲಕ ನಾಯಕ ನಟ ಆಗಿ ಅಭಿನಯಿಸಿದರು. ಮುಂದೆ ಹಲವಾರು ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ ಅವುಗಳಲ್ಲಿ ಕಾವ್ಯ ತಾಯಿ ಇಲ್ಲದ ತವರು ಹಬ್ಬ ಸ್ನೇಹಲೋಕ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪಂಜಾಬಿ ಹೌಸ್ ಪಾಂಡವರು ಮುಂತಾದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸದ್ದಾರೆ.

ಇಡೀ ಕನ್ನಡ ಚಿತ್ರರಂಗದ ಶೋಕ ಸಾಗರದಲ್ಲಿ ಮುಳುಗಿದ್ದ ದಿನ ನಮ್ಮೆಲ್ಲರ ಅಚ್ಚುಮೆಚ್ಚಿನ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ ದಿನ ಈ ಘಟನೆಯಿಂದಾಗಿ ರಾಜ್ ಕುಮಾರ್ ಫ್ಯಾಮಿಲಿ ನೋವಿನಿಂದ ಇನ್ನೂ ಹೊರಬಂದಿಲ್ಲ ಅವರ ಅಂತ್ಯಸಂಸ್ಕಾರ ತಿಥಿ ಹಾಗೂ ಪ್ರಶಸ್ತಿ ಮತ್ತು ಯಾವುದೇ ಸಮಾರಂಭದಲ್ಲಿ ರಾಮ್ ಕುಮಾರ್ ಅವರು ಜಾಸ್ತಿ ಕಾಣಿಸಿಕೊಂಡಿಲ್ಲ. ನಿಜ ರಾಮ್ ಕುಮಾರ್ ಅವರು ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ವರಿಸಿದ್ದು ರಾಜ್ ಕುಮಾರ್ ಅವರ ಅಳಿಯ ಆದರೂ ಸಹ ಅವರ ಯಾವುದೇ ಫ್ಯಾಮಿಲಿಯ ಸಮಾರಂಭದಲ್ಲಿ ಕಾಣುವುದಿಲ್ಲ ಹಾಗೆ ಎಲ್ಲೂ ನಾನು ರಾಜ್ ಕುಮಾರ್ ಅಳಿಯ ಎಂದು ಬಹಿರಂಗ ಮಾಡಿಲ್ಲ ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸು ಪಡೆದಿದ್ದಾರೆ.

ಪೂರ್ಣಿಮಾ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಆದರೆ ಕೆಲವೊಮ್ಮೆ ಶೂಟಿಂಗ್ ಸ್ಥಳಕ್ಕೆ ತಮ್ಮ ಪುನೀತ್ ಶಿವರಾಜಕುಮಾರ್ ಜೊತೆ ಹೋಗುತಿದ್ದ ಸಂದರ್ಭದಲ್ಲಿ ರಾಮ್ ಕುಮರ್ ಅವರ ಪರಿಚಯ ಆಗಿದ್ದು ಕ್ರಮೇಣ ಪ್ರೀತಿಯಾಗಿ ಬದಲಾಗುತ್ತೆ ಇದನ್ನು ಪೂರ್ಣಿಮಾ ಹೆತ್ತವರು ಒಪ್ಪಲಿಲ್ಲ ಕೊನೆಗೆ ಫ್ಯಾಮಿಲಿಯವರ ವಿರೋಧದ ನಡುವೆ ಇಬ್ಬರು ವಿವಾಹವಾದರು ಇದರಿಂದ ಸುಮಾರು ಎರಡು ವರ್ಷ ರಾಜ್ ಕುಮಾರ್ ಫ್ಯಾಮಿಲಿ ಯಿಂದ ದೂರವಾಗಿ ಸಂಸಾರ ನಡೆಸುತ್ತಾ ಇದ್ದರು ಇಂಥ ವೇಳೆಯಲ್ಲಿ ರಾಮ್ ಕುಮಾರ್ ಅವರು ಬಹಳ ಚಿತ್ರದ ಅವಕಾಶವನ್ನು ಕಳೆದುಕೊಂಡರು.

ಕೊನೆಗೆ ಸಿನಿಮಾ ರಂಗದಿಂದ ಆಚೆ ಬಂದರು ನಂತರ ಇವರ ಮಗ ಧೀರೇಂದ್ರ ರಾಮ್ ಕುಮಾರ್ ಅವರು ಹುಟ್ಟಿ ಒಂದು ವರ್ಷದ ಮೇಲೆ ಮದುವೆಯನ್ನು ಒಪ್ಪಿ ಮನೆಗೆ ಸೇರಿಸಿಕೊಂಡರು ಇವರು ತುಂಬಾ ವರ್ಷಗಳ ಬಳಿಕ ಪುನೀತ್ ಭೇಟಿಯಾದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಬಹಳ ವೈರಲ್ ಆಗಿತ್ತು. ಇನ್ನೂ ಇವರು ಜಾಸ್ತಿ ಯಾರ್ ಜೊತೆಯೂ ಕಾಣಿಸಿಕೊಂಡಿಲ್ಲ.

ಇವರಿಗೆ ಇಬ್ಬರು ಮಕ್ಕಳು ಇದ್ದು ಧೀರೇಂದ್ರ ರಾಮ್ ಕುಮಾರ್ ಮಗನಾಗಿದ್ದು ಧನ್ಯ ರಾಮ್ ಕುಮಾರ್ ಇತ್ತೀಚಿಗೆ ನಿನ್ನ ಸನಿಹಕ್ಕೆ ಚಿತ್ರೀಕರಣ ಪ್ರೆಸ್ ಮೀಟ್ ವೇಳೆಯಲ್ಲಿ ಕಾಣಿಸಿಕೊಂಡಿದ್ದರು ಅದನ್ನು ಬಿಟ್ಟು ಬೇರೆ ಯಾವುದೇ ಸಮಾರಂಭದಲ್ಲಿ ಕಾಣಿಸಲಿಲ್ಲ . ತಮ್ಮ ಮಗಳು ಕೂಡ ಇತ್ತೀಚೆಗೆ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ ಇಷ್ಟೆಲ್ಲಾ ಜಂಜಾಟ ಇದ್ದರೂ ರಾಮ್ ಕುಮಾರ್ ಅವರು ಸಿನಿಮಾರಂಗ ಹಾಗೂ ರಾಜ್ ಕುಮಾರ್ ಕುಟುಂಬದಿಂದ ಅಂತರ ಕಾಯ್ದುಕೊಂಡು ಇದ್ದಾರೆ ‌ ಹಾಗಂತ ಅನೋನ್ಯತೆ ಪ್ರೀತಿ ವಿಶ್ವಾಸ ಹಾಗೆ ಇದೆ. ಹಾಗಾಗಿ ಜೇಮ್ಸ್ ಸಿನಿಮಾ ಬಿಡುಗಡೆ ವೇಳೆಯಲ್ಲಿ ಕಾಣಿಸಿಕೊಂಡಿಲ್ಲ.

By admin

Leave a Reply

Your email address will not be published.