ಶಿವಣ್ಣನ ವೇದ ಸಿನಿಮಾದಲ್ಲಿ ಅಪ್ಪು ಎಂಟ್ರಿ. ಏನಿದು ಹೊಸ ಸುದ್ಧಿ?

Puneet rajkumar in veda movie : ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಹಾಗೂ ಅವರ ಪತ್ನಿಯಾಗಿರುವ ಗೀತಕ್ಕ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ವೇದ ಸಿನಿಮಾ ಶಿವಣ್ಣ ಅವರ 125 ಸಿನಿಮಾ ಆಗಿದ್ದು ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಜನಭರಿತ ಪ್ರದರ್ಶನವನ್ನು ಕಾಣುತ್ತಿದೆ. ನಿಜಕ್ಕೂ ಇದೊಂದು ಅತ್ಯುನ್ನತ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಹಾಗೂ ಸಮಾಜದಲ್ಲಿ ಈಗ ನಡೆಯುತ್ತಿರುವಂತಹ ಕೆಲವೊಂದು ವಿಚಾರಗಳ ವಿರುದ್ಧ ಧ್ವನಿಯೆತ್ತುವಂತಹ ಕಾರ್ಯವನ್ನು ಈ ಸಿನಿಮಾ ಮಾಡಿದೆ ಎಂದರೆ ತಪ್ಪಾಗಲಾರದು.

ಕೇವಲ ಜನರ ಮೆಚ್ಚುಗೆಯ ವಿಚಾರದಲ್ಲಿ ಮಾತ್ರವಲ್ಲದೆ Box Office Collection ವಿಚಾರದಲ್ಲಿ ಕೂಡ ಶಿವಣ್ಣ ಹಾಗೂ ಈ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ವೇದ ಸಿನಿಮಾ ಸಾಕಾತ್ ಆಗಿಯೇ ಮಾಡುತ್ತಿದೆ. ಕೇವಲ ಕಮರ್ಷಿಯಲ್ ಮಸಾಲೆ ಸಿನಿಮಾಗಳನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಇದೊಂದು ಪಕ್ಕ ಮನೋರಂಜನಾತ್ಮಕ ಸಾಮಾಜಿಕ ಸಂದೇಶವನ್ನು ಹಾಗೂ ಕಳಕಳಿಯನ್ನು ಹೊಂದಿರುವಂತಹ ಸಿನಿಮಾ ಆಗಿ ಇಷ್ಟ ಆಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Puneet rajkumar in veda movie

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಚಾರಕ್ಕೆ ಬಂದರೆ ಗಂಧದಗುಡಿ ಅವರ ಕೊನೆಯ ಸಿನಿಮಾ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಆದರೆ ಶಿವಣ್ಣ ಅವರ 125ನೇ ಸಿನಿಮಾ ಆಗಿರುವ ವೇದದಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಪರದೆ ಮೇಲೆ ವೇದ ಸಿನಿಮಾವನ್ನು ನೋಡುವಾಗ ಅಪ್ಪು ಅವರನ್ನು ನೋಡಿ ಅಭಿಮಾನಿಗಳು ಜಯ ಘೋಷ ಹಾಕಿರುವ ವಿಡಿಯೋ ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ Viral ಆಗುತ್ತಿದೆ.

ಹೌದು ಮಿತ್ರರೇ ವೇದ ಸಿನಿಮಾದಲ್ಲಿ ಅಪ್ಪು ಅವರಿಗೆ ಗೌರವ ಸೂಚಿಸುವ ಸಲುವಾಗಿ ವೇದ ಚಿತ್ರತಂಡ ಚಿತ್ರದ ಆರಂಭದಲ್ಲಿ ಅವರ ಬಗ್ಗೆ ವಿಶೇಷ ವಿಡಿಯೋ ಒಂದನ್ನು ಹಾಕಿದೆ. ಇದನ್ನು ನೋಡಿರುವ ರಾಜ್ ಕುಟುಂಬದ ಅಭಿಮಾನಿಗಳು ಭಾವುಕರಾಗಿ ಸಂತೋಷಪಟ್ಟು ಅಪ್ಪುವಿಗೆ ಜಯ ಘೋಷವನ್ನು ಕೂಗಿದ್ದಾರೆ. ನೀವು ಕೂಡ ವೇದ ಸಿನಿಮಾವನ್ನು ನೋಡಿದ್ದರೆ ತಪ್ಪದೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!